ಕಲಬುರಗಿ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಉಜ್ಜಯಿನಿ ಜಗದ್ಗುರುಗಳು ಸಸಿ ವಿತರಣೆ ಮಾಡಿದರು. ಶ್ರೀ ವೀರಭದ್ರ ಶಿವಾಚಾರ್ಯ, ಡಾ.ಗುರುಮೂರ್ತಿ ಶಿವಾಚಾರ್ಯ, ಶ್ರೀ ರಾಚೋಟೇಶ್ವರ ಶಿವಾಚಾರ್ಯ, ಶ್ರೀ ವೀರಮಹಾಂತ ಶಿವಾಚಾರ್ಯ, ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯರು ಇತರರಿದ್ದರು.
- ಉಜ್ಜಯಿನಿ ಜಗದ್ಗುರುಗಳು ಕರೆ
- ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರವಚನ
ಕಲಬುರಗಿ: ಎಲ್ಲೆಡೆ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸೋಣ. ಪರಿಸರ ಉಳಿಸುವುದೆಂದರೆ ಪ್ರಕೃತಿ ಸಂರಕ್ಷಿಸುವುದರ ಜತೆಗೆ ನಮ್ಮ ಬದುಕು ಮತ್ತು ಮುಂದಿನ ಪೀಳಿಗೆಯ ಭವಿಷ್ಯ ಉಳಿಸುವ ಮಹಾ ಯವಾಗಿದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಚಾರ್ಯರು ನುಡಿದರು.
ಸೊಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪರಿಸರವಾದಿ ಶೈಲೇಂದ್ರ ಕಾವಡಿ ಪ್ರತಿ ವರ್ಷ ಸಸಿಗಳನ್ನು ವಿತರಿಸುತ್ತಿದ್ದು, ಅವರ ನಿಸ್ವಾರ್ಥ ಸೇವೆ ಅನುಕರಣೆಯಾಗಿದೆ ಎಂದು ಶ್ಲಾಘಸಿದರು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯ, ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ, ಚಂದನಕೇರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ, ಚಿಣಮಗೇರಿಯ ಶ್ರೀ ವೀರಮಹಾಂತ ಶಿವಾಚಾರ್ಯ, ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯ, ಸಿದ್ದನಕೇರಾದ ಶ್ರೀ ಹೊನ್ನಲಿಂಗೇಶ್ವರ ಸ್ವಾಮೀಜಿ, ಮುದ್ನಾಳದ ಶ್ರೀ ಮುರುಗೇಂದ್ರ ದೇವರು, ಸುಲೇಪೇಟ, ಕಡಗಂಚಿ ಶ್ರೀಗಳು, ಕಪನೂರಿನ ಮಲ್ಲಕಾರ್ಜುನಸ್ವಾಮಿ ಟೇಂಗಳಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗೌರಿ ಚಿಚಕೋಟಿ, ಪ್ರಮುಖರಾದ ಆನಂದರಾವ ಪಾಟೀಲ, ಚಂದ್ರಕಾಂತ ಭೂಸನೂರ, ನಾಗಯ್ಯಸ್ವಾಮಿ, ಶರಣಬಸಪ್ಪ ಬೆಣ್ಣೂರ, ಜಗದೀಶ ಬಿರಾದಾರ, ಆನಂದರಾವ ಕೊರಳ್ಳಿ, ಶಿವಾನಂದ ಅವರಳ್ಳಿ, ಬಿ.ಜಿ.ಸ್ವಾಮಿ ಗೋಳಾ, ಶಿವಾನಂದ ಮಠಪತಿ, ಸಿದ್ರಾಮಪ್ಪ ಆಗಲಗೂಡಕರ್ ಇತರರಿದ್ದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ್ ಅಧ್ಯಕ್ಷತೆಯಲ್ಲಿ ಬೀದರ್ ಜಿಲ್ಲೆಯ ಪರಿಸರವಾದಿ ಶೈಲೇಂದ್ರ ಕಾವಡಿ ಅವರ ಉಪಸ್ಥಿತಿಯಲ್ಲಿ ಕೋಟಿ ಬಿಲ್ವವೃಕ್ಷ ಆಂದೋಲನದಡಿ ರೈತರಿಗೆ ಸಸಿ ವಿತರಿಸಲಾಯಿತು. ಕಾಯಕಯೋಗಿ ಸೇವಾ ಸಂಸ್ಥೆಯ ಕೇದಾರನಾಥ ಕುಲಕರ್ಣಿ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿವ ಲಿಂಗದೀಕ್ಷೆ ಅಯ್ಯಾಚಾರದಲ್ಲಿ ನೂರಾರು ಜನರು ದೀಕ್ಷಾ ಸಂಸ್ಕಾರ ಪಡೆದುಕೊಂಡರು. ಉಜ್ಜಯಿನಿ ಪೀಠದ ಗುರುಕುಲ ಸಾಧಕರಿಂದ ವೇದೂಷ ಜರುಗಿತು. ಮಲ್ಲಿಕಾರ್ಜುನ ತಡಕಲ್ ಸ್ವಾಗತಿಸಿದರು. ಯುವಸಾಹಿತಿ ಶಿವಯ್ಯ ಮಠಪತಿ ನಿರೂಪಣೆ ಮಾಡಿದರು.