Priority on responding to issues
ನರಸಾಪುರ: ನಿವೃತ್ತ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ನರಸಾಪುರ ಹೋಬಳಿ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್ ಹೇಳಿದರು.
ನರಸಾಪುರ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಸಂದ 2ನೇ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನಿವೃತ್ತ ನೌಕರರ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿ, ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳೋಣ. ಹೋಬಳಿಯಲ್ಲಿ ಇನ್ನು ಹೆಚ್ಚಿನ ಸಂಘಟನೆ ಮಾಡಿ ಅತಿ ಹೆಚ್ಚು ಸದಸ್ಯತ್ವ ಮಾಡಿಸಲಾಗುತ್ತದೆ.
ಹೋಬಳಿಮಟ್ಟದ ಸಭೆಗಳನ್ನು ನಡೆಸುವುದಕ್ಕೆ ಕಟ್ಟಡ ನಿಮಾರ್ಣಕ್ಕೆ ಪ್ರಯತ್ನ ಮಾಡಲಾಗುವುದು. ಅನೇಕ ಆರೋಗ್ಯ ವಿಮೆ ಯೋಜನೆಗಳು ಇದ್ದು, ಸೌಲಭ್ಯ ಪಡೆದುಕೊಳ್ಳಬೇಕು. ಸಂಘದ ರಾಜ್ಯಾಧ್ಯಕ್ಷರನ್ನು ಕರೆಸಿ ಬೃಹತ್ ಸಮಾವೇಶ ಮಾಡುವ ಚಿಂತನೆ ಹೊಂದಲಾಗಿದೆ. ಸದಸ್ಯತ ಪಡೆದ ನಿವೃತ್ತ ನೌಕರ ಮರಣ ಹೊಂದಿದರೆ ಅವರ ಕುಟುಂಬಕ್ಕೆ 5000 ರೂ.ಗಳನ್ನು ನೀಡಲು ಕ್ರಮ ವಹಿಸಲಾಗುತ್ತದೆ ಎಂದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಗೋವಿಂದಪ್ಪ, ಜಿಲ್ಲಾಧ್ಯಕ್ಷ ಪೈಲ್ವಾನ್ ಎನ್.ವಿ.ಆಂಜಿನಪ್ಪ, ನರಸಾಪುರ ಹೋಬಳಿ ಸಂಘದ ಕಾರ್ಯದರ್ಶಿ ಪ್ರಭಾಕರ್, ಖಜಾಂಚಿ ಮಹಾಲಿಂಗಂ, ಆಂತರಿಕ ಲೆಕ್ಕ ಪರಿಶೋಧಕ ಚಂದ್ರಶೇಖರಯ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಪ್ಪ, ಜಿ.ಗೋಪಾಲರೆಡ್ಡಿ, ಪದಾಧಿಕಾರಿಗಳಾದ ಶ್ರೀನಿವಾಸಯ್ಯ, ಬಚ್ಚ ರೆಡ್ಡಿ, ಸಿ.ಎಂ.ಪ್ರಕಾಶ್, ಮುನಿಕಾಟಪ್ಪ, ವೆಂಕಟೇಶ್, ಪಾಪಣ್ಣ, ವೆಂಕಟಮ್ಮ, ವಿಜಯ ಲಕ್ಷಿ$್ಮ ಇತರರು ಇದ್ದರು.