ಹುಮನಾಬಾದ್ನ ರಾಜರಾಜೇಶ್ವರಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಆಯುರ್ಪರ್ವ 2026 ಇಂದ್ರಿಯ ಆರೋಗ್ಯ ಸಪ್ತಾಹ ಸಮಾರೋಪ ಸಮಾರಂಭವನ್ನು ಹಿರೇಮಠದ ಶ್ರೀ ರೇಣುಕ ಗಂಗಾಧರ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಬ್ರಿಜೇಶ್, ಮಂಜುನಾಥ ಬಿ. ಕುಲಕರ್ಣಿ, ಓಂಪ್ರಕಾಶ್ ಘಂಟೆ ಇದ್ದರು.
- ಶ್ರೀ ರೇಣುಕ ಗಂಗಾಧರ ಶಿವಾಚಾರ್ಯ ನುಡಿ
- ಹುಮನಾಬಾದ್ನಲ್ಲಿ ಆಯುರ್ವೇದ ಜಾಗೃತಿ
ಹುಮನಾಬಾದ್: ಆರೋಗ್ಯಕರ ಜೀವನಕ್ಕಾಗಿ ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಎಂಬ ತ್ರಯೋಪಸ್ತಂಭಗಳನ್ನು ಸಮರ್ಪಕವಾಗಿ ಪಾಲಿಸುವ ಅಗತ್ಯವಿದೆ ಎಂದು ಹುಮನಾಬಾದ್ ಹಿರೇಮಠದ ಶ್ರೀ ರೇಣುಕ ಗಂಗಾಧರ ಶಿವಾಚಾರ್ಯ ನುಡಿದರು.
ಪಟ್ಟಣದ ಎಚ್ಕೆಡಿಟಿ ಟ್ರಸ್ಟ್ನ ರಾಜರಾಜೇಶ್ವರಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಆಪ್ತಾಸ್ ಆಯುರ್ವೇದ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆಯುರ್ಪರ್ವ 2026 ಇಂದ್ರಿಯ ಆರೋಗ್ಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುರ್ವೇದದ ತತ್ವಗಳನ್ನು ಕಲೆ, ಸಾಹಿತ್ಯ ಹಾಗೂ ಸಾಂಸ್ಕತಿಕ ಚಟುವಟಿಕೆಗಳ ಮೂಲಕ ಜನರಿಗೆ ತಲುಪಿಸುವ ಮಹಾವಿದ್ಯಾಲಯದ ಪ್ರಯತ್ನವನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಬ್ರಿಜೇಶ್ ಕೆ.ಅಧ್ಯಕ್ಷತೆ ವಹಿಸಿದ್ದರು. ಶಕುಂತಲಾ ಪಾಟೀಲ್ ವಸತಿ ಶಾಲೆಯ ಪ್ರಾಂಶುಪಾಲ ಮಂಜುನಾಥ ಬಿ. ಕುಲಕರ್ಣಿ, ಓಂಪ್ರಕಾಶ್ ಘಂಟೆ ಇತರರಿದ್ದರು. ಒಂದು ವಾರ ನಡೆದ ಇಂದ್ರಿಯ ಆರೋಗ್ಯ ಸಪ್ತಾಹದಲ್ಲಿ ರಸಪ್ರಶ್ನೆ, ನಾಟಕ, ಸಂಗೀತ, ನೃತ್ಯ, ಶೈಕ್ಷಣಿಕ ಪ್ರದರ್ಶನ ಸೇರಿ 20ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಆಯುರ್ವೇದದ ಕುರಿತು ಜಾಗೃತಿ ಮೂಡಿಸಲಾಯಿತು.