ಮೇ10ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ  
ರಾಜ್ಯ

ಮೇ10ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ; ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗಿ

ಪ್ರಮುಖ ಮುಖ್ಯಾಂಶಗಳು

  • ಮೇ10ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ
  • ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗಿ
  • ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮದಿನ

ಬೆಂಗಳೂರು:ಆರ್ಟ್ ಆಫ್ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ಗುರೂಜಿಯವರ 70ನೇಜನ್ಮದಿನದ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲು ಪ್ರಧಾನಿ ನರೇಂದ್ರಮೋದಿ ಮೇ 10ರಂದುಬೆಂಗಳೂರಿಗೆ ಆಗಮಿಸಲಿದ್ದಾರೆ.

ಆರ್ಟ್ಆಫ್ ಲಿವಿಂಗ್‌ನ 45ನೇವಾರ್ಷಿಕೋತ್ಸವದ ಸವಿನೆನಪಿಗಾಗಿನಿರ್ಮಿಸಿರುವ ಬೃಹತ್ ಧ್ಯಾನಮಂದಿರವನ್ನು ಪ್ರಧಾನಿ ಮೋದಿಅಂದು ಲೋಕಾರ್ಪಣೆಗೊಳಿಸಲಿದ್ದಾರೆ.

4 ಎಕರೆಪ್ರದೇಶದಲ್ಲಿ ಹರಡಿಕೊಂಡಿರುವಧ್ಯಾನ ಮಂದಿರವು ಸ್ತಂಭ-ರಹಿತವಿಶಾಲ ಜಾಗವನ್ನು ಹೊಂದಿದ್ದು,ಇತರ ಸಾಮಾನ್ಯಕಟ್ಟಡಗಳಿಗಿಂತ ಭಿನ್ನವಾದ ಮೇಲ್ಛಾವಣಿಯನ್ನು ಅಳವಡಿಸಲಾಗಿದೆ.ಏಕಕಾಲಕ್ಕೆಸುಮಾರು 2 ಲಕ್ಷಜನರು ಸುರಕ್ಷಿತವಾಗಿ ಕುಳಿತುಕೊಳ್ಳುವಂತೆವಿನ್ಯಾಸಗೊಳಿಸಲಾಗಿದೆ.ಸಾಂಪ್ರದಾಯಿಕಒಳಾಂಗಣ ವಿನ್ಯಾಸದ ಬದಲಾಗಿ,ನೈಸರ್ಗಿಕ ಮತ್ತುಸಂಸ್ಕರಿಸಿದ ಬಿದಿರನ್ನು ಬಳಸಿರುವುದುಧ್ಯಾನ ಮಂದಿರದ ವಿಶೇಷತೆ.

45ನೇವಾರ್ಷಿಕೋತ್ಸವ ಮತ್ತು ಶ್ರೀಶ್ರೀ ಗುರೂಜಿ ಜನ್ಮದಿನದಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವವಿವಿಧ ಕಾರ್ಯಕ್ರಮಗಳು ಮೇ 10ರಂದು ಪ್ರಾರಂಭವಾಗಿಮೇ 25 ರವರೆಗೆನಡೆಯಲಿವೆ.