Priority given to irrigation projects 
ರಾಜ್ಯ

ನೀರಾವರಿ ಯೋಜನೆಗೆ ಆದ್ಯತೆ

ತುಮಕೂರು ಡೆಸ್ಕ್
ಕೊರಟಗೆರೆ: ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಮುಂಚೂಣಿಯಲ್ಲಿರಬೇಕು ಎಂಬ ದಿಸೆಯಲ್ಲಿ ರಸ್ತೆ, ನೀರಾವರಿ ಹಾಗೂ ಗ್ರಾಮೀಣ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಗರುಡಾಚಲ, ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳಿಗೆ ಅಡ್ಡಲಾಗಿ ಚೆಕ್ ಡ್ಯಾಂ ಕಂ ಬ್ರಿಡ್ಜ್ ಮತ್ತು ವಿವಿಧ ರಸ್ತೆ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ವಾತನಾಡಿದರು.
ರಾಜ್ಯ ಸರ್ಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ 2025-26ನೇ ಆರ್ಥಿಕ ವರ್ಷದಲ್ಲಿ 218 ಕೋಟಿ ರೂ.
ಮಂಜೂರು ಆಗಿದ್ದು, ಪ್ರಸ್ತುತ 60 ಕೋಟಿಯ ವಿವಿಧ ನೀರಾವರಿ ಮತ್ತು ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದೇನೆ. ಮುಂಬರುವ ಬಜೆಟ್‌ನಲ್ಲಿ ನೀರಾವರಿ ಯೋಜನೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದರು.
ಶಾಶ್ವತ ನೀರಾವರಿಗೆ ಎತ್ತಿನಹೊಳೆ ಯೋಜನೆಯಿಂದ 69 ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಅಂತರ್ಜಲ ಅಭಿವೃದ್ಧಿಗೆ ಗರುಡಾಚಲ, ಜಯಮಂಗಲಿ, ಸುವರ್ಣಮುಖಿ ನದಿಗಳಿಗೆ ಅಡ್ಡಲಾಗಿ 38 ಕೋಟಿ ರೂ. ಅನುದಾನದಲ್ಲಿ 10 ಕಡೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ವಾಣ ಮಾಡಲಾಗುವುದು. ಅರಸಿಕೆರೆಯಿಂದ ತುಮಕೂರು ನಡುವೆ ಅರಣ್ಯ ಇಲಾಖೆ ಅನುಮತಿ ಸಮಸ್ಯೆಯಿಂದ ಎತ್ತಿನಹೊಳೆ ಕಾಮಗಾರಿ ವಿಳಂಬವಾಗಿದೆ. ಕೇಂದ್ರ ಸಚಿವರ ಜತೆ ಡಿಸಿಂ ಡಿ.ಕೆ.ಶಿವಕುವಾರ್ ಚರ್ಚಿಸಿದ್ದಾರೆ. ಕೇಂದ್ರ ಅನುಮತಿ ನೀಡಿದರೆ ಈ ವರ್ಷವೇ ತುಮಕೂರಿಗೆ ಎತ್ತಿನಹೊಳೆ ಹರಿಯಲಿದೆ ಎಂದು ಹೇಳಿದರು.
14 ಕಾಮಗಾರಿಗಳಿಗೆ ಅಡಿಗಲ್ಲು : ಸುಮಾರು 22 ಕೋಟಿ ರೂ. ವೆಚ್ಚದಲ್ಲಿ 14 ವಿವಿಧ ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರು. ನಂತರ ಹಾಲು ಉತ್ಪಾದಕರ ಸಹಕಾರ ಸಂ, ಅಂಬೇಡ್ಕರ್ ಭವನ, ವಿಎಸ್ಸೆಸ್ಸೆಎನ್ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಶ: ತೋವಿನಕೆರೆಗೆ ಸರ್ಕಾರದಿಂದ 36 ಕೋಟಿ ರೂ. ವೆಚ್ಚದ ಹೈಟೆಕ್ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದೆ. ಕೊರಟಗೆರೆ ಪಟ್ಟಣಕ್ಕೆ ಹೈಟೆಕ್ ಆಸ್ಪತ್ರೆಗೆ 40 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅಡಿಗಲ್ಲು ಹಾಕಬೇಕಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಕೋಳಾಲಕ್ಕೆ ಹೈಟೆಕ್ ಆಸ್ಪತ್ರೆ ಮಂಜೂರಾಗಲಿದೆ. ಕಾರ್ಮಿಕ ಇಲಾಖೆಯ 32 ಕೋಟಿ ರೂ. ವಸತಿನಿಲಯ ತೋವಿನಕೆರೆಯಲ್ಲಿ ನಿರ್ವಾಣ ಆಗುವ ಬಗ್ಗೆ ಗೃಹಸಚಿವರು ವಾಹಿತಿ ನೀಡಿದರು.
ಇರಾನ್, ದುಬೈ, ಬೆಹರೇನ್, ಸೌದಿ ಅರೇಬಿಯಾದಲ್ಲಿ ಕರ್ನಾಟಕದ ಶಾಸಕರು, ವ್ಯಾಪಾರಸ್ಥರು ಸೇರಿ ಪ್ರವಾಸಿಗರು ಸಿಲುಕಿದ್ದಾರೆ. ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ವಾಡಿದೆ. ವಿದೇಶ ಸಚಿವ ಜೈಶಂಕರ್ ವಿಶೇಷ ನಿಯೋಗದ ಮೂಲಕ ಭಾರತೀಯರ ರಕ್ಷಣೆಗೆ ವಿದೇಶಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ.
ಡಾ.ಜಿ.ಪರಮೇಶ್ವರ, ಗೃಹಸಚಿವ