ಕೆಜಿಎಫ್ ಹೊರವಲಯದ Exam ಬೆಮೆಲ್ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರೀಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲ ಉಮೇಶ್ ಪ್ರಜಾಪತಿ ಮತ್ತು ಚಿತ್ರಕಲಾ ಶಿಕ್ಷಕ ಪ್ರಕಾಶ್ ಕುರ್ಜಗಿ.
- ಪ್ರಾಂಶುಪಾಲ ಉಮೇಶ್ ಪ್ರಜಾಪತಿ ಹೇಳಿಕೆ
ಕೆಜಿಎಫ್: ಶಿಕ್ಷಣ ವ್ಯವಸ್ಥೆಯೊಂದಿಗೆ ಮೋದಿಯವರು ತುಂಬಾ Exam ಹತ್ತಿರದ ಸಂಬಂಧವನ್ನಿಟ್ಟುಕೊಂಡಿದ್ದು, ಕೇವಲ ಆರ್ಥಿಕ ಬೆಳವಣಿಗೆಯನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ, ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಪ್ರಾಂಶುಪಾಲ ಉಮೇಶ್ ಪ್ರಜಾಪತಿ ಹೇಳಿದರು.
ನಗರದ ಹೊರವಲಯದ ಬೆಮೆಲ್ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ 2026ರ 9ನೇ ಆವೃತ್ತಿಯ ಪರೀಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆ, ಶಾಲೆ, ಸ್ನೇಹಿತರು ಎಂಬ ಒತ್ತಡಗಳಿಂದ ಮುಕ್ತರಾಗಿ ಸಂತೋಷದಿಂದ ಪರೀೆಗಳನ್ನು ಎದುರಿಸುವುದು ಹೇಗೆ ಎಂಬ ಅಮೂಲ್ಯ ಸಲಹೆಗಳನ್ನು ಮೋದಿ ತಮ್ಮ "ಎಕ್ಸಾಮ್ ವಾರಿಯರ್ಸ್' ಪುಸ್ತಕದಲ್ಲಿ ತಿಳಿಸಿದ್ದು, ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಪರೀೆ ಎಂಬ ಯುದ್ಧದಲ್ಲಿ ಸುಲಭವಾಗಿ ಜಯಗಳಿಸಲು ಸಾಧ್ಯವಾಗುತ್ತದೆ ಎಂದರು.
ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಪ್ರಜೆಗಳಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ನೀವು ಏನನ್ನು ಕಲಿಯುತ್ತೀರೋ, ಕಲಿಕೆಯನ್ನು ಆಸ್ವಾದಿಸಿದಾಗ ಮಾತ್ರ ಅದು ನಿಮ್ಮ ಜೀವನಪರ್ಯಂತ ನಿಮ್ಮೊಡನೆ ಇರಲು ಸಾಧ್ಯವಾಗುತ್ತದೆ ಎಂದರು.
ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜನ್ಮ ದಿನವನ್ನು ಪರಾಕ್ರಮ್ ದಿವಸ್ ಆಗಿ ಆಚರಿಸಲು ಜ.23 ರಂದು ಪರೀಾ ಪೆ ಚರ್ಚಾ ಕಾರ್ಯಕ್ರಮದ 9 ನೇ ಆವೃತ್ತಿಯಡಿಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಅಂತರ ಶಾಲಾ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಿಬಿಎಸ್ಇ ಮತ್ತು ರಾಜ್ಯ ಮಂಡಳಿಗಳಿಗೆ ಸಂಯೋಜಿತವಾಗಿರುವ ಸುಮಾರು 10 ಶಾಲೆಗಳ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನಡೆಯುವ ರಸಪ್ರಶ್ನೆ ಸ್ಪರ್ಧೆಗೆ ನೋಡಲ್ ಕೇಂದ್ರವಾಗಿ ಕಾರ್ಯನಿರ್ವಹಿಸುವ ಪ್ರತಿಯೊಂದು ಶಾಲೆಗೂ ಎನ್ಸಿಇಆರ್ಟಿ ಈ ರಸಪ್ರಶ್ನೆ ಸಿದ್ಧಪಡಿಸಿದ್ದು, ಬಿಇಎಂಎಲ್ ಕಾಂಪೋಸಿಟ್ ಪಿಯು ಕಾಲೇಜಿನ ವೀಣಾ ಮಾಧುರಿ ಪ್ರಥಮ ಸ್ಥಾನ ಪಡೆದರೆ, ಜೆಎನ್ವಿ ಚಿಕ್ಕಬಳ್ಳಾಪುರದ ಗೋಪಿಕಾ ಎಸ್, ಮಾಲೂರಿನ ಜೆಎಸ್ಎಸ್ ಪಬ್ಲಿಕ್ ಶಾಲೆಯ ಜಯವರ್ಧನ್ ವಿ ಮೇಟಿ ಜಂಟಿಯಾಗಿ ದ್ವೀತಿಯ ಸ್ಥಾನ ಪಡೆದುಕೊಂಡರು. ಬಂಗಾರಪೇಟೆಯ ಜೈನ್ ಗ್ಲೋಬಲ್ ಶಾಲೆಯ ಪ್ರಣವ್ ಮತ್ತು ಬಿಇಎಂಎಲ್ ಕಾಂಪೋಸಿಟ್ ಕಾಲೇಜಿನ ನವ್ಯ ಸಿಎಸ್ ಜಂಟಿಯಾಗಿ ಮೂರನೇ ಸ್ಥಾನ ಪಡೆದುಕೊಂಡರು.
ವಿಜೇತರು ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಪರೀಾ ಭಯವನ್ನು ಹೋಗಲಾಡಿಸಿ ಪರೀೆಯನ್ನು ಹಬ್ಬವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಚಿತ್ರಕಲಾ ಶಿಕ್ಷಕ ಪ್ರಕಾಶ್ ಕುರ್ಜಗಿ ಮತ್ತು ವಿವಿಧ ಶಾಲೆಗಳ ಶಿಕ್ಷಕರು ಇದ್ದರು.