ತರನಳ್ಳಿಯಲ್ಲಿ ಆತ್ಮನಿರ್ಭರತಾ ಅಭಿಯಾನ ಯೋಜನೆಯಡಿ ರೈತರಿಗೆ ಬಿತ್ತನೆ ಬೀಜಗಳ ಕಿರುಚೀಲ ವಿತರಣೆಗೆ ಟಿಎಪಿಸಿಎಮ್​ಎಸ್​ ಮಾಜಿ ಅಧ್ಯಕ್ಷ ಮಹೇಶ ಪಾಟೀಲ್​ ಚಾಲನೆ ನೀಡಿದರು. ಬಸವರಾಜ ಕೊಡಸಾ, ಜಗದೀಶ ಪಾಟೀಲ್​ ಇತರರಿದ್ದರು.  
ರಾಜ್ಯ

ಸ್ವಾವಲಂಬಿ ಬದುಕಿಗೆ ಯೋಜನೆಗಳು ಪೂರಕ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಹೇಶ ಪಾಟೀಲ್​ ಅನಿಸಿಕೆ
  • ರನಳ್ಳಿಯಲ್ಲಿ ಬಿತ್ತನೆ ಬೀಜಗಳ ಕಿರುಚೀಲ ವಿತರಣೆ
ಸೇಡಂ: ದಿನ ಕಳೆದಂತೆ ರೈತನ ಬದುಕು ದುಸ್ತರವಾಗುತ್ತಿದ್ದು, ಇದೀಗ ಆತ್ಮನಿರ್ಭರತಾ ಯೋಜನೆಯಡಿ ಉಚಿತ ಬೀಜ ವಿತರಣೆ ಮಾಡಲು ಸರ್ಕಾರ ಮುಂದಾಗಿರುವುದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕವಾಗಲಿದೆ ಎಂದು ತಾಲ್ಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸಂಘ (ಟಿಎಪಿಸಿಎಂಎಸ್​)ದ ಮಾಜಿ ಅಧ್ಯಕ್ಷ ಮಹೇಶ ಪಾಟೀಲ್​ ತರನಳ್ಳಿ ಹೇಳಿದರು.
ತರನಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಆತ್ಮನಿರ್ಭರತಾ ಅಭಿಯಾನ ಯೋಜನೆಯಡಿ ರೈತರಿಗೆ ಬಿತ್ತನೆ ಬೀಜಗಳ ಕಿರುಚೀಲ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರವು ರೈತರು ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಲಾಭ ಪಡೆದುಕೊಂಡು ಯಶಸ್ವಿ ಬದುಕು ರೂಪಿಸಿಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಅಧಿಕಾರಿ ಬಸವರಾಜ ಕೊಡಸಾ ಮಾತನಾಡಿ, ಆತ್ಮನಿರ್ಭರ ಪಲ್ಸ್​ ಅಭಿಯಾನ ಯೋಜನೆಯಡಿ ರೈತರಿಗೆ ಉಚಿತವಾಗಿ ತೊಗರಿ ಮತ್ತು ಉದ್ದು ಮಿನಿಕಿಟ್​ ಬೀಜ ವಿತರಿಸಲಾಗುತ್ತಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿ, ಸ್ವಾವಲಂಬನೆ (ಆತ್ಮನಿರ್ಭರತೆ) ಸಾಧಿಸುವ ಉದ್ದೇಶದಿಂದ ಕೃಷಿ ಇಲಾಖೆ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ಜಗದೀಶ ಪಾಟೀಲ್​ ತರನಳ್ಳಿ, ಸಂಗಮೇಶ್ವರ ಪಾಟೀಲ್​, ಶಾಂತಕುಮಾರ ಚನ್ನಕ್ಕಿ, ಸಂಗಮೇಶ ಬೂದನೂರ, ವಿಶ್ವರಾಜ್ಯ ಜಮಾದಾರ, ವೀರೇಶ ಪಾಟೀಲ್​, ಸಿದ್ದಣ್ಣ ದೊಡ್ಡಪ್ಪನೊರ ಇತರರಿದ್ದರು.