ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಗ್ರಾಪಂನ ವಂಗಾರ್ಲಪಲ್ಲಿ ಗ್ರಾಮದ ಬಳಿ ಇರುವ ಗೋವಿಂದರಾಜ ಕುಂಟೆಯಲ್ಲಿ ಹೂಳೆತ್ತುವ ಕಾಮಗಾರಿಯನ್ನು ಪಿಡಿಒ ನಾರಾಯಣಸ್ವಾಮಿ ಪರಿಶೀಲಿಸಿದರು. ಕರ ವಸೂಲಿಗಾರ ಎಲ್​.ನಾಗರಾಜ್​, ಡಿಇಒ ಆರ್​.ಸುರೇಶ್​, ಕಚೇರಿ ಸಹಾಯಕ ವಿ.ಕೆ.ವೆಂಕಟೇಶ್​, ಕಾಯಕಮಿತ್ರ ರವಣಮ್ಮ, ಮೇಟಿ ಸಿ.ಎನ್​.ರಾಮಚಂದ್ರ, ಕಾರ್ಮಿಕರಾದ ಉತ್ತನ್ನ, ಮಂಜುನಾಥ, ಪೆದ್ದನ್ನ, ನರಸಿಂಹಪ್ಪ ಇತರರಿದ್ದರು. 
ರಾಜ್ಯ

ನೀರಿನ ಮೂಲಗಳ ರಕ್ಷಣೆ ಅಗತ್ಯ

ನೀರಿನ ಮೂಲಗಳ ರಕ್ಷಣೆ ಮತ್ತು ಸದ್ಬಳಿಕೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ಬಿಳ್ಳೂರು ಗ್ರಾಮ ಪಂಚಾಯಿತಿ ಪಿಡಿಒ ನಾರಾಯಣಸ್ವಾಮಿ ತಿಳಿಸಿದರು.

ವಂಗಾರ್ಲಪಲ್ಲಿ ಗ್ರಾಮದ ಬಳಿ ಇರುವ ಗೋವಿಂದರಾಜ ಕುಂಟೆಯಲ್ಲಿ ವಿಬಿ ಜಿ ರಾಮ್​ಜಿ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕಾಡು ನಾಶ, ನಗರ ಮತ್ತು ಗ್ರಾಮಗಳ ಚರಂಡಿ ನೀರನ್ನು ಕೆರೆ, ಕುಂಟೆ, ಹಳ್ಳಗಳಿಗೆ ಬಿಡುವುದು, ಕೆರೆಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಜಲಮೂಲಗಳು ಕುಲುಷಿತಗೊಳ್ಳುತ್ತದೆ. ಈ ಬಗ್ಗೆ ನಾಗರೀಕರು ಜಾಗೃತರಾಗಿ ತಮ್ಮ ಪ್ರದೇಶದಲ್ಲಿರುವ ಜಲ ಮೂಲಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಕರ ವಸೂಲಿಗಾರ ಎಲ್​.ನಾಗರಾಜ್​ ಮಾತನಾಡಿ, ಮಳೆ ನೀರು ಪೋಲಾಗದಂತೆ ನಮ್ಮ ಪೂರ್ವಿಕರು ಕೆರೆ ಕುಂಟೆ, ಕಾಲುವೆಗಳನ್ನು ನಿರ್ಮಿಸಿ, ನೀರಿನ ಸಂರಕ್ಷಣೆ ಮಾಡುತ್ತಿದ್ದರು. ಇದರಿಂದ ಅಂತರ್ಜಲ ಹೆಚ್ಚಾಗಿ ನೀರಿನ ಸಮಸ್ಯೆ ನಿವಾರಣೆಯಾಗುತ್ತಿತ್ತು. ಇದೀಗ ಅವುಗಳ ಅಭಿವೃದ್ಧಿ ಸಲುವಾಗಿ ವಿಬಿ ಜಿ ರಾಮ್​ ಜಿ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಯೋಜನೆ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು.