ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಮಾತನಾಡಿದರು. ಪ್ರಭಾವತಿ ಬೋರೇಗೌಡ, ಗಿರೀಶ್, ಪುಟ್ಟರಾಜು, ಮಹಾದೇವು, ಗೀತಾ, ಶಿವರಾಜು ಇತರರಿದ್ದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೆ.17ರಂದು ಹಮ್ಮಿಕೊಂಡಿರುವ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಪರ ಸಂಘಟನೆಗಳು ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಅರ್ಥಪೂರ್ಣವಾಗಿ ಆಚರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಕೋರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಸಮ್ಮೇಳನವು ಏಕ ಪಕ್ಷೀಯವಾಗಿರಬಾರದು. ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ರೈತ ಹೋರಾಟಗಾರರು, ಮಹಿಳಾ ಸಂಘಟನೆಗಳು, ಯುವಕರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಕಾರ್ಮಿಕರು, ವಿದ್ಯಾರ್ಥಿಗಳು, ತಾಲೂಕಿನ ಎಲ್ಲರನ್ನೂ ಒಳಗೊಂಡಂತೆ ಈ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಸಂಬಂಧಿಸಿದವರು ಗಮನ ನೀಡಬೇಕು ಎಂದರು.
ಸಾಹಿತ್ಯ ಸಮ್ಮೇಳನ ಕೇವಲ ನಗರ ಪ್ರದೇಶದ ಜನರಿಗೆ ಮಾತ್ರ ಮೀಸಲಾಗದೆ, ಗ್ರಾಮಾಂತರ ಪ್ರದೇಶದ ಜನರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡಿ ಕನ್ನಡ ನುಡಿ ಜಾತ್ರೆಯನ್ನು ಜನರ ಮನಸಿನಲ್ಲಿ ಹೆಚ್ಚುಕಾಲ ಉಳಿಯವಂತೆ ಮಾಡಬೇಕೆಂದು ತಿಳಿಸಿದರು.
ಕರವೇ ತಾಲೂಕು ಘಟಕದ ಮಹಿಳಾ ಅಧ್ಯಕ್ಷೆ ಪ್ರಭಾವತಿ ಬೋರೇಗೌಡ, ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಪುಟ್ಟರಾಜು, ಪಟ್ಟಣ ಘಟಕದ ಅಧ್ಯಕ್ಷ ಮಹಾದೇವು, ಮಹಿಳಾ ಅಧ್ಯಕ್ಷೆ ಗೀತಾ, ಚಿಕ್ಕರಸಿಕೆರೆ ಹೋಬಳಿಯ ಅಧ್ಯಕ್ಷ ಶಿವರಾಜು, ಆತಗೂರು ಹೋಬಳಿ ಅಧ್ಯಕ್ಷ ಲೋಕೇಶ್, ಕೊಪ್ಪ ಹೋಬಳಿ ಅಧ್ಯಕ್ಷ ಮಂಜೇಶ್‌ಗೌಡ ಹಾಗೂ ತೇಜಸ್ ಇದ್ದರು.