ಕಮಲಾಪುರದಲ್ಲಿ ವಿವಿಧ ಸರ್ಕಾರಿ ಕಚೇರಿಗಳು ಸ್ಥಾಪಿಸಬೇಕು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಕಾರ್ಮಿಕ ಮುಖಂಡ ಸುನೀಲ್​ ಮಾನ್ಪಡೆ ಅವರು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್​ ರ್ಖಗೆಗೆ ಮನವಿಪತ್ರ ಸಲ್ಲಿಸಿದರು. ಸೋಮಶೇಖರ ಸಿಂಗೆ, ಮೈಲಾರಿ ದೊಡ್ಡಮನಿ, ಸತೀಶ ಹೋಟಕರ್​ ಇತರರಿದ್ದರು. 
ರಾಜ್ಯ

ಕಮಲಾಪುರ ಪ್ರಗತಿಗೆ ಆದ್ಯತೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆಗೆ ಸುನೀಲ್​ ಮಾನ್ಪಡೆ ಮನವಿ
 ಕಮಲಾಪುರ: ತಾಲೂಕು ಕೇಂದ್ರ ಘೋಷಣೆಯಾಗಿ ಸಾಕಷ್ಟು ವರ್ಷವಾಗಿದ್ದು, ಈವರೆಗೂ ಹಲವು ಸರ್ಕಾರಿ ಕಚೇರಿಗಳು ಪ್ರಾರಂಭವಾಗಿಲ್ಲ. ಇದರಿಂದ ಜನರು ಸಣ್ಣ-ಪುಟ್ಟ ಕೆಲಸಕ್ಕೂ ದೂರದ ಆಳಂದ ಹಾಗೂ ಕಲಬುರಗಿಗೆ ತಿರುಗಾಡುವಂತಾಗಿದೆ ಎಂದು ಕಾರ್ಮಿಕ ಮುಖಂಡ ಸುನೀಲ್​ ಮಾನ್ಪಡೆ ತಿಳಿಸಿದರು.
ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ಆಳಂದ ತಾಲೂಕಿನಿಂದ ಬೇರ್ಪಟ್ಟ ಸುಮಾರು 20 ಗ್ರಾಮಗಳಿಗೆ ಕಮಲಾಪುರ ತಾಲೂಕು ಕೇಂದ್ರಕ್ಕೆ ತಲುಪಲು ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕು. ಈ ಹಳ್ಳಿಗಳಲ್ಲಿ ವಸತಿಶಾಲೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸಮಗ್ರ ತಾಲೂಕಿನ ಪ್ರಗತಿಗೆ ಕಾಳಜಿ ವಹಿಸಬೇಕು ಎಂದು ಕೋರಿದರು.
ತಾಲೂಕು ಕೇಂದ್ರಕ್ಕೆ ನೇರ ರಸ್ತೆ ಸಂಪರ್ಕ ಕಲ್ಪಿಸುವ ಲಾಡಮುಗಳಿ, ಅಂಬಲಗಾ, ಕಲಕುಟಗಿ, ಹಿಪ್ಪರಗಿ ರಸ್ತೆ ಪೂರ್ಣಗೊಳಿಸಬೇಕು. ವಿಕೆ ಸಲಗರ ಹೊಬಳಿಯ ಬಹು ಗ್ರಾಮ ಕುಡಿವ ನೀರು ಯೋಜನೆ ಅನುಷ್ಠಾನ ಮಾಡಬೇಕು. ಆಳಂದ ತಾಲೂಕಿನಿಂದ ಬೇರ್ಪಟ್ಟ ವಿಕೆ ಸಲಗರ ಹೋಬಳಿಗೆ ಪ್ರತ್ಯೇಕ ಪೊಲೀಸ್​ ಠಾಣೆ ಒದಗಿಸಿಕೊಡಬೇಕು. ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ, ಅಂಬೇಡ್ಕರ್​ ವಸತಿ ಶಾಲೆ ಸ್ಥಾಪಿಸಬೇಕು. ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ, ಉಪನೋಂದಣಾಧಿಕಾರಿ, ಕೃಷಿ ಇಲಾಖೆ ಕಚೇರಿಗಳನ್ನು ಸ್ಥಾಪಿಸಬೇಕು. ಸುಸಜ್ಜಿತ ತಹಸಿಲ್​ ಹಾಗೂ ಬಸ್​ ನಿಲ್ದಾಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಸೋಮಶೇಖರ ಸಿಂಗೆ, ಮೈಲಾರಿ ದೊಡ್ಡಮನಿ, ಸತೀಶ ಹೋಟಕರ್​ ಇತರರಿದ್ದರು.