ಬೆಂಡಿಗಾನಹಳ್ಳಿಯಲ್ಲಿ ಹಾಲು ಉತ್ಪಾದಕರಿಗೆ ವೈದ್ಯಕಿಯ ಪರಿಹಾರ ಚೆಕ್​ಗಳನ್ನು ಬಮುಲ್​ ನಿರ್ದೇಶಕ ಬಿ.ವಿ ಸತೀಶ್​ಗೌಡ ವಿತರಿಸಿದರು ಉಪವ್ಯವಸ್ಥಾಪಕ ಶ್ರೀರಾಮ್​, ಬಮುಲ್​ ಟ್ರಸ್ಟ್​ ನವೀನ್​ ಕುಮಾರ್​, ಸಹಕಾರ ಬ್ಯಾಂಕ್​ ಸಿಇಒ ಎಸ್​.ಕೆ.ವಸಂತ್​ಕುಮಾರ್​, ಕಂಬಳೀಪುರ ಗ್ರಾಪಂ ಅಧ್ಯಕ್ಷ ಮಲ್ಲಿಕಾ ಅವಿನ್​, ಸಹಕಾರ ಬ್ಯಾಂಕ್​ ನಿರ್ದೇಶಕ ವಿನಯ್​ಹಾಗೂ ಹಾಲು ಉತ್ಪಾದಕರು, ಸಹಕಾರ ಸಂದ ಕಾರ್ಯದರ್ಶಿಗಳು ಇದ್ದರು. 
ರಾಜ್ಯ

ಹಾಲು ಉತ್ಪಾದಕರ ಆರೋಗ್ಯ ರಕ್ಷಣೆಗೆ ಆದ್ಯತೆ / SULIBELE

ಸೂಲಿಬೆಲೆ : ಸಹಕಾರ ಸಂಗಳಿಗೆ ಹಾಲು ಪೂರೈಕೆ ಮಾಡುತ್ತಿರುವ ಉತ್ಪಾದಕರ ಆರೋಗ್ಯ ರಕ್ಷಣೆಗೆ ಬಮುಲ್​ ಹೆಚ್ಚು ಆದ್ಯತೆ ನೀಡುತ್ತಿದೆ. ಒಕ್ಕೂಟಕ್ಕೆ ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡಿ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ಗೌಡ ಹೇಳಿದರು.
ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿಶುಕ್ರವಾರ ಹೊಸಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಲು ಸರಬರಾಜು ಮಾಡುವ ಸಕ್ರಿಯ ಸದಸ್ಯರು ಹಾಗೂ ಅವರ ಅವಲಂಬಿತರಿಗೆ ವೈದ್ಯಕಿಯ ಪರಿಹಾರ ಚೆಕ್​ ವಿತರಿಸಿ ಮಾತನಾಡಿದರು. 2025&26ನೇ ಸಾಲಿನಲ್ಲಿ ಹೈನುಗಾರಿಕೆ ಮಾಡುತ್ತಿರುವ ಕುಟುಂಬದ ಸದಸ್ಯರು ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದರೆ ಅಂತಹ ಸದಸ್ಯರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವೈದ್ಯಕಿಯ ಪರಿಹಾರ ಚೆಕ್​ಗಳನ್ನು ನೀಡಲಾಗುತ್ತಿದೆ. ನಕ್ಕನಹಳ್ಳಿ, ನಡುವತ್ತಿ, ಬೆಟ್ಟಹಳ್ಳಿ, ಬಿಸನಹಳ್ಳಿ, ಕಮ್ಮಸಂದ್ರ, ಎಂ.ಸತ್ಯವಾರ ಗ್ರಾಮಗಳಲ್ಲಿ ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದ 8 ಮಂದಿಗೆ ಚಿಕಿತ್ಸೆಗೆ ಅನುಗುಣವಾಗಿ 15, 20, 25 ಸಾವಿರ ರೂ.ನಂತೆ ಒಟ್ಟು 8 ಮಂದಿಗೆ 2 ಲಕ್ಷ ರೂ.ಗಳಷ್ಟು ಹಾಗೂ ಮರಣ ಹೊಂದಿದ ಸದಸ್ಯರ ನಾಮಿನಿಗೆ ಪರಿಹಾರಧನದ ಚೆಕ್​ ನೀಡಿದೆ. ಹೈನುಗಾರರ ಹಿತ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಿ ಅವರ ಕಷ್ಟ ಸುಖಗಳಿಗೆ ನೆರವಾಗುವ ಪ್ರಾಮಾಣಿಕ ಪ್ರಯತ್ನವನ್ನು ಬಮುಲ್​ ವತಿಯಿಂದ ಮಾಡುತ್ತಿದ್ದೇನೆ ಎಂದರು.
ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್​ ಮಾತನಾಡಿ, ಬಮುಲ್​ ಟ್ರಸ್ಟ್​ ವತಿಯಿಂದ ಹಾಲು ಉತ್ಪಾದಕರಿಗೆ ನಿರ್ದೇಶಕ ಬಿ.ವಿ. ಸತೀಶ್​ಗೌಡ ಅವರ ಅನುದಾನದಲ್ಲಿ ವರ್ಷಕ್ಕೆ ಸುಮಾರು 15 ಲಕ್ಷ ರೂ.ನಷ್ಟು ವೈದ್ಯಕಿಯ ವೆಚ್ಚದ ಪರಿಹಾರವನ್ನು ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರಿಗೆ ನೀಡುತ್ತಿದ್ದೇವೆ. ಒಳರೋಗಿಯಾಗಿ ಹಾಲು ಉತ್ಪಾದಕರು ಚಿಕಿತ್ಸೆ ಪಡೆದುಕೊಂಡಿದ್ದರೆ, ಅಂತಹವರಿಗೆ ವೈದ್ಯಕಿಯ ನೆರವು ನೀಡಲಾಗುತ್ತಿದೆ. ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಇದರಿಂದ ಅರ್ಥಿಕವಾಗಿ ಉತ್ಪಾದಕರಿಗೂ ಹಾಗೂ ಒಕ್ಕೂಟಕ್ಕೂ ಲಾಭವಾಗಲಿದೆ ಎಂದರು.
ಬೆಂಗಳೂರು ಹಾಲು ಒಕ್ಕೂಟದ ವೈದ್ಯ ಡಾ.ಡಿ.ಎಂ.ಸಂತೋಷ್​ ಕುಮಾರ್​ ಮಾತನಾಡಿ, ಫೆಬ್ರವರಿಯಿಂದ ಮಾರ್ಚ್​ನಲ್ಲಿ ತಿಂಗಳಲ್ಲಿ ಹಾಲು ಉತ್ಪಾದನೆಯ ಗುಣಮಟ್ಟದಲ್ಲಿ ಕಡಿಮೆಯಾಗುತ್ತಿದೆ. ಈ ತಿಂಗಳಲ್ಲಿ ಗುಣಮಟ್ಟ ಹೈನುಗಾರರು ಕಾಪಾಡುವತ್ತ ಗಮನಹರಿಸಬೇಕು. ಗುಣಮಟ್ಟ ಕಾಪಾಡಲು ಅಗತ್ಯ ತಾಂತ್ರಿಕ ಸಲಹೆ, ಸೂಚನೆಗಳನ್ನು ಬಮುಲ್​ ವತಿಯಿಂದ ಕಾಲ ಕಾಲಕ್ಕೆ ನೀಡುತ್ತಿದ್ದು, ಹೈನುಗಾರರು ಇದನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟ ಮತ್ತು ಹಾಲಿನ ಪ್ಯಾಟ್​ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದರು