ನರೇಂದ್ರ ಮೋದಿ ಅವರು ಅತಿ ಹೆಚ್ಚು ದಿನಗಳ ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಅವಿಸ್ಮರಣೀಯ ವಿಶಿಷ್ಟ ಗೌರವಕ್ಕೆ ಪಾತ್ರರಾದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಟಕದಿಂದ ನಗರದ ಮಹಾಲಕ್ಷಿ$್ಮ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು. ಮಹೇಶರೆಡ್ಡಿ ಮುದ್ನಾಳ್​, ಬಸವರಾಜಪ್ಪ ವಿಭೂತಿಹಳ್ಳಿ,ನಾಗರತ್ನ ಕುಪ್ಪಿ, ಡಾ.ಶರಣಭೂಪಾಲರಡ್ಡಿ ನಾಯ್ಕಲ್​, ಲಿಂಗಪ್ಪ ಹತ್ತಿಮನಿ, ಹಣಮಂತ ಇಟಗಿ, ವಿಲಾಸ್​ ಪಾಟೀಲ್​ ಇತರರಿದ್ದರು. 
ರಾಜ್ಯ

ಸಾಧನೆಗಳ ಹರಿಕಾರ ಪ್ರಧಾನಿ ಮೋದಿ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಬಣ್ಣನೆ
  • ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
ಯಾದಗಿರಿ: ಇಂದು ನಾವು ಕೇವಲ ಒಬ್ಬ ವ್ಯಕ್ತಿಯ ಸಾಧನೆ ಸ್ಮರಿಸುತ್ತಿಲ್ಲ, ದೇಶದ ಅಭಿವೃದ್ಧಿ, ಸುಶಾಸನ, ರಾಷ್ಟ್ರೀಯ ಭದ್ರತೆ, ಬಡವರ ಕಲ್ಯಾಣ ಹಾಗೂ ಭಾರತದ ಜಾಗತಿಕ ಪ್ರತಿಷ್ಠೆಯನ್ನು ಎತ್ತರಕ್ಕೆ ಕೊಂಡೊಯ್ದ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ್​ ಹೇಳಿದರು.
ನರೇಂದ್ರ ಮೋದಿ ಅವರು ಅತಿ ಹೆಚ್ಚು ದಿನಗಳ ಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಿಸ್ಮರಣೀಯ ವಿಶಿಷ್ಟ ಗೌರವಕ್ಕೆ ಪಾತ್ರರಾದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಟಕದಿಂದ ನಗರದ ಮಹಾಲಕ್ಷಿ$್ಮ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 12 ವರ್ಷಗಳಲ್ಲಿ ದೇಶ ಮೂಲಸೌಕರ್ಯ, ಡಿಜಿಟಲ್​ ಪರಿವರ್ತನೆ, ರೈತರ ಕಲ್ಯಾಣ, ಮಹಿಳಾ ಸಬಲೀಕರಣ, ಯುವಜನರ ಅವಕಾಶ ಹಾಗೂ ಸಾಮಾಜಿಕ ನ್ಯಾಯ ೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​, ಸಬ್​ ಕಾ ವಿಶ್ವಾಸ್​, ಸಬ್​ ಕಾ ಪ್ರಯಾಸ್​ ಎಂಬ ಧ್ಯೇಯದೊಂದಿಗೆ ದೇಶವನ್ನು ಮುನ್ನಡೆಸುತ್ತಿರುವ ಹಲವು ಸಾಧನೆಗಳ ಹರಿಕಾರನ ನಾಯಕತ್ವಕ್ಕೆ ನಾವೆಲ್ಲರೂ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಈ ವಿಶೇಷ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುವುದೇನೆಂದರೆ, ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶ ಸೇವೆಯನ್ನು ಇನ್ನಷ್ಟು ಯಶಸ್ವಿಯಾಗಿ ಮುಂದುವರಿಸುವ ಶಕ್ತಿ ಕರುಣಿಸಲಿ ಎಂದು ಜಿಲ್ಲಾ ಬಿಜೆಪಿ ಟಕದಿಂದ ಪ್ರಾರ್ಥಿಸುತ್ತಿದ್ದೇವೆ. ಅಲ್ಲದೆ ನಾವೆಲ್ಲರೂ ರಾಷ್ಟ್ರದ ಅಭಿವೃದ್ಧಿ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಶ್ರಮಿಸೋಣ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯ ಬಸವರಾಜಪ್ಪ ವಿಭೂತಿಹಳ್ಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೇಳೆ ಮಾಡಿರುವ ಸಾಧನೆ ಇಡೀ ದೇಶಕ್ಕೆ ಮಾದರಿ. ಅವರೊಬ್ಬ ವಿಶ್ವ ಮೆಚ್ಚಿದ ಜನನಾಯಕ ಎಂದು ಬಣ್ಣಿಸಿದರು.
ಈ ವೇಳೆ ಬಿಜೆಪಿ ಹಿರಿಯ ಮುಖಂಡರಾದ ನಾಗರತ್ನ ಕುಪ್ಪಿ, ಸಿದ್ದಣ್ಣ ಗೌಡ ಮೊಳ್ಳಳ್ಳಿ, ಡಾ.ಶರಣಭೂಪಾಲರಡ್ಡಿ ನಾಯ್ಕಲ್​, ವೆಂಕಟರೆಡ್ಡಿ ಅಬ್ಬೆತುಮಕೂರ್​, ಪರಶುರಾಮ ಕುರುಕುಂದಿ, ಲಿಂಗಪ್ಪ ಹತ್ತಿಮನಿ, ಖಂಡಪ್ಪ ದಾಸನ ಜಿಲ್ಲಾ ಬಿಜೆಪಿ ವಕ್ತಾರ ಹಣಮಂತ ಇಟಗಿ, ವಿಲಾಸ್​ ಪಾಟೀಲ್​, ಸ್ವಾಮಿದೇವ ದಾಸನಕೇರಿ, ಮಲ್ಲಿಕಾರ್ಜುನ್