ಸಕಲೇಶಪುರದಲ್ಲಿ ಅಂಗವಿಕಲರಿಗೆ ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಶಾಸಕ ಸೀಮೆಂಟ್ ಮಂಜು ವಿತರಿಸಿದರು.
- ತಾಲೂಕು ಪಂಚಾಯಿತಿಯ 1.36 ಕೋಟಿ ರೂ.ಅನುದಾನ
- ಗ್ರಾಮೀಣ ಭಾಗದಲ್ಲಿ ವಿವಿಧ ಕಾಮಗಾರಿ
ಸಕಲೇಶಪುರ: ತಾಲೂಕು ಪಂಚಾಯಿತಿಯ 1.36 ಕೋಟಿ ರೂ.ಅನುದಾನದಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಸೀಮೆಂಟ್ ಮಂಜು ಹೇಳಿದರು.
ತಾಲೂಕು ಪಂಚಾಯಿತಿ ಅವರಣದಲ್ಲಿ ಮಂಗಳವಾರ ಅಂಗವಿಕಲರಿಗೆ ಸ್ಕೂಟರ್‌ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, 9.27 ಲಕ ್ಷರೂ. ವೆಚ್ಚದಲ್ಲಿ ವಿದ್ಯುತ್ ಚಾಲಿತ 7 ಸ್ಕೂಟರ್‌ಗಳನ್ನು ವಿತರಿಸಲಾಗಿದೆ. ಅಂತೆಯೇ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್, ಬಿಸಿನೀರು ಯಂತ್ರ ಸೇರಿದಂತೆ ಹಲವು ಯಂತ್ರಗಳನ್ನು ವಿತರಿಸಲಾಗಿದೆ. ಇದಲ್ಲದೆ 30 ಲಕ್ಷ ರೂ.ವೆಚ್ಚದಲ್ಲಿ ತಾಲೂಕಿನ 24 ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿದೆ ಎಂದರು.
ತಾಪಂ ಇಒ ಗಂಗಾಧರ್, ಸಿಡಿಪಿಒ ಶಾಂತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.