ಮಾನ್ವಿಯಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನ ಆಚರಿಸಲಾಯಿತು. ಬಿಎಸ್‌ಪಿ. ಮಾನ್ವಿ ವಿಧಾನಸಭಾ ಉಸ್ತುವಾರಿ ಬಿ.ಚಂದ್ರಶೇಖರ, ಸಂಯೋಜಕ ಶಿವಲಿಂಗಯ್ಯಸ್ವಾಮಿ ಬೆಟ್ಟದೂರು, ಚನ್ನಬಸವ ಜಗುಲಿ ಅಮರಾವತಿ, ಮಲ್ಲಿಕಾರ್ಜುನ, ರವೀಂದ್ರ ಜಾನೇಕಲ್ ಇನ್ನಿತರರಿದ್ದರು.
ಮಾನ್ವಿ: ದಲಿತರಿಗಾಗಿ ರಾಜಕೀಯ, ಸಾಮಾಜಿಕ, ಸ್ವಾಭಿಮಾನದ ಬದುಕು ದೊರಕಿಸಲು ಅನೇಕ ಹೋರಾಟ ಮಾಡಿದ ಪ್ರೊ.ಬಿ. ಕೃಷ್ಣಪ್ಪ ಅವರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಶ್ಯಾಮಸುಂದರ ಕುಂಬದಾಳ ಹೇಳಿದರು.
ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಬಹುಜನ ಸಮಾಜ ಪಕ್ಷದಿಂದ ಮಾತ್ರ ರಾಜ್ಯದಲ್ಲಿ ದಲಿತ ಸಮುದಾಯ ಅಧಿಕಾರ ಹಿಡಿಯಲು ಸಾಧ್ಯ ಎನ್ನುವ ಉದ್ದೇಶದಿಂದ ಬಿಎಸ್‌ಪಿ ಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ರಾಜಕೀಯ ಗೊಂದಲಗಳ ನಡುವೆಯೂ ಸಮುದಾಯದವರನ್ನು ಮುನ್ನಡೆಸಿಕೊಂಡು ಬಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.