ಸ್ಪರ್ಧಾತ್ಮಕ ಪರಿೆಗಳ ತರಬೇತಿ ಕೇಂದ್ರ ಪ್ರಬುದ್ಧ ಅಕಾಡೆಮಿ ಕಳಪೆ ಕಾಮಗಾರಿ ಸೇರಿ ಜಿಲ್ಲೆಯಲ್ಲಿ ಲ್ಯಾಂಡ್ ಆರ್ಮಿ ಕೈಗೊಂಡಿರುವ ಎಲ್ಲಾ ಕಾಮಗಾರಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಟನೆಗಳ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆಯ ಕಚೇರಿ ಎದುರು ಎದುರು ಮಂಗಳವಾರ ಧರಣಿ ನಡೆಸಿದರು. ಎಂ.ಎಸ್.ಪಾಟೀಲ್ ನರಿಬೋಳ, ಲಕ್ಷಿ$್ಮಕಾಂತ ಸ್ವಾದಿ, ಹುಚ್ಚೇಶ್ವರ ವಠಾರ, ಪದ್ಮಾಜಿ ಗೌಳಿ, ಶಂಕರ ವಡಿಗೇರಿ ಇತರರಿದ್ದರು.
- ಲ್ಯಾಂಡ್ ಆರ್ಮಿ ಕಾಮಗಾರಿ ಕಳಪೆ
ಕಲಬುರಗಿ: ಸ್ಪರ್ಧಾತ್ಮಕ ಪರಿೆಗಳ ತರಬೇತಿ ಕೇಂದ್ರ ಪ್ರಬುದ್ಧ ಅಕಾಡೆಮಿ ಕಳಪೆ ಕಾಮಗಾರಿ ಸೇರಿ ಜಿಲ್ಲೆಯಲ್ಲಿ ಲ್ಯಾಂಡ್ ಆರ್ಮಿ ಕೈಗೊಂಡಿರುವ ಎಲ್ಲಾ ಕಾಮಗಾರಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಟನೆಗಳ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆಯ ಕಚೇರಿ ಎದುರು ಎದುರು ಮಂಗಳವಾರ ಧರಣಿ ನಡೆಸಿದರು.
ಕಲಬುರಗಿ ಜಿಲ್ಲೆಯಲ್ಲಿ ಬ್ರಷ್ಟಾಚಾರ ತಾಂಡವಾಡುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರಿೆ ಬರೆಯುವ ವಿಧ್ಯಾಥಿಗಳಿಗೆ ಅನೂಕುಲ ಮಾಡಿಕೊಡುವ ಉದ್ದೇಶದಿಂದ 30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪ್ರಬುದ್ಧ ಅಕಾಡೆಮಿ ನಿರ್ಮಾಣ ಮಾಡಿ ಉದ್ಘಾಟನೆಯೂ ಆಗಿದೆ. ಆದರೆ ಉದ್ಘಾಟನೆಯಾದ ಒಂದೇ ತಿಂಗಳಲ್ಲಿ ಮೆಲ್ಛಾವಣಿ ಕುಸಿದುಬಿದ್ದಿದೆ. ಇತ್ತೀಚಿಗೆ ಪಾರ್ಕಿಂಗ್ ಶೆಡ್ ಕುಸಿದುಬಿತ್ತು. ಇದೆಲ್ಲವನ್ನೂ ಗಮನಿಸಿದಾಗ ಕಳಪೆ ಕಾಮಗಾರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ದೂರಿದರು.
ಲ್ಯಾಂಡ್ ಆರ್ಮಿ ವತಿಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗಳಲ್ಲಿ ಕಳಪೆ ಆಗಿದೆ ಎನ್ನಲಾಗುತ್ತಿದೆ. ಪ್ರಬುದ್ದ ಅಖಾಡೆಮಿ ಕಾಮಗಾರಿ ಸೇರಿ ಜಿಲ್ಲೆಯಲ್ಲಿ ಲ್ಯಾಂಡ್ ಆರ್ಮಿ ವತಿಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿ ಕುರಿತು ಸಿಬಿಐ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ದೂರು ದಾಖಲಿಸಬೇಕು. ಗುತ್ತಿಗೆದಾರರ ಲೈಸನ್ಸ್ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಮನವಿಪತ್ರವನ್ನು ಅವರ ಕಚೇರಿ ಪ್ರತಿನಿಧಿಗೆ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಲಕ್ಷಿ$್ಮಕಾಂತ ಸ್ವಾದಿ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಹುಚ್ಚೇಶ್ವರ ವಠಾರ, ಪದ್ಮಾಜಿ ಗೌಳಿ, ಶಂಕರ ವಡಿಗೇರಿ, ಶರಣು ಆವಂಟಿ, ಆನಂದ ಭಜಂತ್ರಿ, ರವಿ ಬಜಂತ್ರಿ, ಚನ್ನು ಸಿಗಿ, ಪ್ರಶಾಂತ ಶಿರೂರ್, ವಿನಾಯಕ ಮುಗಳಿ, ವಿನಯ ಶಹಾಪೂರ್ ಇತರರಿದ್ದರು.