ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
- ಈ ಹಿಂದೆ ಪ್ರಾಥಮಿಕ ಶಾಲೆಯ ಸ್ಥಳಾಂತರಕ್ಕೆ 20 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಏರಿಸಲಾಗಿದೆ.
- ಪ್ರೌಢ ಶಾಲೆಗೆ 30 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳಿಗೆ ಮತ್ತು ಪದವಿ ಪೂರ್ವ ಕಾಲೇಜು 40 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ ಏರಿಸಲಾಗಿದೆ.
- ಇನ್ನು ಹಸ್ತಾಂತರಕ್ಕೆ 40 ಸಾವಿರ ರೂ.ಗಳಿಂದ ಒಂದು ಲಕ್ಷ ರೂ., 60 ಸಾವಿರ ರೂ.ಗಳಿಂದ 1.50 ಲಕ್ಷ ರೂ., ಮತ್ತು ಪಿಯುಸಿಗೆ 80 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಬದಲಾವಣೆ (ಹಸ್ತಾಂತರ) ಮತ್ತು ಶಾಲಾ ಸ್ಥಳಾಂತರಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಹೆಚ್ಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಹಿಂದೆ ಪ್ರಾಥಮಿಕ ಶಾಲೆಯ ಸ್ಥಳಾಂತರಕ್ಕೆ 20 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಪ್ರೌಢ ಶಾಲೆಗೆ 30 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳಿಗೆ ಮತ್ತು ಪದವಿ ಪೂರ್ವ ಕಾಲೇಜು 40 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ ಏರಿಸಲಾಗಿದೆ.
ಇನ್ನು ಹಸ್ತಾಂತರಕ್ಕೆ 40 ಸಾವಿರ ರೂ.ಗಳಿಂದ ಒಂದು ಲಕ್ಷ ರೂ., 60 ಸಾವಿರ ರೂ.ಗಳಿಂದ 1.50 ಲಕ್ಷ ರೂ., ಮತ್ತು ಪಿಯುಸಿಗೆ 80 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಸಲಾಗಿದೆ.
ಹಸ್ತಾಂತರ ಬಯಸುವ ಆಡಳಿತ ಮಂಡಳಿಯು ಕನಿಷ್ಠ 2 ವರ್ಷಗಳ ಕಾಲ ಶಾಲೆಯ ವೆಚ್ಚಗಳನ್ನು ಭರಿಸಲು ಆರ್ಥಿಕವಾಗಿ ಸಬಲರಾಗಿರಬೇಕು. ಇದನ್ನು ಸಾಬೀತುಪಡಿಸಲು ಸೊಸೈಟಿ/ಟ್ರಸ್ಟ್ ಅಥವಾ ಕಂಪನಿಯ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಈ ಹಿಂದೆ ಶಾಲಾ ಸ್ಥಳಾಂತರಕ್ಕೆ ಒಂದೇ ಬಾರಿ ಅವಕಾಶವಿದ್ದ ನಿರ್ಬಂಧವನ್ನು ಕೈಬಿಡಲಾಗಿದೆ. ಕಟ್ಟಡ ಶಿಥಿಲಗೊಂಡಿದ್ದು, ಸುರಕ್ಷಿತವಲ್ಲ ಎಂದು ದೃಢಪಟ್ಟರೆ, ನಗರ ಪ್ರದೇಶದಲ್ಲಿ ಬೇರೆ ಸ್ಥಳಕ್ಕೆ ಶಾಲೆ ಸ್ಥಳಾಂತರಿಸಲು ಅವಕಾಶ ನೀಡಲಾಗಿದೆ. ಆದರೆ, ಇದಕ್ಕೆ ಹೊಸ ಶಾಲೆ ತೆರೆಯಲು ಇರುವ ಮಾನದಂಡಗಳು ಮತ್ತು ಕನಿಷ್ಠ 15 ವರ್ಷಗಳ ನೋಂದಾಯಿತ ಬಾಡಿಗೆ/ಲೀಸ್ ಕರಾರುಗಳನ್ನು ಕಡ್ಡಾಯಗೊಳಿಸಲಾಗಿದೆ.