ಇಂಡಿ ನಗರದಲ್ಲಿ ಬಹುತೇಕ ಜಮೀನುಗಳಿಗೆ ಹೋಗಲು ರಸ್ತೆ ಒದಗಿಸಲು ರೈತಸಂಘ, ಜೈ ಜವಾನ್ ಜೈ ಕಿಸಾನ್ ಸಂಘಟನೆ ನೇತೃತ್ವದಲ್ಲಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಬಿ.ಡಿ. ಪಾಟೀಲ, ಅಯೂಬ್ ನಾಟಿಕರ, ಕರವೇ ಬಾಳು, ಮುಳಜಿ, ಮೋತಿಲಾಲ್ ಚವಾಣ್ ಮತ್ತಿತರರಿದ್ದಾರೆ.
- ರೈತರ ಜಮೀನುಗಳಿಗೆ ರಸ್ತೆ ಒದಗಿಸಲು ಆಗ್ರಹ
- ಅಹೋರಾತ್ರಿ ಧರಣಿ
ಇಂಡಿ: ತಾಲೂಕಿನ ಬಹುತೇಕ ಜಮೀನುಗಳಿಗೆ ಹೋಗಲು ರಸ್ತೆ ಒದಗಿಸಲು ರೈತಸಂಘ, ಜೈ ಜವಾನ್ ಜೈ ಕಿಸಾನ್ ಸಂಘಟನೆ ನೇತೃತ್ವದಲ್ಲಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದು. ಕೋರ್ಟ್ ಆದೇಶವಿದ್ದರೂ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಸಾವಿರಾರು ರೈತರು ಅಹೋರಾತ್ರಿ ಧರಣಿ ನಡೆಸಲು ಸಂಘಟನೆ ನಿರ್ಧರಿಸಿದ್ದಾರೆ.
ಹೋರಾಟ ವಿಕೋಪಕ್ಕೆ ಹೋದಾಗ ಸ್ಥಳಕ್ಕೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಬಂದು ಪ್ರತಿಭಟನಾಕಾರರ ಎರಡು ಪ್ರಮುಖ ರಸ್ತೆಗಳ ಸಮಸ್ಯೆ ಪರಿಹಾರಕ್ಕೆ ಮೂರು ದಿನಗಳ ಗಡುವು ನೀಡಿದಾಗ ಪ್ರತಿಭಟನೆ ನಿಲ್ಲಿಸಲಾಯಿತು.
ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲರು ಹೋರಾಟಕ್ಕೆ ಬೆಂಬಲ ಸೂಚಿಸಿ ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳಿಗೆ ತೆರಳಲು ರಸ್ತೆಗಳ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಆಗ್ರಹಿಸಿದರು.’
ಅಯೂಬ್ ನಾಟಿಕರ, ಕರವೇ ಬಾಳು, ಮುಳಜಿ, ಜೈ ಜವಾನ್ ಜೈ ಕಿಸಾನ್ ಸಂಘಟನೆ ಅಧ್ಯಕ್ಷ ಮೋತಿಲಾಲ ಚವಾಣ್, ಸಂಚಾಲಕ ರಜಾಕ, ಸಿದ್ದು ಡಂಗಾ, ಭೀಮನಗೌಡ ಪಾಟೀಲ, ಪಾರ್ವತಿ ಕಟ್ಟಿಮನಿ, ಶಂಕರ್ ಯಕ್ಕುಂಡಿ, ಬಾಬು ಮಹಾರಾಜ, ಮಾನಮಿ ಶೇಖ್, ಗೋವಿಂದ ನಾಯಕ, ಮಹೇಶ್ ಹೂಗಾರ, ಸಂತೋಷ ಮಾಳಾಬಾಗಿ, ಬೀರಪ್ಪ ಸಿಂದೆ, ಸುನೀಲ ರಾಠೋಡ್, ಅದೃಶ್ಯಪ್ಪ ವಾಲಿ, ನಿಯಾಝ್ ಅಗರಖೇಡ ಮತ್ತಿತರರಿದ್ದರು.