ಹುಮನಾಬಾದ್​ ತಾಲೂಕಿನ ಚಿತ್ತಕೋಟಾದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ ಹಾಗೂ ವಿಚಾರಗೋಷ್ಠಿಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜುಕುಮಾರ ಅತ್ತಿವಾಳೆ ಉದ್ಘಾಟಿಸಿದರು. ಶ್ರೀಕಾಂತ ಸೂಗಿ, ಶಿವರಾಜ್​ ಮೇತ್ರಿ, ಸಂಜುಕುಮಾರ್​ ಪಾಟೀಲ್​, ದೇವೇಂದ್ರಪ್ಪ ಪೋಲಾ, ವೀರಣ್ಣ ಪೂಜಾರಿ, ರೇವಣಸಿದ್ದಪ್ಪ ಪಾಟೀಲ್​, ಸಂತೋಷ ಡಾಗೆ ಇತರರಿದ್ದರು. 
ರಾಜ್ಯ

ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿ

ಪ್ರಮುಖ ಮುಖ್ಯಾಂಶಗಳು

  • ಡಾ.ಸಂಜುಕುಮಾರ ಅತ್ತಿವಾಳೆ ಕರೆ
  • ಚಿತ್ತಕೋಟಾದಲ್ಲಿ ವಿಚಾರಗೋಷ್ಠಿ
ಹುಮನಾಬಾದ್​: ಜಾನಪದ ಸಂಸ್ಕೃತಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದು, ಎಲ್ಲ ಪರಂಪರೆಗಳಿಗೆ ಜನಪದ ಸಂಸ್ಕೃತಿಯೇ ಮೂಲವಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜುಕುಮಾರ ಅತ್ತಿವಾಳೆ ಹೇಳಿದರು.
ಚಿತ್ತಕೋಟಾ ಗ್ರಾಮದಲ್ಲಿ ಮಂಗಳವಾರ ದಿ.ಶೆಂಕ್ರಪ್ಪ ಡಾಗೆ ಸಾಂಸ್ಕೃತಿಕ ಟ್ರಸ್ಟ್​ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ 2025-26ನೇ ಸಾಲಿನ ಯೋಜನೆಯಡಿ ಜಾನಪದ ಸಂಭ್ರಮ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಶ್ರೀಕಾಂತ ಸೂಗಿ ಮಾತನಾಡಿ, ಜಾನಪದ ಕಲೆ ಮಾನವನ ಸರ್ವಾಂಗೀಣ ಏಳಿಗೆಗೆ ಪೂರಕವಾಗಿದ್ದು, ನೈತಿಕ, ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಚಿತ್ತಕೋಟಾದಂತಹ ಪುಟ್ಟ ಗ್ರಾಮದಲ್ಲಿ ಇಂತಹ ಅಪೂರ್ವ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ಟ್ರಸ್ಟ್​ ಅಧ್ಯಕ್ಷ ಸಂತೋಷ ಡಾಗೆ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ಶಿವರಾಜ್​ ಮೇತ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಂಜುಕುಮಾರ ಪಾಟೀಲ್​, ಪ್ರಮುಖರಾದ ದೇವೇಂದ್ರಪ್ಪ ಪೋಲಾ, ವೀರಣ್ಣ ಪೂಜಾರಿ, ರೇವಣಸಿದ್ದಪ್ಪ ಪೊಲೀಸ್​ ಪಾಟೀಲ್​, ಬಸವರಾಜ್​ ಮಾಲಿ ಬಿರಾದಾರ್​, ಸಿದ್ದಯ್ಯ ಸ್ವಾಮಿ, ಭೀಮಶ ಕೋರಿ, ಮಾಜಿ ಸೈನಿಕ ಪರಮೇಶ್ವರ ಡಾಗೆ ಇತರರಿದ್ದರು. ಲಕ್ಷ್ಮಣ ಕಾಂಬಳೆ ಸ್ವಾಗತಿಸಿದರು. ನಾಗೇಶ್​ ಹೇರೂರು ನಿರೂಪಣೆ ಮಾಡಿದರು. ಕಲಾವಿದರಾದ ಮಂಜುನಾಥ ಜಲಸಂಗಿ, ಅಂಜನಾಭಾಯಿ, ರಾಮಚಂದ್ರ ಪರಶುರಾಮಜಿ ಹಾಗೂ ಸಿದ್ದಲಿಂಗ ಅವರ ಭಜನಾ ತಂಡ ಪ್ರಸ್ತುತಪಡಿಸಿದ ಜಾನಪದ ಹಾಗೂ ಭಜನಾ ಹಾಡುಗಳು ಗಮನ ಸೆಳೆದವು.