Prioritize infrastructure.
ಪಟ್ಟನಾಯಕನಹಳ್ಳಿ: ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ ಪರಿಕಲ್ಪನೆ ಸಕಾರಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಗ್ರಾಮಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ತಾಪಂ ಮಾಜಿ ಸದಸ್ಯ ಬೇವಿನಹಳ್ಳಿ ಸುದರ್ಶನ್ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬೇವಿನಹಳ್ಳಿ ಗ್ರಾಪಂ ಅವಧಿ ಪೂರ್ಣಗೊಳಿಸಿದ ಸದಸ್ಯರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಥಳಿಯ ಆಡಳಿತಕ್ಕೆ ಬಲ ತುಂಬಬೇಕೆಂಬ ಉದ್ದೇಶದಿಂದ ಶಾಸಕ ಟಿ.ಬಿ.ಜಯಚಂದ್ರ ಅವರು ತಾಲೂಕಿನಲ್ಲಿ 22 ಗ್ರಾಪಂಗಳಿಗೆ ನೂತನ ಕಟ್ಟಡ ನಿರ್ಮಾಣ ಮಾಡಿ ಹೊಸ ಸ್ವರೂಪ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಕಷ್ಟ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಮಾಡುವವನೇ, ನಿಜವಾದ ಜನ ಸೇವಕ ಎಂದರು.
ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯ ಬಿ.ಕೆ.ಮಂಜುನಾಥ್ ಮಾತನಾಡಿ, ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ನೋಡಿಕೊಂಡು, ಸ್ವಚ್ಛ ಗ್ರಾಮಗಳಾನ್ನಾಗಿ ಮಾಡಿರುವ ಕೀರ್ತಿ ಬೇವಿನಹಳ್ಳಿ ಗ್ರಾಪಂಗೆ ಸಲ್ಲುತ್ತದೆ ಎಂದರು.
ಪಿಡಿಒ ಡಿ.ವಿ.ವೆಂಕಟೇಶ್ ಮಾತನಾಡಿ, ಸದಸ್ಯರು ಹಾಗೂ ಅಧಿಕಾರಿಗಳ ಸ್ನೇಹ ಬಾಂಧವ್ಯ ಸ್ನೇಹಪೂರ್ವಕವಿದ್ದಾಗ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದರು.
ಸದಸ್ಯರಾದ ಶ್ರೀರಾಮ್, ಶ್ರೀರಾಮಯ್ಯ, ಶ್ರೀನಿವಾಸ್, ಜಿ.ಮಧು, ಬಿ.ಸಿ.ಕೃಷ್ಣಪ್ಪ, ಕವಿತಮ್ಮ, ಬಿ.ಎಲ್.ಜಗನ್ನಾಥ, ಕಾಂತಮ್ಮ, ರಾಮಕ್ಕ, ಮೂಡ್ಲೆಗೌಡ ಮಮತಾ, ಗೌರಮ್ಮ ಇದ್ದರು.