ಎಸ್‌ಎಸ್‌ಎಲ್‌ಸಿಗೆ ಗಣಿತ ಎರಡು ಪರೀಕ್ಷೆಗೆ ಪ್ರಸ್ತಾವನೆ 
ರಾಜ್ಯ

ಎಸ್‌ಎಸ್‌ಎಲ್‌ಸಿಗೆ ಗಣಿತ ಎರಡು ಪರೀಕ್ಷೆಗೆ ಪ್ರಸ್ತಾವನೆ

ಪ್ರಮುಖ ಮುಖ್ಯಾಂಶಗಳು

  • ಸಿಬಿಎಸ್‌ಇನಲ್ಲಿ 10ನೇ ತರಗತಿಗೆ ಗಣಿತ ಸ್ಟಾೃಂಡರ್ಡ್ಸ್ ಮತ್ತು ಗಣಿತ ಬೇಸಿಕ್ ಎಂಬ ಎರಡು ಪ್ರಶ್ನೆಪತ್ರಿಕೆಗಳನ್ನು ನಿಗದಿ ಮಾಡಿ
  • ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿಯೂ ಪರಿಚಯಿಸಿದರೆ ರಾಜ್ಯದಲ್ಲಿ ಗಣಿತದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ದೃಷ್ಟಿಯಿಂದ ಅನುಕೂಲವಾಗಲಿದೆ
  • ಸಿಬಿಎಸ್‌ಇ ಮಾದರಿಯನ್ನು ಅನುಸರಿಸುವುದರಿಂದ ಉತ್ತಮ ಲಿತಾಂಶ ಪಡೆಯುವುದಕ್ಕೂ ಸಹಕಾರಿ
ಎನ್.ಎಲ್. ಶಿವಮಾದು
ಬೆಂಗಳೂರು: ಶಾಲಾ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತ ಪರೀಕ್ಷೆಯನ್ನು ಕೇಂದ್ರ ಪಠ್ಯಕ್ರಮದ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿಯೂ ಸರಳೀಕರಣಗೊಳಿಸಬೇಕು ಎಂದು ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ.
ಕೇಂದ್ರ ಪಠ್ಯಕ್ರಮದ ಸಿಬಿಎಸ್‌ಇನಲ್ಲಿ 10ನೇ ತರಗತಿಗೆ ಗಣಿತ ಸ್ಟಾೃಂಡರ್ಡ್ಸ್ ಮತ್ತು ಗಣಿತ ಬೇಸಿಕ್ ಎಂಬ ಎರಡು ಪ್ರಶ್ನೆಪತ್ರಿಕೆಗಳನ್ನು ನಿಗದಿ ಮಾಡಿ ಎರಡು ಮಾದರಿ ಪರೀಕ್ಷೆಗಳನ್ನು ನಡೆಸುತ್ತಿದೆ. 11 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ವಿಷಯ ಪಡೆಯುವವರು ಗಣಿತ ಸ್ಟಾೃಂಡರ್ಡ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಗಣಿತ ಬೇಸಿಕ್ ಪಡೆಯುವವರು ಉಳಿದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ.
ಇದೇ ಮಾದರಿಯನ್ನು ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿಯೂ ಪರಿಚಯಿಸಿದರೆ ರಾಜ್ಯದಲ್ಲಿ ಗಣಿತದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ದೃಷ್ಟಿಯಿಂದ ಅನುಕೂಲವಾಗಲಿದೆ. ಗಣಿತದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಒಟ್ಟಾರೆ ಪರೀಕ್ಷೆಯಲ್ಲಿ ೇಲ್ ಆಗುತ್ತಾರೆ. ಇದರಿಂದ ಉನ್ನತ ಶಿಕ್ಷಣದ ಕನಸು ಅಲ್ಲಿಯೇ ಕಮರಿಹೋಗುತ್ತದೆ. ಅದರ ಬದಲಾಗಿ ಸಿಬಿಎಸ್‌ಇ ಮಾದರಿಯನ್ನು ಅನುಸರಿಸುವುದರಿಂದ ಉತ್ತಮ ಲಿತಾಂಶ ಪಡೆಯುವುದಕ್ಕೂ ಸಹಕಾರಿಯಾಗಲಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪ್ರತಿಪಾದಿಸಿದ್ದಾರೆ.

ಏನಿದು ಒಂದು ವಿಷಯ ಎರಡು ಪರೀಕ್ಷೆ?

ಎರಡು ಪರೀಕ್ಷೆ ಬಗ್ಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು- 2005 (ಎನ್‌ಸಿಎ್) ರಲ್ಲಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿಯೂ ಪ್ರಸ್ತಾಪವಾಗಿದೆ. ಸಿಬಿಎಸ್‌ಇ ಪಠ್ಯಕ್ರಮದಲ್ಲಿ 2017ರಿಂದ ಈ ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ.
11 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಗಣಿತ ಸ್ಟಾೃಂಡರ್ಡ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪರೀಕ್ಷೆಯು ಗಣಿತ ಬೇಸಿಕ್‌ಗೆ ಹೋಲಿಸಿಕೊಂಡರೆ ಕಷ್ಟಕರವಾಗಿದೆ. ನೀಟ್, ಸಿಇಟಿ ಮತ್ತು ಜೆಇಇ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರು ನೋಡುತ್ತಿರುವವರಿಗೆ ಗಣಿತ ಸ್ಟಾೃಂಡರ್ಡ್ಸ್ ಹೆಚ್ಚು ಪ್ರಯೋಜನವಾಗಲಿದೆ.
10ನೇ ತರಗತಿಯಲ್ಲಿ ಗಣಿತ ಹೆಚ್ಚು ಕಠಿಣವಾಗಿದ್ದರೆ ಮುಂಬರುವ ಎರಡು ವರ್ಷಗಳು ಸುಲಭವಾಗಲಿದೆ ಎಂಬ ದೃಷ್ಟಿಕೊನ ಹೊಂದಲಾಗಿದೆ.
ವಿಜ್ಞಾನ ಹೊರತಾಗಿ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಮುಂದುವರಿಯುವ ಆಸಕ್ತಿಯುಳ್ಳವರು ಸಾಮಾನ್ಯ ಜ್ಞಾನಕ್ಕೆ ಸಾಕಾಗುವಷ್ಟರ ಗಣಿತ ಜ್ಞಾನ ಇದ್ದರೆ ಸಾಕು ಎಂದು ಭಾವಿಸುವವರು (ಉದಾ- ತಂದೆಯ ಬಿಜಿನೆಸ್ ನೋಡಿಕೊಳ್ಳುವ ಆಲೋಚನೆ, ಕ್ರೀಡಾಪಟುಗಳು, ಕಲಾವಿದರು ಸೇರಿ ಹಲವರು ಕ್ಷೇತ್ರಗಳ ಆಯ್ಕೆ ಮಾಡಿಕೊಳ್ಳುವ ಉದ್ದೇಶ ಹೊಂದಿರುವವರು) ಬೇಸಿಕ್ ಗಣಿತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಬೇಸಿಕ್ ಪರೀಕ್ಷೆಯು ಸುಲಭವಾಗಿರುವುದರಿಂದ ಸಹಜವಾಗಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಾರೆ. ಇದೇ ಮಾನದಂಡವನ್ನು ರಾಜ್ಯ ಪಠ್ಯಕ್ರಮಕ್ಕೂ ಅಳವಡಿಸಿಕೊಳ್ಳಬೇಕು ಎಂಬ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶೇ.33 ಅಂಕ ಪ್ರಸ್ತಾವನೆ ಸಲ್ಲಿಸಿದ್ದೂ ಖಾಸಗಿ ಶಾಲೆಯೇ

ಪ್ರಸಕ್ತ ಸಾಲಿನಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ತೇರ್ಗಡೆ ಅಂಕವನ್ನು ಶೇ.35ರಿಂದ 33ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಸಹ ಕ್ಯಾಮ್ಸ್ ವತಿಯಿಂದಲೇ ಸಲ್ಲಿಸಲಾಗಿತ್ತು. ಕೇಂದ್ರ ಪಠ್ಯಕ್ರಮಗಳು ಅನುಸರಿಸುತ್ತಿರುವ ಈ ನಿಯಮವನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಕಡಿಮೆ ಅಂಕ ಪಡೆದು ಅನುತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಆಸೆಯನ್ನಿಟ್ಟುಕೊಳ್ಳಲು ಉಪಯೋಗವಾಗಲಿದೆ.
ಅದೇ ರೀತಿ ಗಣಿತ ಪರೀಕ್ಷೆಯನ್ನೂ ಅಳವಡಿಸಿಕೊಂಡರೆ ಮತ್ತಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸು ಕಾಣಲು ದಾರಿಯಾಗಲಿದೆ ಎಂಬ ಆಶಯ ಹೊಂದಲಾಗಿದೆ.
"

ವಿದ್ಯಾರ್ಥಿಗಳು ಮತ್ತು ರಾಜ್ಯಪಠ್ಯಕ್ರಮದ ದೃಷ್ಟಿಕೋನದಿಂದ ಉತ್ತಮವಾಗಿದೆ. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮತ್ತು ಸಾಧಕ-ಬಾಧಕಗಳನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುವುದು.