gururaj 
ರಾಜ್ಯ

ಗ್ರಾಕೂಸ್‌ನಿಂದ ಡಿ.22 ರಂದು ಪ್ರತಿಭಟನೆ

ರಾಚಯ್ಯ ಸ್ವಾಮಿ
ರಾಯಚೂರು ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯ ಯೋಜನೆಯನ್ನು ‘ಜಿ ರಾಮ ಜೀ ಯೋಜನೆ ’ಎಂದು ಬದಲಾವಣೆ ಮಾಡಿದ ಕೇಂದ್ರ ಸರ್ಕಾರ ಕ್ರಮವನ್ನು ವಿರೋಧಿಸಿ ಡಿ.22 ರಂದು ಗ್ರಾಮೀಣ ಕೂಲಿಕಾರರ ಸಂಘದಿಂದ ಸಂಸದರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುತ್ತದೆಮದು ಸಂಘದ ಜಿಲ್ಲಾ ಸಂಚಾಲಕ ಗುರುರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಷ್ಕರಿಸಿ ನೂರು ದಿನ ಬದಲು 125 ದಿನಗಳಿಗೆ ಹೆಚ್ಚಿಸಿರುವ ಕೇಂದ್ರ ಸರ್ಕರ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತಗೊಳಸಿದೆ. ಈ ಮೊದಲು ಕೇಂದ್ರದಿಂದ ಶೇ.90 ರಷ್ಟು ಹಾಗೂ ರಾಜ್ಯಗಳಿಂದ ಶೇ.10 ರಷ್ಟು ಅನುದಾನದಲ್ಲಿ ಜಾರಿಗೊಳಿಸುತ್ತಿದ್ದ ಯೋಜನೆಯನ್ನು ಈಗ 60;40 ಅನುಪಾತದಲ್ಲಿ ಜಾರಿಗೆ ಮುಂದಾಗಿದೆ.
ನೂರು ದಿನ ಕೆಲಸ ನಿಗಧಿಪಡಿಸಿದ್ದಾಗಲೇ 60 ದಿನ ಕೆಲಸ ನೀಡಲು ಆಗಿಲ್ಲ. ಅನುದಾನವೇ ಕಡಿತಗೊಳಿಸಿದ್ದರಿಂದ ಉದ್ಯೋಗ ಖಾತ್ರಿಯೇ ಅರ್ಥ ಕಳೆದುಕೊಳ್ಳುವಂತಾಗಲಿದೆ. ಉದ್ಯೋಗ ಖಾತ್ರಿ ಕಾಯ್ದೆಯನ್ನು ತಿದ್ದುಪಡಿಯಿಂದ ಬೇಡಿಕೆ ಆಧಾರದ ಬದಲು ಪೂರೈಕೆ ಆಧಾರದ ಮೇಲೆ ಜಾರಿಗೊಳಿಸಿ ಕಾರ್ಮಿಕ ಹಕ್ಕು ಕಸಿಯುವ ಪ್ರಯತ್ನಕ್ಕೆ ಮುಂದಾಗಿದೆಂದು ಆರೋಪಿಸಿದರು.
ವಿಕೇಂದ್ರಿಕರಣ ವ್ಯವಸ್ಥೆಯನ್ನು ಗಾಳಿಗೆ ತೂರಿ ಗ್ರಾಮಸಭೆ ಅಧಿಕಾರವೂ ಕಿತ್ತಿಕೊಂಡಿದೆ. ಮಹಿಳೆಯರು, ಕೂಲಿ ಕಾರ್ಮಿಕರು ನಂಬಿಕೊಂಡಿದ್ದ ಉದ್ಯೋಗಖಾತ್ರಿ ಕಳೆದುಕೊಂಡಂತಾಗಿದೆ. ಕೂಡಲೇ ಮಸೂದೆ ರದ್ದಿಗೆ ಆಗ್ರಹಿಸಿ ರಾಜ್ಯದ ಎಲ್ಲ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಗಟ್ಟೂರು, ಮಾರೆಮ್ಮ, ರೂಪಾ, ಹುಚ್ಚಮ್ಮ ಇದ್ದರು.