ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದ
- ‘ಬಿ’ ವಲಯದಿಂದ ‘ಎ’ ವಲಯಕ್ಕೆ ಹಾಗೂ ‘ಸಿ’ ವಲಯದಿಂದ ‘ಬಿ’ ವಲಯಕ್ಕೆ ಬಡ್ತಿ ನೀಡುವ ಸಂಬಂಧ ಖಾಲಿ ಇರುವ ಹುದ್ದೆಗಳನ್ನು ಏ.21ರಂದು ಅಂತಿಮಗೊಳಿಸಬೇಕು.
- ಜಿಲ್ಲಾ ಮಂಜೂರಾತಿ ಹುದ್ದೆಗಳಿಗೆ ಮೀರದಂತೆ ಕರ್ತವ್ಯನಿರತ ಹುದ್ದೆಗಳನ್ನು ಅಂತಿಮವಾಗಿ ಬಡ್ತಿಗೆ ಪರಿಗಣಿಸಬೇಕಾದ ಹುದ್ದೆಗಳನ್ನು ಏ.23ರಂದು ಪ್ರಕಟಿಸಬೇಕು
- ಏ.28ರಂದು ಬಡ್ತಿ ಕೌನ್ಸೆಲಿಂಗ್‌ಗೆ ಅರ್ಹರಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರ 1:2 ಅಂತಿಮ ಕೌನ್ಸೆಲಿಂಗ್ ಪಟ್ಟಿಯನ್ನು ಪ್ರಕಟಿಸಬೇಕು.
ಬೆಂಗಳೂರು: ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದಕ್ಕೆ ಏ.29ರಂದು ಜಿಲ್ಲಾ ಹಂತದಲ್ಲಿ ಬಡ್ತಿ ಕೌನ್ಸೆಲಿಂಗ್ ನಡೆಸಿ ಬಡ್ತಿ ಆದೇಶಗಳನ್ನು ನೀಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿಪಿಐ) ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಏಕಕಾಲಕ್ಕೆ ಪ್ರಕ್ರಿಯೆ ನಡೆಸುವಂತೆ ತಿಳಿಸಲಾಗಿದೆ. ಈ ಸಂಬಂಧ ವೇಳಾಪಟ್ಟಿ ಅನುಸಾರ ಕ್ರಮ ವಹಿಸುವಂತೆಯೂ ನಿರ್ದೇಶನ ನೀಡಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
‘ಬಿ’ ವಲಯದಿಂದ ‘ಎ’ ವಲಯಕ್ಕೆ ಹಾಗೂ ‘ಸಿ’ ವಲಯದಿಂದ ‘ಬಿ’ ವಲಯಕ್ಕೆ ಬಡ್ತಿ ನೀಡುವ ಸಂಬಂಧ ಖಾಲಿ ಇರುವ ಹುದ್ದೆಗಳನ್ನು ಏ.21ರಂದು ಅಂತಿಮಗೊಳಿಸಬೇಕು.
ಮುಖ್ಯ ಶಿಕ್ಷಕರ ಬಡ್ತಿಗೆ ಅಗತ್ಯವಿರುವ ಖಾಲಿ ಹುದ್ದೆಗಳನ್ನು ಜಿಲ್ಲಾ ಮಂಜೂರಾತಿ ಹುದ್ದೆಗಳಿಗೆ ಮೀರದಂತೆ ಕರ್ತವ್ಯನಿರತ ಹುದ್ದೆಗಳನ್ನು ಅಂತಿಮವಾಗಿ ಬಡ್ತಿಗೆ ಪರಿಗಣಿಸಬೇಕಾದ ಹುದ್ದೆಗಳನ್ನು ಏ.23ರಂದು ಪ್ರಕಟಿಸಬೇಕು.
ಅಂಗವಿಕಲ ಶಿಕ್ಷಕರು ಸಲ್ಲಿಸುವ ಅಂಗವಿಕಲ ಪ್ರಮಾಣ ಪತ್ರದ ಅನುಸಾರ ಅಂಗವಿಕಲ ಶಿಕ್ಷಕರನ್ನು ವೈದ್ಯಕೀಯ ಮಂಡಳಿಯ ಮುಂದೆ ವೈದ್ಯಕೀಯ ಪರೀಕ್ಷೆಗೆ ಶೇ.24ರಂದು ಒಳಪಡಿಸಬೇಕು.
ಏ.27ರಂದು ಅಂತಿಮ ಆದ್ಯತಾ ಪಟ್ಟಿಯಲ್ಲಿ ಬಡ್ತಿ ಮೀಸಲಾತಿಗೆ ಬಿಂದು ಮತ್ತು ರೋಸ್ಟರ್ ಗುರುತಿಸುವಿಕೆಯ ಕ್ರಮವನ್ನು ಅಂತಿಮಗೊಳಿಸುವುದು ಮತ್ತು ಜಿಲ್ಲಾ ಹಂತದಲ್ಲಿ ಸಭೆ ನಡೆಸಿ ಬಡ್ತಿಗೆ ಅರ್ಹರಿರುವ ಶಿಕ್ಷಕರ ಪಟ್ಟಿಗೆ ಅನುಮೋದನೆ ಕೈಗೊಳ್ಳಬೇಕು.
ಏ.28ರಂದು ಬಡ್ತಿ ಕೌನ್ಸೆಲಿಂಗ್‌ಗೆ ಅರ್ಹರಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರ 1:2 ಅಂತಿಮ ಕೌನ್ಸೆಲಿಂಗ್ ಪಟ್ಟಿಯನ್ನು ಪ್ರಕಟಿಸಬೇಕು. ಏ.29ರಂದು ಕೌನ್ಸೆಲಿಂಗ್ ನಡೆಸಿ ಬಡ್ತಿ ಆದೇಶಗಳನ್ನು ನೀಡುವಂತೆ ತಿಳಿಸಲಾಗಿದೆ.