ಗುಬ್ಬಿ ಪಟ್ಟಣದ ಸರ್ಕಾರಿ Awareness program ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ತಿಳವಳಿಕೆ ಕಾರ್ಯಕ್ರಮದಲ್ಲಿ ಉದ್ಯೋಗ ಕೋಶಾಧಿಕಾರಿಗಳಾದ ಪ್ರೊ.ಶ್ರೀಕಾಂತ್​, ಪ್ರೊ.ತಿಮ್ಮೇಗೌಡ, ಪತ್ರಾಂಕಿತ ವ್ಯವಸ್ಥಾಪಕ ಶಿವಯ್ಯ ಇದ್ದರು.  
ರಾಜ್ಯ

ಕೌಶಲಾಭಿವೃದ್ಧಿಯಿಂದ ಪ್ರಗತಿ ಸಾಧ್ಯ Awareness program

ತುಮಕೂರು ಡೆಸ್ಕ್
ಗುಬ್ಬಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹಮ್ಮದ್​ ಅತೀಕ್​ ಉಲ್ಲಾ ಷರೀಫ್​ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು Awareness program ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿಚವೃದ್ಧಿ ಕೇಂದ್ರ (ಸಿಡಾಕ್​), ಧಾರವಾಡ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ತುಮಕೂರು ಸಹಯೋಗದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೂರು ದಿನಗಳ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಕೌಶಲ ಹಾಗೂ ಆಸಕ್ತಿಯನ್ನು ಗುರುತಿಸಿಕೊಂಡು ಸ್ವಂತ ಉದ್ಯಮ ಆರಂಭಿಸುವತ್ತ ಗಮನ ಹರಿಸಬೇಕು. ಸರ್ಕಾರದಿಂದ ಉದ್ಯಮ ಆರಂಭಿಸಲು ವಿವಿಧ ಯೋಜನೆಗಳು, ತರಬೇತಿಗಳು ಹಾಗೂ ಆರ್ಥಿಕ ನೆರವು ಲಭ್ಯವಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಒ.ನಾಗರಾಜು ಮಾತನಾಡಿ, ಉದ್ಯಮಶೀಲತಾ ತರಬೇತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ನಾಯಕತ್ವ ಗುಣ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಹೊಸ ಆಲೋಚನೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಯುವಜನರು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡು ಸಮಾಜದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಪ್ರಾಧ್ಯಾಪಕರಾದ ಡಾ.ಮುದ್ದಗಂಗಯ್ಯ, ಸತೀಶ್​, ಕಂಚಿರಾಯಪ್ಪ, ಮಲ್ಲಿಕಾರ್ಜುನ್​ ಪ್ರಭು, ಕೃಷಿ ಇಲಾಖೆಯ ಬಿಟಿಎಂ ಪೂಜಾ, ಸಿಡಾಕ್​ ಸಲಹೆಗಾರರು ಹಾಗೂ ತರಬೇತಿದಾರರಾದ ಎಂ.ಎಸ್​.ಶೋಭಶ್ರೀ, ಸಂಪನ್ಮೂಲ ವ್ಯಕ್ತಿ ಕೆ.ಎಸ್​.ನಟರಾಜು ಇದ್ದರು.