Priority given to development to pay off debt
ಬೂದಿಕೋಟೆ : ಕಳೆದ ನಾಲ್ಕು ಚುನಾವಣೆಗಳಲ್ಲಿ ರಾಜಕೀಯ ಪೈಪೋಟಿ ಇದ್ದರೂ ಕಾಂಗ್ರೆಸ್ ಪರ ಬಹುಮತ ನೀಡಿ ಗೆಲ್ಲಿಸಿರುವುದರಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಬಂಗಾರಪೇಟೆ ತಾಲೂಕಿನ ಗುಲ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಭೇಶ್ವರಸ್ವಾಮಿ 6ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಗುಲ್ಲಹಳ್ಳಿಯಿಂದ ತಮಿಳುನಾಡು ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹಣ ಮಂಜೂರು ಆಗಿದೆ. ಮೂತನೂರು ರಸ್ತೆಗೆ ಹಣ ಮಂಜೂರು ಮಾಡಿಸಿದ್ದೇನೆ. ಭೈರಪ್ಪ ದೇವಸ್ಥಾನಕ್ಕೆ ಹಣ ಮಂಜೂರಾಗಿದೆ. ಶುದ್ಧ ಕುಡಿಯುವ ಟಕ ಮಂಜೂರು ಮಾಡಿಸಿದ್ದೇನೆ. ಗುಟ್ನೂರು ಚಿಕ್ಕಪುರ, ಕೊತ್ತೂರು, ಗುಟ್ಟಹಳ್ಳಿ, ಸೊಂಟಿಗಾನಹಳ್ಳಿ, ಪಂಚಾಯಿತಿ ವ್ಯಾಪ್ತಿಯಲ್ಲಿ 8 ಹೈಮಾಸ್ಟ್ ವಿದ್ಯುತ್ ದೀಪ ಹಾಕಿಸಲಾಗಿದೆ ಎಂದು ಹೇಳಿದರು.
ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಕೃಷ್ಣಪ್ಪ, ಮುನಿತಿಮ್ಮಪ್ಪ, ನಾಗರಾಜ್, ಚಂದ್ರಪ್ಪ, ಪ್ರಕಾಶ್, ವೆಂಕಟಾಚಲಪತಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ, ದೊಡ್ಡೋರು ಗೋವಿಂದಪ್ಪ, ಎಂ.ಹೊಸಹಳ್ಳಿ ಮೋಲೋಜಿ ರಾವ್ ಇತರರು ಇದ್ದರು.