ಹುಲಿಕೆರೆ ಗ್ರಾಮದಲ್ಲಿ ಸಿದ್ಧ ಸಮಾಧಿ ಯೋಗ ಶಿಬಿರವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ತಾಪಂ ಇಒ ನರಸಪ್ಪ, ಯೋಗ ಸಾಧಕರಾದ ಎಚ್.ವಿ.ಸಜ್ಜನ್, ನರಸಿಂಹನಗಿರಿ ವೆಂಕಟೇಶ್, ಕಾವಲ್ಲಿ ಶಿವಪ್ಪನಾಯಕ, ಹುಡೇಂ ಪಾಪನಾಯಕ, ವಸಂತ ಸಜ್ಜನ್ ಇದ್ದರು. 
ರಾಜ್ಯ

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ

JAGADEESH KUMBAR

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸಲಹೆ
  • ಯೋಗ ಶಿಬಿರಕ್ಕೆ ಚಾಲನೆ
ಕಾನಹೊಸಹಳ್ಳಿ: ಧ್ಯಾನ, ಯೋಗಾಭ್ಯಾಸದ ಮೂಲಕ ಸ್ವಸ್ಥ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಹುಲಿಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಸಿದ್ಧ ಸಮಾಧಿ ಯೋಗ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಯುವಜನತೆ ಜೀವನದ ಮೌಲ್ಯ ಅರಿಯದೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.
ಎಲ್ಲರೂ ಆಹಾರ ಕ್ರಮ, ಸರಳ ಜೀವನ ಶೈಲಿ,  ಆರೋಗ್ಯ ರಕ್ಷಣೆಗೆ ಮಹತ್ವ ನೀಡಬೇಕಿದೆ ಎಂದರು. 
ಯೋಗಗುರು ರೇಣುಕಾ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಶಾಂತಿ ಕಂಡುಕೊಳ್ಳುವ ವೈಜ್ಞಾನಿಕ ಚಿಂತನೆಯ ಯೋಗಾಭ್ಯಾಸ ಸರ್ವರ ಜೀವನದಲ್ಲಿ ಬಹು ಮುಖ್ಯವಾಗಿದೆ ಎಂದರು. 
ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕ ಸೋಮಶೇಖರಪ್ಪ, ತಾಪಂ ಇಒ ನರಸಪ್ಪ, ಯೋಗ ಸಾಧಕರಾದ ಎಚ್.ವಿ.ಸಜ್ಜನ್, ನರಸಿಂಹನಗಿರಿ ವೆಂಕಟೇಶ್, ಕಾವಲ್ಲಿ ಶಿವಪ್ಪನಾಯಕ, ಹುಡೇಂ ಪಾಪನಾಯಕ, ವಸಂತಸಜ್ಜನ್, ಮಹೇಶ್ ಮೇಷ್ಟ್ರು, ಕಸ್ತೂರಮ್ಮ, ಶಿಕ್ಷಕಿ ವಿಮಲಾಕ್ಷಿ, ಕಾಮಾಕ್ಷಿ ಚಿದಾನಂದ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ್, ಮಲ್ಲಿಕಾರ್ಜುನ, ಅರವಿಂದ್ ಸಜ್ಜನ್, ಎನ್.ಜಿ.ರಮೇಶ್‌ಗೌಡ, ಬಿ.ಟಿ.ಗುದ್ದಿ ಅಜಯ್, ದಯಾನಂದ ಸಜ್ಜನ್, ಸಿದ್ದಾಪುರ ವೀರೇಶ್, ಡಾ.ಟಿ.ಓಂಕಾರಪ್ಪ, ದುರುಗೇಶ್, ಜಿ.ಎಂ.ಬಸಣ್ಣ, ಎಂ.ಗುರುಸಿದ್ದನಗೌಡ, ಪ್ರಸನ್ನಕುಮಾರ್ ಇತರರಿದ್ದರು.