ಬಾಗಲಕೋಟೆ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಽಕಾರಿ ಸಂಗಪ್ಪ ಎಂ. ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಎಸ್.ಬಾವಿಹಾಳ, ವಿವಿಧ ಎಪಿಎಂಸಿ ಕಾರ್ಯದರ್ಶಿಗಳಾದ ರವಿ ರಾಠೋಡ, ರತ್ನಾಕರ ಎ.ವೈ, ದೇವರಾಜ ಪಟ್ಟಣಶೆಟ್ಟಿ ಇದ್ದರು.
ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ. ಹೇಳಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಕ್ವಿಂಟಲ್‌ಗೆ ೭,೭೨೧-೦೦ ರೂ.ಗಳಂತೆ ಪ್ರತಿ ಎಕರೆಗೆ ಗರಿಷ್ಟ ೪ ಕ್ವಿಂಟಲ್‌ನAತೆ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ ೨೦ ಕ್ವಿಂಟಲ್‌ನAತೆ ಖರೀದಿ ಮಾಡಲಾಗುವುದು ಎಂದರು.
ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ಜಿಲ್ಲೆಯಲ್ಲಿ ಒಟ್ಟು ೧೭ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಂದಣಿ ಪ್ರಕ್ರಿಯೆ ಆದೇಶದ ದಿನಾಂಕದಿAದ ೫೦ ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು ೬೦ ದಿನಗಳ ವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸೂರ್ಯಕಾಂತಿ ಗುಣಮಟ್ಟದ ಪ್ರಕಾರ ಗರಿಷ್ಟ ಮಿತಿಗಳು ಪ್ರತಿ ಕ್ವಿಂಟಲ್‌ಗೆ ಕಲ್ಮಶಗಳು (ವಿದೇಶಿ ವಸ್ತು) ಶೇ.೨, ಒಡೆದ ಅಥವಾ ಒಡೆದ ಬೀಜಗಳು ಶೇ.೩ ರಷ್ಟು, ಹಾನಿಗೊಳಗಾದ ಮತ್ತು ಜೇರುಂಡೆ ಬೀಜಗಳು ಶೇ.೪ ರಷ್ಟು ಅಪಕ್ಕ ಮತ್ತು ಕುಗ್ಗಿದ ಶೇ.೫ ಹಾಗೂ ತೇವಾಂಶ ಶೇ.೯ ರಷ್ಟು ಇರುತ್ತದೆ. ಜಿಲ್ಲೆಯ ರೈತರು ನೋಂದಣಿಗಾಗಿ ಆಧಾರ ಕಾರ್ಡ, ಪಹಣಿ ಪತ್ರಿಕೆ, ಆಧಾರ ಲಿಂಕ್ ಆಗಿರುವ ರಾಷ್ಟಿçÃಕೃತ ಬ್ಯಾಂಕಿನ ಪಾಸ್‌ಬುಕ್ ಪ್ರತಿ ಸಲ್ಲಿಸಿ ನಿಗಽತ ಅವಽಯೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸೂರ್ಯಪಾನ ಉತ್ಪನ್ನಕ್ಕೆ ಜಿಲ್ಲಾ ವ್ಯವಸ್ಥಾಪಕರು, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಬಾಗಲಕೋಟೆ (೯೯೦೦೫೫೩೦೫೬), ಸಹಾಯಕ ನಿರ್ದೇಶಕರು ಎಪಿಎಂಸಿ, ಬಾಗಲಕೋಟೆ (೯೦೩೫೩೫೩೯೧೨) ಇವರನ್ನು ಸಂಪರ್ಕಿಸುವ0ತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಎಸ್.ಬಾವಿಹಾಳ, ವಿವಿಧ ಎಪಿಎಂಸಿ ಕಾರ್ಯದರ್ಶಿಗಳಾದ ರವಿ ರಾಠೋಡ, ರತ್ನಾಕರ ಎ.ವೈ, ದೇವರಾಜ ಪಟ್ಟಣಶೆಟ್ಟಿ, ಆರ್.ಎಂ.ದAಡೀನ, ವಿ.ಡಿ.ಪಾಟೀಲ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.