ಕಾಂಗ್ರೆಸ್​ ಮಹಿಳಾ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ anti-women-policies 
ರಾಜ್ಯ

ಕಾಂಗ್ರೆಸ್​ ಮಹಿಳಾ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ anti-women-policies

ಮುಳಬಾಗಿಲು: ಕಾಂಗ್ರೆಸ್​ ಮಹಿಳಾ ಮೀಸಲಾತಿ ವಿರೋಧಿ ನೀತಿ ಖಂಡಿಸಿ ನಗರದ ಟಿಎಪಿಸಿಎಂಎಸ್​ ಮುಂಭಾಗದ ವೃತ್ತದ ಬಳಿ ಮಂಗಳವಾರ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. anti-women-policies
ಬಿಜೆಪಿ ಹಿರಿಯ ಮುಖಂಡ ಪಿ.ಎಂ. ರಘುನಾಥ್​ ಮಾತನಾಡಿ, ಕಾಂಗ್ರೆಸ್​ ನೇತೃತ್ವದಲ್ಲಿ ದೇಶವನ್ನು ಸುಮಾರು 60 ವರ್ಷ ಕೇಂದ್ರ ಸರ್ಕಾರ ಆಳ್ವಿಕೆ ಮಾಡಿದ್ದು, ಮಹಿಳೆಯರ ಬಗ್ಗೆ ಉದಾಸೀನ ಪ್ರವೃತಿ ಮಾಡಿರುವುದೇ ಅವರ ಸಾಧನೆಯಾಗಿದೆ. ಹೇಳುವುದು ಒಂದು ಮಾಡುವುದು ಇನ್ನೊಂದು ಕಾಂಗ್ರೆಸ್​ ತತ್ವವಾಗಿದೆ. ಆದುದರಿಂದ ಮಹಿಳಾ ಮೀಸಲಾತಿಗೆ ದೇಶದಲ್ಲಿ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.
ಕಾಂಗ್ರೆಸ್​ ದೇಶದ ರೈತರನ್ನು, ದೀನ ದಲಿತರನ್ನು, ಮಹಿಳೆಯರನ್ನು ಮತ ಬ್ಯಾಂಕಿಗೆ ಸೀಮಿತ ಮಾಡಿಕೊಂಡು ಸೌಲಭ್ಯ ಕೊಡುವಲ್ಲಿ ಮೋಸ ಮಾಡಿಕೊಂಡು ಬಂದಿರುವುದೇ ಸಾಧನೆಯಾಗಿದೆ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ನಂಗಲಿ ಕೆ.ಸತೀಶ್​ ಕುಮಾರ್​ ಮಾತನಾಡಿ, ಬಿಜೆಪಿ 13 ವರ್ಷಗಳಲ್ಲಿ ಮಹಿಳೆಯರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್​ ಕೇವಲ ಮತ ಬ್ಯಾಂಕ್​ಗಾಗಿ ಮಹಿಳೆಯರನ್ನ ಓಲೈಸುತ್ತಿದೆ. ಸಂಸತ್​ನಲ್ಲಿ ಈ ಮಸೂದೆ ಪಾಸ್​ ಮಾಡಲು ಬಿಡದೆ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ ಗೀತಾ ಮಾತನಾಡಿ, ದೇಶವನ್ನು ಅಭಿವೃದ್ಧಿಯಾಗಿಸುವ ಉದ್ದೇಶದಿಂದ ನರೇಂದ್ರ ಮೋದಿ ಅವರು ಲೋಕಸಭಾ ಮತ್ತು ವಿಧಾನಸಭೆಯಲ್ಲಿ ಶೇ.33 ಮಹಿಳೆಯರು ಇರಬೇಕು ಎನ್ನುವ ನಿಟ್ಟಿನಲ್ಲಿ ನಾರಿ ಶಕ್ತಿ ಅಧಿನಿಯಮ ಯೋಜನೆ ಜಾರಿಗೆ ಬಿಲ್​ ತಂದರು. ಆದರೆ ಕಾಂಗ್ರೆಸ್​ ಮತ್ತು ಮಿತ್ರ ಪಕ್ಷಗಳು ಮಹಿಳೆಯರ ವಿರೋಧಿ ನೀತಿ ಪ್ರದರ್ಶನ ಮಾಡಿ ಸೋಲಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಮೈಕ್​ ವಿ.ಟಿ.ಶಂಕರ್​, ವಿಶ್ವನಾಥ ರೆಡ್ಡಿ, ಸೋಮಶೇಖರ್​, ಮಮತಾ, ಸತೀಶ್​, ಪ್ರಕಾಶ್​ ರೆಡ್ಡಿ ಇದ್ದರು.