ಗುರುಮಠಕಲ್ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವುದು. ತಹಸೀಲ್ದಾರ್ ಚನ್ನಮಲಪ್ಪ ಂಟಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಉಪತಹಸೀಲ್ದಾರ್ ನರಸಿಂಹಸ್ವಾಮಿ ಇದ್ದರು
- ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ತಾಕೀತು
- ಜನಗಣತಿ ಕಾರ್ಯ ಚುರುಕುಗೊಳಿಸಿ
ಗುರುಮಠಕಲ್: ಗಣತಿದಾರರು ಹಾಗೂ ಮೇಲ್ವಿಚಾರಕರೊಂದಿಗೆ ಸಭೆ ನಡೆಸಿದ ಅವರು, ಜನಗಣತಿ ಕಾರ್ಯ ತ್ವರಿತಗೊಳಿಸುವುದರ ಜತೆಗೆ ನಿಖರ ಮಾಹಿತಿ ಸಂಗ್ರಹಣೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ತಾಕೀತು ಮಾಡಿದರು.
ನಂತರ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಜನಗಣತಿ ಕಾರ್ಯಗಳ ಪ್ರಗತಿ ಮತ್ತು ವಿವಿಧ ಕಾಮಗಾರಿಗಳ ಪ್ರಗತಿಯನ್ನು ನೇರವಾಗಿ ಪರಿಶೀಲಿಸಿದ ಅವರು, ಜನಗಣತಿ ಕಾರ್ಯವು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಯಾವುದೇ ಮಾಹಿತಿಯಲ್ಲಿ ತಪ್ಪುಗಳಾಗದಂತೆ ವಿಶೇಷ ಜಾಗೃತೆ ವಹಿಸಲು ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಇದೇ ವೇಳೆ ಸುತ್ತಮುತ್ತಲಿನ ಚಂಡ್ರಿಕಿ, ಕೇಶ್ವಾರ, ಪುಟಪಾಕ್ ಸೇರಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯೂ ನಡೆಯುತ್ತಿರುವ ಜನಗಣತಿ ಕಾರ್ಯದ ಸ್ಥಿತಿ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.
ಈ ವೇಳೆ ತಹಸೀಲ್ದಾರ್ ಚನ್ನಮಲಪ್ಪ ಂಟಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಉಪತಹಸೀಲ್ದಾರ್ ನರಸಿಂಹಸ್ವಾಮಿ, ಪುರಸಭೆ ಇಲಾಖೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಸುಂಗಳಕರ್, ದೊಡ್ಡ ಬಸವರಾಜ, ವೀರಭದ್ರಪ್ಪ ಇತರರಿದ್ದರು.