ಹಾಲು ಕೇಂದ್ರಗಳ ಭದ್ರತೆಗೆ ಆದ್ಯತೆ milk centres 
ರಾಜ್ಯ

ಹಾಲು ಕೇಂದ್ರಗಳ ಭದ್ರತೆಗೆ ಆದ್ಯತೆ milk centres

ಕೋಲಾರ ಡೆಸ್ಕ್
ಮುಳಬಾಗಿಲು: ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆ ತುಂಬಾ ಪ್ರಮುಖವಾದುದು. ಹಸು ಸಾಕಣೆಯಿಂದಲೇ ಹಲವಾರು ಕುಟುಂಬಗಳು ಜೀವನ ನಡೆಸಿಕೊಂಡು ಬರುತ್ತಿವೆ. ಹಾಗಾಗಿ ಜನಸಾಮಾನ್ಯರ ಬದುಕಿಗೆ ಆಸರೆಯಾದ ಹಾಲಿನ ಕೇಂದ್ರಗಳನ್ನು ಮತ್ತಷ್ಟು ಭದ್ರಪಡಿಸಲು ಶ್ರಮಿಸಲಾಗುವುದು ಎಂದು ಕೋಮುಲ್​ ಪೂರ್ವ ಕ್ಷೇತ್ರದ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್​. ನಾಗರಾಜ್​ ಹೇಳಿದರು.milk centres
ತಾಲೂಕಿನ ಚಿಕ್ಕಗುಟ್ಚಹಳ್ಳಿಯಲ್ಲಿ ಉತ್ಪಾದಕರ ಸಂಘದ ನೂತನ ಕಟ್ಟಡ ನಿಮಾರ್ಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈ ಗ್ರಾಮದಲ್ಲಿ ಸುಮಾರು 7 ವರ್ಷಗಳಿಂದ ಹಾಲು ಉತ್ಪಾದಕರ ಕೇಂದ್ರದಲ್ಲಿ ಹಾಲು ಶೇಖರಣೆ ಮಾಡಲಾಗುತ್ತಿದದ್ದರೂ ಸ್ವಂತ ಕಟ್ಟಡ ಇರುವುದಿಲ್ಲ. ಹಾಗಾಗಿ ನೂತನಕಟ್ಟಡ ನಿಮಾರ್ಣಕ್ಕೆ ಅನುದಾನ ನೀಡಲಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಳ್ಳಿಗಳಲ್ಲಿ ಹಾಲಿನ ಡೇರಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರಸಬೇಡಿ, ಏಕೆಂದರೆ, ಹಾಲಿನ ಕೇಂದ್ರ ಪ್ರತಿಯೊಬ್ಬರಿಗೂ ಬೇಕಾಗಿದೆ. ರಾಜಕೀಯ ಕೆಲವರಿಗಷ್ಟೇ ಬೇಕಾಗಿರುತ್ತದೆ. ಹಾಗಾಗಿ ಎಲ್ಲರಿಗೂ ಸೇರಿದ ಡೇರಿ ಆಸ್ತಿ&ಪಾಸ್ತಿಗಳನ್ನು ನಾಶ ಮಾಡುವುದು ಸರಿ ಕಾಣುವುದಿಲ್ಲ. ಇದರಿಂದಾಗಿ ಯಾರೂ ಸಹ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡಿದರು.
ಚಿಕ್ಕಗುಟ್ಚಹಳ್ಳಿಯಲ್ಲಿ ಪ್ರತಿದಿನ 600 ಲೀ. ಹಾಲು ಶೇಖರಣೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಹಾಲು ಪೂರೈಕೆ ಮಾಡಲು ರೈತರು ಮುಂದಾಗಬೇಕು. ಹೆಚ್ಚಿನ ರೀತಿಯಲ್ಲಿ ಹಾಲು ಉತ್ಪಾದನೆಯಾದರೆ ಸಂಘವೂ ಅಭಿವೃದ್ಧಿಯಾಗುತ್ತದೆ. ಖಾಸಗಿ ಹಾಲಿನ ಡೇರಿಗಳಿಗೆ ಇಲ್ಲಿ ಯಾವುದೇ ರೀತಿಯ ಅವಕಾಶ ನೀಡಬಾರದು ಎಂದು ಕಿವಿ ಮಾತು ಹೇಳಿದರು.
ಕೋಮುಲ್​ ಪಶ್ಚಿಮ ಕ್ಷೇತ್ರದ ನಿರ್ದೇಶಕ ಬಿ.ವಿ.ಸಾಮೇಗೌಡ, ಚಿಕ್ಕಗುಟ್ಚಹಳ್ಳಿ ಡೇರಿ ಅಧ್ಯಕ್ಷ ಸಿ.ಎಂ.ರಾಮಚಂದ್ರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ನಾಗರಾಜ್​, ಚೊಕ್ಕದೊಡ್ಡಿ ಡೇರಿ ಕಾರ್ಯದರ್ಶಿ ಸುರೇಶ್​, ಮುಖಂಡರಾದ ನಾಗಮಂಗಲ ಶಂಕರಪ್ಪ, ವಾಸುದೇವ, ಸಿ.ರತ್ನಪ್ಪ, ವೆಂಕಟರಾಮಪ್ಪ, ತಿಮ್ಮರಾಯಪ್ಪ, ಗಂಗುಲಪ್ಪ, ರವೀಂದ್ರ, ಸಿ.ವೆಂಕಟರಾಮಪ್ಪ, ಚನ್ನಕೇಶಪ್ಪ, ರಘುಪತಿ ಇದ್ದರು.