Prime Minister launches railway project 
ರಾಜ್ಯ

ರೈಲ್ವೆ ಯೋಜನೆಗೆ ಪ್ರಧಾನಿಯಿಂದ ಚಾಲನೆ

ತುಮಕೂರು ಡೆಸ್ಕ್
ಮಧುಗಿರಿ :ತುಮಕೂರು& ರಾಯದುರ್ಗ ರೈಲ್ವೆ ಯೋಜನೆಯನ್ನು ಮುಂದಿನ 2027ರ ಡಿಸೆಂಬರ್​ ವೇಳೆಗೆ ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಪಟ್ಟಣದ ಕಸಬಾ ವ್ಯಾಪ್ತಿಯ ಪಾಳ್ಯದಹಳ್ಳಿ ಬಳಿ ಶನಿವಾರ 24 ಎಕರೆ ಪ್ರದೇಶದಲ್ಲಿ ನೂತನ ರೈಲ್ವೆ ನಿಲ್ದಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರೈಲ್ವೆ ಯೋಜನೆಗಳು ಅಭಿವೃದ್ಧಿಯ ಸಂಕೇತ. ಪ್ರಧಾನಿ ಮೋದಿ ರೈಲ್ವೆ ಯೋಜನೆಗಳಿಗೆ ಹೆಚ್ವಿನ ಒತ್ತು ನೀಡಿದ್ದು, 2.23 ಲಕ್ಷ ಕೋಟಿ ರೂ. ರೈಲ್ವೆಗೆ ನೀಡಿದ್ದಾರೆ.
24 ಎಕರೆಯಷ್ಟು ಪ್ರದೇಶವನ್ನು ಯಾವುದೇ ತಾಲೂಕಿನಲ್ಲಿ ರೈಲ್ವೆಗೆ ನೀಡಿದ ಉದಾಹರಣೆ ಇಲ್ಲ. ಆದರೆ, ಮಧುಗಿರಿ ಕ್ಷೇತ್ರದಲ್ಲಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಕೆ.ಎನ್​.ರಾಜಣ್ಣ ಅವರು ರೈಲ್ವೆ ನಿಲ್ದಾಣಕ್ಕೆ ಭೂಮಿ ನೀಡಿದ್ದು, ಈ ಪ್ರದೇಶದಲ್ಲಿ ದೊಡ್ಡ ರ್ಟಮಿನಲ್​, ಗೂಡ್ಸ್​ ಪ್ಯಾಕೇಜಿಂಗ್​ ಇನ್ನಿತರ ಯೋಜನೆಗಳನ್ನು ಕೈಗೊಂಡು 2027 ಡಿಸೆಂಬರ್​ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗೆ ಚಾಲನೆ ನೀಡಲಿದ್ದು, 680 ಕೋಟಿ ರೂ. ವೆಚ್ಚದಲ್ಲಿ, ಶಿರಾ&-ಬೈರೇನಹಳ್ಳಿ ಹೈವೇ ಕಾಮಗಾರಿಗೆ ಚಾಲನೆ ದೊರೆಯಲಿದೆ. 2 ವರ್ಷದೊಳಗೆ ಮಧುಗಿರಿಗೆ ಮತ್ತೊಂದು ಬೈಪಾಸ್​ ನೀಡಲಿದ್ದು, ಮುಂದಿನ ದಿನಗಳಲ್ಲಿ ಮಧುಗಿರಿಯ ಚಿತ್ರಣವನ್ನೇ ಬದಲಾಯಿಸುತ್ತೇವೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 3 ಕಿ.ಮೀಮಧುಗಿರಿ ಪಟ್ಟಣದೊಳಗೆ ಬೈಪಾಸ್​ ಹಾದು ಹೋಗಲಿದ್ದು, ಇದಕ್ಕೆ 40 ಕೋಟಿ ರೂ. ಮಂಜೂರು ಮಾಡಲಾಗಿದೆ.
ರಾಜಣ್ಣ ಕೆಲ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದ್ದು, ಮಧುಗಿರಿಗೆ ಬಂಪರ್​ ಹೊಡೆದಿದೆ.ಕ್ಷೇತ್ರದ ಕಾಮಗಾರಿಗಳಿಗೆ ಇನ್ನೂ 200 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದ ಕೇಂದ್ರ ಸಚಿವರು, ಬಳ್ಳಾರಿಯಿಂದ ಬೆಂಗಳೂರಿಗೆ ಇದೇ ಮಾರ್ಗವಾಗಿ ವಂದೇ ಭಾರತ್​ ರೈಲು ಹರಿಸುವ ಚಿಂತನೆ ಇದೆಎಂದರು.
ಪುರಸಭೆ ಮಾಜಿ ಅಧ್ಯಕ್ಷರಾದ ಲಾಲಾಪೇಟೆ ಮಂಜುನಾಥ್​, ಎಂ.ಕೆ. ನಂಜುಂಡಯ್ಯ, ಎನ್​.ಗಂಗಣ್ಣ, ಮುಖಂಡರಾದ ಎಂ.ಜಿ.ಶ್ರೀನಿವಾಸ್​ ಮೂರ್ತಿ, ಎಲ್​.ಸಿ.ನಾಗರಾಜು, ಹನುಮಂತರೆಡ್ಡಿ, ಲಕ್ಷಿ$್ಮಪತಿ, ತುಂಗೋಟಿ ರಾಮಣ್ಣ, ಕೆ.ಎಸ್​.ಪಾಂಡುರಂಗಾರೆಡ್ಡಿ, ತಾಲೂಕು ಜೆಡಿಎಸ್​ ಅಧ್ಯಕ್ಷ ಶ್ರೀನಿವಾಸ್​, ಗುತ್ತಿಗೆದಾರರ ರಾಜಗೋಪಾಲ್​, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್​ ಲಕ್ಷಿ$್ಮಕಾಂತ್​, ರೈಲ್ವೆ ಇಲಾಖೆ ಇಂಜಿನಿಯರ್​ ಪ್ರಸಾದ್​ ಇತರರಿದ್ದರು.