ಹೂಡದಳ್ಳಿ ಕೆರೆ ಅಭಿವೃದ್ಧಿ ಪಡಿಸುವುದರ ಜತೆಗೆ ಹಳ್ಳಿಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಹೂಡದಳ್ಳಿಯಿಂದ ಚಿಂಚೋಳಿವರೆಗೆ ಗ್ರಾಮಸ್ಥರು ಪಾದಯಾತ್ರೆ ನಡೆಸಿ ಸಣ್ಣ ನೀರಾವರಿ ಇಲಾಖೆ ಕಚೇರಿಯ ಸಹಾಯಕ ನೀರಾವರಿ ಅಭಿಯಂತ ಶಿವಾಜಿ ರಾಠೋಡ್​ಗೆ ಮನವಿಪತ್ರ ಸಲ್ಲಿಸಿದರು. ಮೊಗಲಪ್ಪ ಕಟ್ಟಿ, ಹಣಮಂತ ಹೋಳ್ಕರ್​, ರೇವಣಸಿದ್ದಪ್ಪ ಮೇಲಿನಕೇರಿ, ಗಂಗಾಧರ ಕುಲಕರ್ಣಿ, ಕೈಲಾಸ ಬಿರಾದಾರ, ಗೋಪಾಲ ಎಂ.ಪಿ., ಓಂಕಾರ, ಆಕಾಶ, ಮಲ್ಲಮ್ಮ, ಜಯಮ್ಮ ಇತರರಿದ್ದರು. 
ರಾಜ್ಯ

ಹೂಡದಳ್ಳಿ ಅಭಿವೃದ್ಧಿಗೆ ಆದ್ಯತೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಿಂದ 14 ಕಿಮೀ ಪಾದಯಾತ್ರೆ
  • ಕೆರೆ ದುರಸ್ತಿಗಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ
ಚಿಂಚೋಳಿ: ಮಾದರಿ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್​ ಅವರು ಜನಿಸಿದ ಊರು ಹೂಡದಳ್ಳಿಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು, ನೂರಾರು ಎಕರೆಗೆ ನೀರುಣಿಸುವ ಕೆರೆಯನ್ನು ಉಳಿಸಬೇಕು ಎಂದು ಒತ್ತಾಯಿಸಿ ಹೂಡದಳ್ಳಿಯಿಂದ ಪಟ್ಟಣದಲ್ಲಿರುವ ಸಣ್ಣ ನೀರಾವರಿ ಇಲಾಖೆ ಕಚೇರೆವರೆಗೂ ಗ್ರಾಮಸ್ಥರು ಗುರುವಾರ ಬೃಹತ್​ ಪಾದಯಾತ್ರೆ ನಡೆಸಿದರು.
ಸುಮಾರು 14 ಕಿಮೀ. ಪಾದಯಾತ್ರೆಯೊಂದಿಗೆ ಆಗಮಿಸಿದ ಹೂಡದಳ್ಳಿ ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆ ಕಚೇರಿ ಎದುರು ಧರಣಿ ಆರಂಭಿಸಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ 1989ರಲ್ಲಿ ಟಿಕೆಟ್​ ನೀಡಿ ರಾಜಕೀಯ ಮುನ್ನುಡಿ ಬರೆದ ವೀರೇಂದ್ರ ಪಾಟೀಲ್​ ಅವರ ಹುಟ್ಟೂರು ಇಂದು ಮೂಲ ಸೌಕರ್ಯವಿಲ್ಲದೆ ಪರದಾಡುತ್ತಿದೆ. ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೂಡಲೇ ಹೂಡದಳ್ಳಿ ಕೆರೆ ಏರಿ (ಬಂಡ್​) ಮೇಲಿನ ಗಿಡ&ಗಂಟಿಗಳನ್ನು ತೆರವು ಮಾಡಬೇಕು. ಕಾಲುವೆ ದುರಸ್ತಿ ಮಾಡಬೇಕು. ಕೆರೆ ಕೆಳಭಾಗದಲ್ಲಿ ಕಾಣಿಸಿಕೊಂಡಿರುವ ಕಂದಕ ಮುಚ್ಚಬೇಕು. ಹೂಡದಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿವ ನೀರು, ಶೌಚಗೃಹ, ಸುತ್ತುಗೋಡೆ ನಿರ್ಮಾಣ ಮಾಡಬೇಕು. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು. ಸ್ಮಾರಕ ಭವನ, ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು. ಹೂಡದಳ್ಳಿಯು ಪ್ರವಾಸೋದ್ಯಮ ನಕಾಶೆಯಲ್ಲಿ ಸೇರ್ಪಡೆಗೊಳಿಸಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು. ಯುವಕರಿಗೆ ಉದ್ಯೋಗ ನೀಡಲು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳಿಗೆ ಸ್ಪಂದಿಸದೆ ರ್ನಿಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಹಾಯಕ ನೀರಾವರಿ ಇಲಾಖೆ ಅಭಿಯಂತರ ಶಿವಾಜಿ ರಾಠೋಡ್​ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ 21 ಕೆರೆಗಳ ನಿರ್ವಹಣೆಗೆ 25 ಲ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ನಿರ್ವಹಣೆಗೆ ಮುಂದಾಗುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಮೊಗಲಪ್ಪ ಕಟ್ಟಿ, ಹಣಮಂತ ಹೋಳ್ಕರ್​, ರೇವಣಸಿದ್ದಪ್ಪ ಮೇಲಿನಕೇರಿ, ಗೋಪಾಲ ಎಂ.ಪಿ., ಗಂಗಾಧರ ಕುಲಕರ್ಣಿ, ಕೈಲಾಸ ಬಿರಾದಾರ, ಓಂಕಾರ, ಆಕಾಶ, ಮಲ್ಲಮ್ಮ, ಜಯಮ್ಮ, ಲ್ಮ, ಶರಣಮ್ಮ, ಅಶೋಕ ಕಾಕಿ, ಲೋಕೇಶ ಹಡಪದ, ಸುನೀತಾ, ಶ್ರೀದೇವಿ, ನಾಗಮ್ಮ, ಪ್ರಕಾಶ ಕೇಣಗಿ, ಪೆಂಟೆಮ್ಮ ಇತರರಿದ್ದರು.