ಗುಳೇದಗುಡ್ಡ ಮುರುಘಾಮಠದ ಕುಮಾರೇಶ್ವರ ಕಲ್ಯಾಣಮಂಟಪದಲ್ಲಿ ಗುಳೇದಗುಡ್ಡ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಶನಿವಾರ ರೇಣುಕಾಚಾರ್ಯ, ಬಸವೇಶ್ವರ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ತಾಲೂಕು ಮಟ್ಟದ ಜಯಂತ್ಯುತ್ಸವ ಉದ್ಘಾಟಿಸಲಾಯಿತು. ಒಪ್ಪತ್ತೇಶ್ವರ ಸ್ವಾಮೀಜಿ, ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಹನಮಂತ ಮಾವಿನಮರದ ಇತರರಿದ್ದರು. 
ರಾಜ್ಯ

ಜಂಗಮ ಪರಂಪರೆ ಉಳಿಸಿ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿಕೆ
  • ರೇಣುಕಾಚಾರ್ಯರ ಜಯಂತ್ಯುತ್ಸವ
ಗುಳೇದಗುಡ್ಡ: ಜಂಗಮರಿಗೆ ಸಮಾಜದಲ್ಲಿ ಅತ್ಯುನ್ನತ ಸ್ಥಾನವಿದೆ. ನಮ್ಮ ಸಂಪ್ರದಾಯ, ಸಂಸ್ಕೃತಿ ಕಾಪಾಡಿ, ಬೆಳೆಸಿಕೊಂಡು ಬರುವಲ್ಲಿ ಜಂಗಮ ಸಮಾಜ ತನ್ನದೇ ಆದ ಮಹತ್ವಹೊಂದಿದೆ ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಮುರುಘಾಮಠದ ಕುಮಾರೇಶ್ವರ ಕಲ್ಯಾಣಮಂಟಪದಲ್ಲಿ ಗುಳೇದಗುಡ್ಡ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ, ಬಸವೇಶ್ವರ ಹಾಗೂ ಹಾನಗಲ್‌ಕುಮಾರ ಶಿವಯೋಗಿಗಳ ತಾಲೂಕು ಮಟ್ಟದ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಉಳಿಸಿಕೊಂಡರೆ ಮಾತ್ರ ನಮ್ಮ ಸಮಾಜ, ಧರ್ಮ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಜೊತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ರೇಣುಕಾಚಾರ್ಯರು ಹಾಕಿಕೊಟ್ಟ ಭಕ್ತಿ ಮಾರ್ಗ ನಮಗೆಲ್ಲ ಮಾರ್ಗದರ್ಶನವಾಗಿದೆ. ಸಾಮರಸ್ಯ ಜೀವನಕ್ಕೆ ಎಲ್ಲರೂ ಒಟ್ಟಾಗಿ, ಸಮಾನತೆಯಿಂದ ಇರಬೇಕು ಎಂಬ ತತ್ವ ಬೋಧಿಸಿದ ರೇಣುಕಾಚಾರ್ಯರು ಸಮಾಜದಲ್ಲಿ ಸಮಾನತೆ ತಂದವರು ಎಂದರು.
ಮುರುಘಾ ಮಠದ ಕಾಶೀನಾಥ ಮಹಾಸ್ವಾಮಿಗಳು ಮಾತನಾಡಿ, ವೀರಶೈವ ಲಿಂಗಾಯತರು ಒಮ್ಮೆ ಲಿಂಗಧಾರಣೆ ಮಾಡಿದ ಮೇಲೆ ಜಾತಿ ರಹಿತ, ವರ್ಗ ರಹಿತ, ವರ್ಣ ರಹಿತವಾಗುತ್ತಾನೆ. ವೀರಶೈವ ಲಿಂಗಾಯತ ತತ್ವಪ್ರಧಾನವಾಗಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಶಿವಯೋಗ ಮಂದಿರದ ಧರ್ಮದರ್ಶಿ ಎಂ.ಬಿ. ಹಂಗರಗಿ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ, ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು, ಟೆಂಗಿನಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನ ಶಿಕ್ಷಕ ಸಂಗಯ್ಯ ಗಣಾಚಾರಿ ಉಪನ್ಯಾಸ ನೀಡಿದರು.
ಸಂಸ್ಥೆಯ ಅಧ್ಯಕ್ಷ ಶಿವಾನಂದ ಮಳಿಮಠ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ ಸರಗಣಾಚಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ವಿಶ್ವನಾಥ ಹಿರೇಮಠ, ಉಮೇಶ ಶಿವನಗೌಡರ, ಪ್ರಭು ತಟ್ಟಿಮಠ, ಸಂಗಯ್ಯ ಗವಿಮಠ, ಶಿವಕುಮಾರ ಸಾವಳಗಿಮಠ, ಪಡದಯ್ಯ ಕಕ್ಕಯ್ಯನಮಠ, ಜಗದೀಶ ಕಾರುಡಗಿಮಠ, ಸಿದ್ದು ಸಂಕಿನಮಠ, ರಾಚಯ್ಯ ಸ್ಥಾವರಮಠ, ವಿ.ಬಿ. ಹಿರೇಮಠ, ನಿಜಗುಣಯ್ಯ ಹಿರೇಮಠ, ಮಲ್ಲಯ್ಯ ಭಂಡಾರಿ, ಬಂಡಯ್ಯ ಹಿರೇಮಠ, ಚನಬಸಯ್ಯ ಸಿಂದಗಿಮಠ, ಈರಯ್ಯ ಚನ್ನಸಂಗಯ್ಯನಮಠ ಸೇರಿ ಸಮಾಜಬಾಂಧವರು ಉಪಸ್ಥಿತರಿದ್ದರು.
ಜ್ಞಾನಸಿಂಧು ಕಲಾಬಳಗದ ಶಂಕರ ಮುಂದಿನಮನಿ, ಚಿದಾನಂದಸಾ ಕಟವಾ ಹಾಗೂ ಬಸವರಾಜ ಸಿಂದಗಿಮಠ ಅವರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು.