ಸಿ.ಜೆ. ಅವಿನ್ ಆರಾಧ್ಯ 
ರಾಜ್ಯ

ಪ್ರಿಯಾಂಕ್ ಖರ್ಗೆಗೆ ಚಿಕಿತ್ಸೆಯ ಅಗತ್ಯವಿದೆ - ಬಿಜೆಪಿ ಮುಖಂಡ ಸಿ.ಜೆ. ಅವಿನ್ ಆರಾಧ್ಯ

ಪ್ರಮುಖ ಮುಖ್ಯಾಂಶಗಳು

  • * ಪ್ರಿಯಾಂಕ್ ಖರ್ಗೆ ಹೇಳಿಗೆಗೆ ಬಿಜೆಪಿ ಮುಖಂಡನ ತಿರುಗೇಟು
ಬೆಂಗಳೂರು: ಇತ್ತೀಚಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಪೋಬಿಯಾದಿಂದ ನರಳುತ್ತಿರುವ ಹಾಗೆ ಕಾಣುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದು ಮಹಾಲಕ್ಷ್ಮೀ ಲೇಔಟ್‌ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಜೆ. ಅವಿನ್ ಆರಾಧ್ಯ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಪಥಸಂಚಲನಕ್ಕೆ ಅಡ್ಡಿ ಮಾಡುವ ಅವರ ಪ್ರಯತ್ನ ವಿಫಲವಾದ ನಂತರ ಅವರ ಮನವ್ಯಕುಲತೆ ಹೆಚ್ಚಾಗಿದೆ. ಹಿಂದೂಗಳ ಆರಾಧ್ಯ ದೈವ ನೆಲೆಯಾದ ಅಯೋಧ್ಯೆ ನಿರ್ಮಾಣದ ಪರವಾಗಿ ಎಂದೂ ದನಿ ಎತ್ತದ ಕಾಂಗ್ರೆಸ್‌ನ ಈ ಮರಿ ನಾಯಕರಿಗೆ ದೆವ್ವದ ಮೇಲೆ ನಂಬಿಕೆ ಬಂದಂತಿದೆ ಎಂದು ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಸಮಾಜದ ಸಂಘಟನೆ, ರಾಷ್ಟ್ರೀಯತೆ, ಶಿಸ್ತು ಮತ್ತು ಸೇವಾ ಮನೋಭಾವನೆಯನ್ನು ಬೆಳೆಸುವುದರ ಮೂಲಕ ದೇಶದ ಪ್ರಗತಿಗೆ ತನ್ನದೇ ಕೊಡುಗೆ ನೀಡಿದೆ. ಆದರೆ, ಸದಾ ಕಾಲ ಹೈಕಮಾಂಡ್‌ನ ಓಲೈಕೆಗಾಗಿ ಟೀಕಿಸುವ ಮನೋಭಾವ ಹೊಂದಿರುವ ಇವರು, ಡೆವಿಲ್ ಮನಸ್ಥಿತಿಯಿಂದ ಆಚೆ ಬರುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಸರ್ಕಾರದಲ್ಲಿ ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸದ ಸಚಿವರು, ದಶಕಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿರುವ ಕುರಿತು ಸಕಾರಾತ್ಮಕವಾಗಿ ಚಿಂತಿಸಬೇಕಾಗಿದೆ. ಆದಷ್ಟು ಬೇಗ ಅವರ ಈ ಮನೋರೋಗ ಸುಧಾರಿಸಲಿ ಎಂದು ಹೇಳಿದ್ದಾರೆ.