ಬೆಲೆ ಹಿಗ್ಗಿಸದ ಹೀರೆಕಾಯಿ watermelon 
ರಾಜ್ಯ

ಬೆಲೆ ಹಿಗ್ಗಿಸದ ಹೀರೆಕಾಯಿ watermelon

ಪ್ರಮುಖ ಮುಖ್ಯಾಂಶಗಳು

  • ಹಾಕಿದ ಬಂಡವಾಳವೂ ಕೈ ಸೇರದೆ ನಷ್ಟ
  • ಮಾರುಕಟ್ಟೆ ಸಾಗಣೆಗೂ ಧಕ್ಕದ ದರ
ಬೂದಿಕೋಟೆ: ಹೀರೆಕಾಯಿ ಬೆಳೆಗೆ ಸರಿಯಾದ ಬೆಲೆ ಇಲ್ಲದೆ ರೈತರು ಕಂಗಾಲಾಗುವ ಪರಿಸ್ಥಿತಿ ನಿಮಾರ್ಣವಾಗಿದೆ. ಬೆಳೆದ ಬೆಳೆಯನ್ನೂ ಮಾರುಕಟ್ಟೆಗೆ ಸಾಗಿಸಿದರೂ ಸಹ ವಾಹನ ಬಾಡಿಗೆಯೂ ಧಕ್ಕದೆ ನಷ್ಟ ಅನುಭವಿಸುವಂತಾಗಿದೆ.
ಬೆಳೆಗಳಿಗೆ ಅಗತ್ಯವಿರುವ ಗೊಬ್ಬರ, ಬಿತ್ತನೆ ಬೀಜ, ಟ್ರೈನ್​ ದಾರಾ ಸೇರಿದಂತೆ ಎಲ್ಲ ಬೆಲೆ ಏರಿಕೆ ಆಗಿದ್ದು, ಇವುಗಳ ನಡುವೆಯೂ ರೈತ ಬೆಳೆ ಬೆಳೆಯಲು ಮುಂದಾಗುತ್ತಿದ್ದಾನೆ. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ಇರುವುದರಿಂದ 70 ಕೆಜಿ ಮೂಟೆ 500 ರೂ.ಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಸಾಗಿಸಲು ಟೆಂಪೋ ಅಗತ್ಯವಿದ್ದು, ಜತೆಗೆ ತೋಟಗಳಲ್ಲಿ ಹೀರೇಕಾಯಿ ಬಿಡಿಸಲು ಕೂಲಿ ಕಾರ್ಮಿಕರು ಬೇಕಾಗುತ್ತದೆ. ಇವೆಲ್ಲವನ್ನೂ ಅವಲೋಕಿಸಿದರೆ ಹಾಕಿದ ಬಂಡವಾಳವೂ ಬರದಂತಾಗಿದೆ.watermelon
ಕೋತಿಗಳ ಕಾಟ: ಅನೇಕ ವರ್ಷಗಳಿಂದ ಕೋತಿಗಳು ಬಿಟ್ಟು ಬಿಡದೆ ರೈತರ ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡಿ ಹೋಗುತ್ತಿವೆ. ಇವುಗಳ ಮಧ್ಯೆ ರೈತರು ನಿತ್ಯ ಕಾಯಕ ಮಾಡಬೇಕಾಗಿದೆ.
ರೈತ ತಾನು ಸಂಕಷ್ಟದಲ್ಲಿದ್ದರೂ ಬೆಳೆ ಮಾಡದೆ ಕೂರಬಾರದು ಎಂಬ ಉದ್ದೇಶದಿಂದ ಸಾಲ ಮಾಡಿ ಬೆಳೆ ಬೆಳೆಯುತ್ತಾರೆ. ಆದರೆ ಅವುಗಳಿಗೆ ಸರಿಯಾದ ಬೆಲೆ ಸಿಗದೇ ಇರುವುದರಿಂದ ರೈತರು ನಷ್ಟಕ್ಕೆ ಸಿಲುಕುವಂತಾಗಿದೆ.
"

ಎರಡು ಎಕರೆ ಬೆಳೆ ಮಾಡಲು ಸುಮಾರು ಎರಡುವರೆ ಲಕ್ಷ ರೂ. ಖರ್ಚು ಮಾಡಿದ್ದೇನೆ. ತಮಿಳುನಾಡಿನ ಕೃಷ್ಣಗಿರಿ ಮಾರುಕಟ್ಟೆಗೆ ಸಾಗಿಸುತ್ತಿದ್ದೇವೆ. ಆದರೆ, ಅದನ್ನು ಸಾಗಿಸುವ ಬಾಡಿಗೆ ಕೂಡ ನಮಗೆ ಬರುತ್ತಿಲ್ಲ.