ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನ ಮಾಡಿದ ಘಟನೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬಸವಕಲ್ಯಾಣದ ಅಂಬೇಡ್ಕರ್ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ರವೀಂದ್ರ ಗಾಯಕವಾಡ, ದಿಲೀಪ ಶಿಂಧೆ, ಸುರೇಶ ಮೋರೆ, ಮನೋಹರ್ ಮೈಸೆ, ರವೀಂದ್ರ ಬೋರಾಳೆ, ಅನ್ನಪೂರ್ಣಬಾಯಿ ಅಂಬಾರಾಯ, ಅನಸೂಯಾ ಮಂಠಾಳಕರ್, ತಹಸಿನ್ ಅಲಿ ಜಮಾದಾರ, ಸುಧಾಕರ್ ಗುರ್ಜರ, ಯುವರಾಜ ಭೆಂಡೆ, ನಾಗನಾಥ ಮೇತ್ರೆ ಇತರರಿದ್ದರು.
- ಎಐಸಿಸಿ ಅಧ್ಯಕ್ಷ ಖರ್ಗೆ ಅವಮಾನಕ್ಕೆ ಖಂಡನೆ
- ಬಿಜೆಪಿ, ಆರ್ಎಸ್ಎಸ್ ವಿರುದ್ಧ ಘೋಷಣೆ
ಬಸವಕಲ್ಯಾಣ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನ ಮಾಡಿದ ಘಟನೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ನಗರದ ಅಂಬೇಡ್ಕರ್ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಮತ್ತು ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಮೋದಿ ಹಟಾವ್ ದೇಶ ಬಜಾವ್, ಬಿಜೆಪಿ, ಆರ್ಎಸ್ಎಸ್ ವಿರುದ್ಧ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರವೀಂದ್ರ ಗಾಯಕವಾಡ ಮಾತನಾಡಿ, ಮನುವಾದಿಗಳು ದೇಶದಲ್ಲಿ ಜನರ ಮಧ್ಯೆ ಒಡಕು ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯವರು ದೇಶದಲ್ಲಿ ಜಾತಿ, ಜಾತಿ, ಧರ್ಮ, ಧರ್ಮಗಳ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ಇದನ್ನು ಒಗ್ಗಟ್ಟಿನಿಂದ ಖಂಡಿಸಬೇಕಾದ ಅಗತ್ಯವಿದೆ ಎಂದರು.
ಬಿಎಸ್ಐ ತಾಲೂಕು ಅಧ್ಯಕ್ಷ ಮನೋಹರ್ ಮೈಸೆ ಮಾತನಾಡಿ, ಎಐಸಿಸಿ ಅಧ್ಯಕ್ಷರು, ರಾಷ್ಟ್ರೀಯ ನಾಯಕರು ಆಗಿರುವ ಮಲ್ಲಿಕಾರ್ಜೂನ ಖರ್ಗೆ ಅವರಿಗೆ ಅವಮಾನ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಖರ್ಗೆ ಅವರಿಗೆ ಅವಮಾನ ಮಾಡಿರುವ ಅನುವಾದಿಗಳನ್ನು ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಒತ್ತಾಯಿಸಿದರು.
ವಾಯ್ಸ್ ಆಫ್ ಅಂಬೇಡ್ಕರ್ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ ಮೋರೆ ಮಾತನಾಡಿ, ಬಿಜೆಪಿ, ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ತಾಪಂ ಮಾಜಿ ಉಪಾಧ್ಯಕ್ಷ, ಮುಖಂಡ ದಿಲೀಪ ಸಿಂಧೆ, ಯುವ ಕಾಂಗ್ರೆಸ್ ಅಧ್ಯಕ್ಷ ಎಂಡಿ ಜಾಬೇರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಸೂಯಾ ಮಂಠಾಳಕರ್, ವಿವಿಧ ಸಂಘಟನೆಗಳ ಪ್ರಮುಖರಾದ ಸಂದೀಪ ಮುಕಿಂದೆ, ಅರುಣ ಗಾಯಕವಾಡ, ನಿತ್ಯಾನಂದ ಮಾಠಾಳಕರ್ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯರಾದ ರವೀಂದ್ರ ಬೋರಾಳೆ, ಮಲ್ಲಿಕಾರ್ಜುನ ಬೊಕ್ಕೆ, ರಾಮ ಜಾಧವ, ಜಿಪಂ ಮಾಜಿ ಸದಸ್ಯೆ ಅನ್ನಪೂರ್ಣಬಾಯಿ ಅಂಬಾರಾಯ, ಕಾಂಗ್ರೆಸ್ ಮುಖಂಡರಾದ ಸುಧಾಕರ್ ಗುರ್ಜರ, ತಹಸಿನ್ ಅಲಿ ಜಮಾದಾರ್, ನಾಗನಾಥ ಮೇತ್ರೆ, ಸಂಘಟನೆಗಳ ಪ್ರಮುಖರಾದ ಯುವರಾಜ ಭೆಂಡೆ, ಮಹಾದೇವ ಗಾಯಕವಾಡ, ಪಿಂಟು ಕಾಂಬಳೆ, ಸಿಕಂದರ್ ಶಿಂಧೆೆ, ದತ್ತು ಭೇಂಡೆ, ವಿಜಯಕುಮಾರ ಡಾಂಗೆ, ಸಂಜುಕುಮಾರ ಸಂಗನೂರೆ, ಅಶೋಕ ಸಂಗನೂರೆ, ಪಕ್ಷದ ಕಾರ್ಯಕರ್ತರು ಮತ್ತು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.