ಧಾರ್ಮಿಕ ಪರಂಪೆರ ಉಳಿಸುವುದು ಹೆಮ್ಮೆಯ ವಿಷಯ religious traditions
ಮಾಸ್ತಿ: ಕರ್ನಾಟಕ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ತಪೋವನ ಪ್ರದೇಶವಾದ ಮೋಹಿನಿ ಬೆಟ್ಟದಲ್ಲಿ ಧಾರ್ಮಿಕತೆಯ ಪರಂಪರೆ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶಬರಿಮಲೆ ಮಾಜಿ ಮೇಲ್ತಂತ್ರಿ ಬ್ರಹ್ಮರ್ಷಿ ಜಯರಾಮನ್ ನಂಬೋದರಿ ಹೇಳಿದರು.religious traditions
ಮಾಲೂರು ತಾಲೂಕು ತುರುಣಿಸಿ ಗ್ರಾಮದ ಹಾಗೂ ತಮಿಳುನಾಡು ಗಡಿಭಾಗದ ಚನ್ನಸಂದ್ರಂ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಶ್ರೀ ಮೋಹಿನಿ ಬೆಟ್ಟದಲ್ಲಿ ಅಯ್ಯಪ್ಪಸ್ವಾಮಿ ನೂತನ ದೇವಾಲಯ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೇರಳ ರಾಜ್ಯದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಂತೆ ಇಲ್ಲಿಯೂ ದೇವಸ್ಥಾನ ನಿರ್ಮಾಣ ಮಾಡಿದರೆ ಭಕ್ತರಿಗೆ ಶ್ರದ್ಧಾ ಕೇಂದ್ರವಾಗುತ್ತದೆ. ನಿಷ್ಕಲ್ಮಷ ಹಾಗೂ ಶುಷ್ಕ ವಾತವರಣದಲ್ಲಿರುವ ಈ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡುತ್ತಿರುವುದು, ಕರ್ನಾಟಕ ಅಲ್ಲದೆ ಇತರೆ ರಾಜ್ಯಗಳ ಭಕ್ತರಿಗೆ ಅನುಕೂಲವಾಗುತ್ತದೆ ಎಂದರು. ಜಿಪಂ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ಮಡಿವಾಳ ಚಂದ್ರು, ಅಗ್ರಿ ನಾರಾಯಣಪ್ಪ, ಶ್ರೀನಿವಾಸ್, ರಮೇಶ ಇದ್ದರು.