ಢವಳಗಿ 33 ಕೆವಿ ವಿದ್ಯುತ್ ಕೇಂದ್ರದಲ್ಲಿ ಅಸಮರ್ಪಕ ವಿದ್ಯುತ್ ನೀಡುತ್ತಿರುವ ಪರಿಣಾಮ ಖಂಡಿಸಿ ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಇ ಸುನಂದಾ ಜಂಬಗಿ, ಸಿದ್ರಾಮ ಬಿರಾದಾರ, ಮುದ್ದೇಬಿಹಾಳ ಎಇಇ ರಾಜಶೇಖರ ಹಾದಿಮನಿ, ಭೀಮನಗೌಡ ಯಲಗೋಡ, ರಾಮನಗೌಡ ಬಿರಾದಾರ ಸೇರಿ ರೈತರು ಇದ್ದರು. 
ರಾಜ್ಯ

ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಪ್ರತಿಭಟನೆ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಅಧಿಕಾರಿಗಳಿಗೆ ಮನವಿ
  • ಶಾಂತಗೌಡ ಪಾಟೀಲ ನಡಹಳ್ಳಿ ನೇತೃತ್ವ
ಢವಳಗಿ: ರೈತರಿಗೆ ಹಗಲು ಹೊತ್ತಿನಲ್ಲೇ 7 ಗಂಟೆ ವಿದ್ಯುತ್ ನೀಡಬೇಕು. ವಿದ್ಯುತ್ ಪರಿವರ್ತಕ (ಟಿಸಿ) ಸುಟ್ಟರೆ 48 ಗಂಟೆಯೊಳಗೆ ದುರಸ್ತಿ ಮಾಡಿಕೊಡಬೇಕು ಎಂದು ರೈತ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಬಸವನ ಬಾಗೇವಾಡಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ರಾಮ ಬಿರಾದಾರ ಅವರಿಗೆ ಆಗ್ರಹಿಸಿದರು.
ಗ್ರಾಮದ 33 ಕೆವಿ ವಿದ್ಯುತ್ ಕೇಂದ್ರದಲ್ಲಾಗುವ ತೊಂದರೆಯನ್ನು ಅನುಭವಿಸುತ್ತಿರುವ ಢವಳಗಿ, ಅಗಸಬಾಳ, ಹಳ್ಳೂರ, ತಾರನಾಳ, ಗುಡಿಹಾಳ, ಬಳವಾಟ, ರೂಡಗಿ ಗ್ರಾಮಗಳ ರೈತರ ಪರವಾಗಿ ಶಾಂತಗೌಡ ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಗ್ರಾ.ಪಂ. ಹತ್ತಿರದ ಸಭಾ ಭವನದಲ್ಲಿ ಅಧಿಕಾರಿಗಳ ಜತೆ ವಾಗ್ವಾದ ಮಾಡಿದರು.
ರೈತ ದುಂಡಪ್ಪ ಅರಸುಣಗಿ ಮಾತನಾಡಿ, ರಾತ್ರಿ 1 ಗಂಟೆಗೆ ವಿದ್ಯುತ್ ನೀಡುವುದರಿಂದ ರೈತರಿಗೆ ರಾತ್ರಿ ಹೊತ್ತಿನಲ್ಲಿ ನೀರು ಹಾಯಿಸಲು ಹೋದಾಗ ಏನಾದರೂ ಅನಾಹುತಗಳಾದರೆ ಅದಕ್ಕೆ ಜವಾಬ್ದಾರಿ ಯಾರು? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಜಾಕೀರ ಬಾಗವಾನ್ ಮಾತನಾಡಿ, ರೈತರಿಗೆ ಕೋಡಬೇಕಾದ 7 ತಾಸು ವಿದ್ಯುತ್ ನಮಗೆ ಸರಿಯಾಗಿ ನೀಡುತ್ತಿಲ್ಲ. ಸಮಸ್ಯೆ ಬಗ್ಗೆ ಮಾಹಿತಿ ಕೆಳಲು ಕರೆ ಮಾಡಿದರೆ ವಿಭಾಗೀಯ ಅಧಿಕಾರಿ ಭೀಮನಗೌಡ ಯಲಗೋಡ ಮತ್ತು ಎಇಇ ರಾಜಶೇಖರ ಹಾದಿಮನಿ ಕರೆ ಸ್ವೀಕರಿಸುತ್ತಿಲ್ಲ ಎಂದರು.
ವಿಜಯಪುರ ಎಇ ಸುನಂದ ಜಂಬಗಿ, ಬಾಗೇವಾಡಿ ಕಾರ್ಯನಿರ್ವಾಹಕ ಸಿದ್ರಾಮ ಬಿರಾದಾರ, ಮುದ್ದೇಬಿಹಾಳ ಎಇಇ ರಾಜಶೇಖರ ಹಾದಿಮನಿ, ಢವಳಗಿ ಎಸ್‌ಒ ಭೀಮನಗೌಡ ಯಲಗೋಡ ಸೇರಿ ಇಲಾಖೆ ಸಿಬ್ಬಂದಿ ಇದ್ದರು. ಮುದ್ದೇಬಿಹಾಳ ಪೊಲೀಸ್ ಬಂದೋಬಸ್ತ್ ನೀಡಿದರು.
ಮುತ್ತು ಕೋರಿ, ಬಸವರಾಜ ಗೋಲಗೇರಿ, ಶಿವಾನಂದ ಕೋರಿ, ರಾಮನಗೌಡ ಬಿರಾದಾರ, ಶಿವರಾಜ ಕಾಶಿನಕುಂಟಿ, ಬಸವರಾಜ ಬಿರಾದಾರ, ಸುರೇಶ ಕಾಶಿನಕುಂಟಿ, ಕಾಶಿರಾಯ ಯಾಳವಾರ, ದ್ಯಾಮನ ಪಾಗದ ಸೇರಿ ಅಗಸಬಾಳ, ಢವಳಗಿ, ಹಳ್ಳೂರ, ರೂಡಗಿ, ತಾರನಾಳ ರೈತರು ಇದ್ದರು.