ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಲು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪಾಂಡುರಂಗ ಧೋತ್ರೆ, ಡಾ.ಸುಭಾಸ ಪಾಟೀಲ ಇತರರಿದ್ದರು. 
ರಾಜ್ಯ

ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ

ಬೆಳಗಾವಿ: ಗಣೇಶೋತ್ಸವದಲ್ಲಿ ಪರಿಸರಕ್ಕೆ ಹಾನಿಯಾಗುವ ಪಿಒಪಿ ಮೂರ್ತಿಗಳ ಬಳಕೆ ನಿರ್ಬಂಧಿಸಿ, ಮಣ್ಣಿನ ಗಣಪತಿ ಬಳಕೆಗೆ ಜಿಲ್ಲಾಡಳಿತ ಜಾಗೃತಿ ಮೂಡಿಸಬೇಕು ಎಂದು ಬೆಳಗಾವಿ ಉತ್ತರ ವಲಯ ರೋಟರಿ ಕ್ಲಬ್ ಆಗ್ರಹಿಸಿದೆ.
ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದ್ದು, ಪಿಒಪಿ ಮೂರ್ತಿಗಳು ಕರಗದೆ ಜಲಮೂಲ ಕಲುಷಿತಗೊಳಿಸುತ್ತಿವೆ.
ರಾಸಾಯನಿಕ ಬಣ್ಣಗಳಿಂದ ಜಲಚರ ಮತ್ತು ಪರಿಸರಕ್ಕೂ ಹಾನಿ. ಆದರೆ, ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಆದ್ದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಪಾಂಡುರಂಗ ಧೋತ್ರೆ, ಡಾ.ಸುಭಾಸ ಪಾಟೀಲ, ದುರ್ಗೇಶ ಹರಿತಾಯ್, ಮಹಾಂತೇಶ ಪುರಾಣಿಕ, ಸೋಮಶೇಖರ ಸುತಾರ, ವಿಕ್ಕಿ ಸಿಂಗ್, ಮಂಗೇಶ ಕಂಟಕ್ ಇತರರಿದ್ದರು.