BJP PROTEST 
ರಾಜ್ಯ

ವಿತ್ತ ಸಚಿವೆ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ

ರಾಯಚೂರು ಮುಖ್ಯಮಂತ್ರಿ ಸಿದ್ದರಾಯ್ಯನವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕುರಿತು ನೀಡಿರುವ ಅವಹೇಳನ ಹೇಳಿಕೆ ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಘಟಕದಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಪರಶುರಾಮಗೆ ಮನವಿ ಸಲ್ಲಿಸಿದರು.
ಪುರಾಣ ಕಾಲದಿಂದಲೂ ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುವ ದೇಶದಲ್ಲಿ ಮಹಿಳೆಯರಿಗೆ ಗೌರವ ಮತ್ತು ಘನತೆಗೆ ಧಕ್ಕೆ ಉಂಟಾಗುವಂತ ಕೆಲಸ ನಡೆಯುತ್ತಿವೆ. ರಾಜ್ಯದ ಮುಖ್ಯಮಂತ್ರಿಯಾಗಿ ಮಹಿಳೆಯರ ಬಗ್ಗೆ ಏಕವಚನದಲ್ಲಿ ಮಾತನಾಡಿವುದು ಅದರಲ್ಲಿ ಕೇಂದ್ರ ವಿತ್ತ ಸಚಿವೆ ವಿರುದ್ಧ ಮಾತನಾಡಿ ಘನತೆಗೆ ಧಕ್ಕೆ ಉಂಟಾ ಮಾಡಿದ್ದಾರೆಂದು ದೂರಿದರು.ಮಹಿಳೆಯರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವಿದ್ದರೆ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಗುಣ.ಕೆ., ಶರಣಮ್ಮ ಕಾಮರೆಡ್ಡಿ, ಜಿಲ್ಲಾಧ್ಯಕ್ಷೆ ಕಡಗೋಲ್ ಲಲಿತಾ, ಪ್ರಮುಖರಾದ ವಾಣಿಶ್ರೀ, ಸತ್ಯ, ರೇಣುಕಾ ಪೂಜಾರ, ಮಲ್ಲಮ್ಮ, ಶ್ರೀದೇವಿ, ಸೀತಾ ನಾಯಕ, ಅಶ್ವಿನಿ ಎ., ಮುಕ್ತಾಂಗಿ, ಜಯಶ್ರೀ, ಧನಲಕ್ಷ್ಮೀ, ಪದ್ಮಾವತಿ, ಉಮಾದೇವಿ, ಡಿ.ಶರಣಮ್ಮ, ಚಂದ್ರವತಿ, ಸಾವಿತ್ರಿ, ಸುಜಾತ ಕೆ., ಜ್ಯೋತಿ, ಪಾರ್ವತಮ್ಮ, ಭಾಗ್ಯಮ್ಮ, ನಿವೇದಿತಾ, ಅನಿತಾ ನವಲಕಲ್, ಈ.ಶಶಿರಾಜ, ವಿಜಯ ಕುಮಾರ ಸೇರಿ ಅನೇಕರು ಇದ್ದರು.