ಗ್ರಾಮ ಆಡಳಿತಾಧಿಕಾರಿ ಮಹಾದೇವ ಪಿಲ್ಲಂಗೋಲೆ ಆತ್ಮಹತ್ಯೆಗೆ ಕಾರಣರಾಗಿರುವ ಮೇಲಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂದಿಂದ ಬಸವಕಲ್ಯಾಣ ತಹಸಿಲ್ ಎದುರು ಶುಕ್ರವಾರ ಧರಣಿ ನಡೆಯಿತು.
- ಮಹಾದೇವ ಪಿಲ್ಲಂಗೋಲೆ ಆತ್ಮಹತ್ಯೆ ಪ್ರಕರಣ
- ಮೇಲಧಿಕಾರಿಗಳ ವಿರುದ್ಧ ಕ್ರಮಕೆ ಒತ್ತಾಯ
ಗ್ರಾಮ ಆಡಳಿತಾಧಿಕಾರಿ ಮಹಾದೇವ ಪಿಲ್ಲಂಗೋಲೆ ಆತ್ಮಹತ್ಯೆಗೆ ಕಾರಣರಾದ ಮೇಲಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಗ್ರಾಮ ಆಡಳಿತಾಧಿಕಾರಿಗಳ ಸಂದ ತಾಲೂಕು ಟಕದಿಂದ ತಹಸಿಲ್ ಕಚೇರಿ ಎದುರು ಶುಕ್ರವಾರ ಧರಣಿ ನಡೆಯಿತು.
ಕೆಲಸದ ಒತ್ತಡ ಹಾಗೂ ಮೇಲಧಿಕಾರಿಗಳ ಕಿರುಕುಳದಿಂದಲೇ ಮಹಾದೇವ ಆತ್ಮಹತ್ಯೆ ಮಡಿಕೊಂಡಿದ್ದಾರೆ ಎಂದು ಸಂದ ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್ ನೇತೃತ್ವದಲ್ಲಿ ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಇ&ಪೌತಿ ಖಾತಾ ಯೋಜನೆ ಜಾರಿ ಸಂದರ್ಭದಲ್ಲಿ ಬಸವಕಲ್ಯಾಣ ಮತ್ತು ಹುಲಸೂರು ತಹಸೀಲ್ದಾರರು ಅನಗತ್ಯ ಒತ್ತಡ ಹೇರಿದ್ದು, ಪ್ರತಿದಿನ ನಿಗದಿತ ಸಂಖ್ಯೆ ಪ್ರಕರಣಗಳನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಅಮಾನತು ಮಾಡುವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದರು.
ರಾಜ್ಯ ಉಪಾಧ್ಯಕ್ಷ ಹರೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ್, ರಾಜ್ಯ ಖಜಾಂಚಿ ರಾಜು ಕನ್ನವ್ವರ್, ಬೀದರ್ ಜಿಲ್ಲಾಧ್ಯಕ್ಷ ಬಬ್ರುವಾಹನ ಬೆಳಮಗಿ, ತಾಲೂಕು ಅಧ್ಯಕ್ಷ ಕಾಶೀನಾಥ ಚಂಡಕಾಪುರೆ, ಕಂದಾಯ ನೌಕರರ ಸಂದ ಜಿಲ್ಲಾಧ್ಯಕ್ಷ ರಾಹುಲ್ ದೇವ್ ಇತರರಿದ್ದರು.
ಗ್ರಾಮ ಆಡಳಿತಾಧಿಕಾರಿ ಮಹಾದೇವ ಆತ್ಮಹತ್ಯೆಗೆ ಕೆಲಸದ ಒತ್ತಡ ಹೇರುವ ಜತೆಗೆ ಮಾನಸಿಕ ಕಿರುಕುಳ ನೀಡಿರುವ ಅಧಿಕಾರಿಗಳೇ ನೇರ ಕಾರಣರು. ಇಲಾಖಾ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು.
ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂ