ಸೇಡಂ ಪತ್ರಿಕಾ ಭವನದ ಆವರಣದಲ್ಲಿ ವಿವಿಧ ಪ್ರಶಸ್ತಿ ಪುರಸತ ಪತ್ರಕರ್ತರನ್ನು ಕಾರ್ಯನಿರತ ಪತ್ರಕರ್ತರ ಸಂದಿಂದ ಸತ್ಕರಿಸಲಾಯಿತು. ಜಗನ್ನಾಥ ತರನಳ್ಳಿ, ನಾಗಯ್ಯಸ್ವಾಮಿ ಬೊಮ್ನಳ್ಳಿ, ಸುಧೀರ ಬಿರಾದಾರ ಇತರರಿದ್ದರು. 
ರಾಜ್ಯ

ಸಮಾಜಮುಖಿ ವರಿದಿಗಾರಿಕೆಗೆ ಆದ್ಯತೆ ನೀಡಿ

ಸೇಡಂ: ಯುವ ಪತ್ರಕರ್ತರು ಕೇವಲ ಕಾರ್ಯಕ್ರಮಗಳ ಸುದ್ದಿಗೆ ಆದ್ಯತೆ ನೀಡದೆ, ಜನಪರ ಮತ್ತು ಸಮಾಜಮುಖಿ ಸುದ್ದಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿ.ಎನ್​.ಕಾಗಲಕರ್​ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಪತ್ರಿಕಾ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದಿಂದ ಶನಿವಾರ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೇಡಂ ನೆಲದಲ್ಲಿ ಸಹಕಾರ ಹಾಗೂ ಸೌಹಾರ್ದತೆಯ ವಾತಾವರಣವಿದ್ದು, ಈ ನೆಲದ ಅನೇಕ ಪ್ರತಿಭೆಗಳಿಗೆ ಪ್ರಶಸ್ತಿ ಒಲಿದು ಬರುತ್ತಿವೆ. ಅವರ ಕಾರ್ಯವು ಜಿಲ್ಲೆ ಸೇರಿ ರಾಜ್ಯಮಟ್ಟದವರೆಗೂ ಗುರುತಿಸುವಂತಾಗಿರುವುದು ಗಮನಾರ್ಹ ಸಂಗತಿ ಎಂದರು. ಕುಮಾರ ಶ್ರೀ ಪ್ರಶಸ್ತಿ ಪುರಸ್ಕೃತ ಮಹಿಪಾಲರೆಡ್ಡಿ ಮುನ್ನೂರ, ವಿ.ಎನ್​.ಕಾಗಲಕರ್​ ಪ್ರಶಸ್ತಿ ಪುರಸ್ಕೃತ ದೇವೇಂದ್ರಪ್ಪ ಅವಂಟಿ, ಕಾರ್ಯನಿರತ ಪತ್ರಕರ್ತ ಸಂದ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಶರಣು ಮಹಾಗಾಂವ್​, ಪಾಟೀಲ್​ ಪುಟ್ಟಪ್ಪ ಪ್ರಶಸ್ತಿ ಪುರಸ್ಕೃತ ಸಿದ್ದಯ್ಯಸ್ವಾಮಿ ಆಡಕಿ ಮಾತನಾಡಿದರು. ತಾಲೂಕು ಉಪಾಧ್ಯಕ್ಷ ಜಗನ್ನಾಥ ತರನಳ್ಳಿ, ಗೌರವ ಸಲಹೆಗಾರ ನಾಗಯ್ಯಸ್ವಾಮಿ ಬೊಮ್ನಳ್ಳಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುಧೀರ ಬಿರಾದಾರ, ಕಾರ್ಯದರ್ಶಿ ಅವಿನಾಶ ಬೋರಂಚಿ, ರಾಧಾಕೃಷ್ಣ, ಗಣೇಶ ನೀಲಹಳ್ಳಿ, ಬಸನಗೌಡ ಮದ್ನಿ, ಭೀಮರಾವ ಹಲಕರ್ಟಿ ಇದ್ದರು.