ಸಂಕಲಾಪುರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. 
ರಾಜ್ಯ

ಸಹಕಾರ ಸಂಘಗಳ ಪ್ರಗತಿಗೆ ಸಿಗಲಿ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ಸಂಕಲಾಪುರ ಮಠದ ಕಿರಿಯ ಸ್ವಾಮೀಜಿ ಶಾಂತವೀರ ಮಲ್ಲಿಕಾರ್ಜುನ ಸ್ವಾಮಿ
  • ಪಾಳ್ಯ ಹೋಬಳಿ ಸಂಕಲಾಪುರ ಮಠದ ಸಭಾಂಗಣ
ಆಲೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಅವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಂಕಲಾಪುರ ಮಠದ ಕಿರಿಯ ಸ್ವಾಮೀಜಿ ಶಾಂತವೀರ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಸಂಕಲಾಪುರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಜನತೆಗೆ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅನುಕೂಲವಾಗಿವೆ ಎಂದು ಹೇಳಿದರು.
ಎಚ್‌ಡಿಸಿಸಿ ಬ್ಯಾಂಕ್‌ನ ಹಾಸನ ಜಿಲ್ಲಾಧ್ಯಕ್ಷ ನಾಗರಾಜ್ ಮಾತನಾಡಿ, ರೈತರು ಸಂಘದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಲ್ಲಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ರೈತರು ಸಹಕಾರ ನೀಡಬೇಕು. ಅಧ್ಯಕ್ಷ ನಟರಾಜ್ ಅವರು ಸಂಘದ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸೂಕ್ತ ಜಾಗವನ್ನು ಗುರುತು ಮಾಡಿಕೊಂಡಿದ್ದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಆರ್.ಎಸ್.ನಟರಾಜ್ ಮಾತನಾಡಿದರು. ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ಮಂಜೇಗೌಡ, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರೇವೇಗೌಡ, ಪಾಲಾಕ್ಷ ಕೆರೆಹಳ್ಳಿ, ಯಶ್ವಂತ್ ಚಿಕ್ಕೋಟೆ, ದಿಲೀಪ್, ಎಚ್.ಎಂ.ಕುಮಾರ್, ಯುವರಾಜ್, ದರ್ಶನ್, ರತ್ನಾ, ಇಂದಿರಾ, ರಾಘವೇಂದ್ರ, ಸಂಘದ ಕಾರ್ಯನಿರ್ವಣಾಧಿಕಾರಿ ಶಶಿಕಲಾ ಇತರರಿದ್ದರು.