ಅರವಿಂದ ಏಗನಗೌಡರ ಮಾತನಾಡಿದರು.
ಧಾರವಾಡ: ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ತಲುಪಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಧಾರವಾಡ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ಹೇಳಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಆಯೋಜಿಸಿದ್ದ ಮನೆ ಬಾಗಿಲಿಗೆ ಗ್ಯಾರಂಟಿ ಯೋಜನೆಗಳ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಬಿರದಲ್ಲಿ ಪಂಚ ಗ್ಯಾರಂಟಿಗಳ ಪ್ರಗತಿಯನ್ನು ಅವಲೋಕಿಸಿದ ಅವರು, ಯೋಜನೆಗಳ ವ್ಯಾಪ್ತಿಯನ್ನು ವಿವರಿಸಿದರು. ಗೃಹಲಕ್ಷಿ$್ಮ ಯೋಜನೆಯಡಿ ಹೆಬ್ಬಳ್ಳಿ ಮತ್ತು ಕನಕೂರು ಭಾಗದ 6 ಗ್ರಾಮಗಳ 4,788 ಮಹಿಳೆಯರ ಖಾತೆಗೆ ಈವರೆಗೆ 22.02 ಕೋಟಿ ರೂಪಾಯಿ ನೇರವಾಗಿ ಜಮೆಯಾಗಿದೆ. ಇದು ಮಹಿಳೆಯರ ಆಥಿರ್ಕ ಸ್ವಾವಲಂಬನೆಗೆ ದೊಡ್ಡ ಶಕ್ತಿ ತುಂಬಿದೆ ಎಂದರು.
ಅದೇರೀತಿ ಗೃಹಜ್ಯೋತಿ ಅಡಿ ಕುಟುಂಬಗಳು ಪ್ರತಿ ತಿಂಗಳು ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿವೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತಿದ್ದು, ಶೈಕ್ಷಣಿಕ, ಧಾಮಿರ್ಕ ಮತ್ತು ಆಥಿರ್ಕ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿ ಬದಲು ದೊರೆಯುತ್ತಿರುವ ನಗದು ಹಣ ಬಡ ಕುಟುಂಬಗಳ ಜೀವನೋಪಾಯಕ್ಕೆ ಆಸರೆಯಾಗಿದೆ. ಯುವನಿಧಿ ಯೋಜನೆಯು ಪದವೀಧರ ನಿರುದ್ಯೋಗಿ ಯುವಕರಿಗೆ ಆಥಿರ್ಕ ನೆರವು ನೀಡುತ್ತಿದೆ ಎಂದರು.
ಯೋಜನೆಗಳ ಲಾಭ ಪಡೆಯಲು ಅಥವಾ ತಾಂತ್ರಿಕ ತೊಂದರೆ ಇದ್ದರೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದರು.