ಲೋಕಾಪುರ ಸಮೀಪದ ಬೀಳಗಿ ಶುಗರ್ ಮೀಲ್ ಲಿ., ಯುನಿಟ್-2 ರನ್ನನಗರ ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ವಿಠ್ಠಲ ತುಮ್ಮರಮಟ್ಟಿ ಚಾಲನೆ ನೀಡಿದರು. ಎಂ.ಟಿ. ಅರಳಿಕಟ್ಟಿ, ರಾಹುಲ ನಾಡಗೌಡ, ಸಂಗನಗೌಡ ಬೇವೂರ, ದುಗಲದ, ವೆಂಕಣ್ಣ ಪರಡ್ಡಿ, ರಂಗನಾಥ ಯಡಹಳ್ಳಿಇದ್ದರು. 
ರಾಜ್ಯ

ಸ್ವಯಂ ಪ್ರೇರಣೆಯಿಂದ ಪರಿಸರ ಸಂರಕ್ಷಿಸಿ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಎಚ್.ಎಲ್. ಪಾಟೀಲ ಅಭಿಮತ
  • ಬೀಳಗಿ ಸಕ್ಕರೆ ಕಾರ್ಖಾನೆ ಯುನಿಟ್ 2ರಲ್ಲಿ ಕಾರ್ಯಕ್ರಮ
ಲೋಕಾಪುರ: ಜಾಗತಿಕ ತಾಪಮಾನದಿಂದ ಇಡೀ ವಿಶ್ವವೇ ನಲಗುತ್ತಿದೆ. ಹೀಗಾಗಿ ಎಲ್ಲರೂ ಗಿಡಗಳನ್ನು ಬೆಳೆಸಬೇಕು ಮತ್ತು ಸಂರಕ್ಷಿಸಬೇಕು ಎಂದು ಬೀಳಗಿ ಶುಗರ್ ಮಿಲ್ ಲಿ., ಯೂನಿಟ್-2 ನಿರ್ದೇಶಕ ಎಚ್.ಎಲ್. ಪಾಟೀಲ ಹೇಳಿದರು.
ಸಮೀಪದ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ್ ಮೀಲ್ ಲಿ. ಯುನಿಟ್-2 ರನ್ನ ನಗರ ಕಾರ್ಖಾನೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಪರಿಸರ ಉಳಿದರೆ ದೇಶ ಉಳಿದೀತು. ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬೇಕು ಎಂದರು.
ಪ್ರಗತಿ ಪರ ರೈತ ವಿಠ್ಠಲ ತುಮ್ಮರಮಟ್ಟಿ ಮಾತನಾಡಿ, ಮಾಜಿ ಸಚಿವ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಸ್.ಆರ್. ಪಾಟೀಲ ಮತ್ತು ನಿರ್ದೇಶಕರಾದ ಎಸ್.ಎಸ್. ಪಾಟೀಲ ನಿರ್ದೇಶನದಲ್ಲಿ ಕಾರ್ಖಾನೆಯೂ ಪ್ರಗತಿಯತ್ತ ಸಾಗಿದೆ. ಎಲ್ಲ ಸಿಬ್ಬಂದಿ ಹಾಗೂ ಕಾರ್ಮಿಕರು ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಪರಿಸರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ನಿರ್ದೇಶಕರಾದ ಎಂ.ಟಿ. ಅರಳಿಕಟ್ಟಿ, ಆಡಳಿತಾಧಿಕಾರಿ ರಾಹುಲ ನಾಡಗೌಡ, ಸಂಗನಗೌಡ ಬೇವೂರ, ವೆಂಕಣ್ಣ ಪರಡ್ಡಿ, ರಂಗನಾಥ ಯಡಹಳ್ಳಿ, ಮಹಾಂತೇಶ ಹೂಗಾರ, ಎಸ್.ಆರ್.ಕೆ. ಹುಸೇನ, ಪ್ರದೀಪ ಗುರಾಣಿ ಇತರರಿದ್ದರು.