ಪಂಡಿತ್ ಶೇಷಾದ್ರಿ ಗವಾಯಿ ಸಂಗೀತೋತ್ಸವದಲ್ಲಿ ಗಾಯಕಿ ಸಂಗೀತಾ ಕಟ್ಟಿಯವರಿಗೆ ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಕರುಣೇಶ್ವರ ಸ್ವಾಮೀಜಿ, ಪಂ.ಸತೀಶ್ ಹಂಪಿಹೊಳಿ, ಭಾರತಿದೇವಿ, ನಾಗೇಂದ್ರ ರಾಣಾಪೂರ್ ಮತ್ತಿತರರಿದ್ದರು.  
ರಾಜ್ಯ

ಸಂಗೀತಾ ಕಟ್ಟಿಗೆ ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ಸಂಗೀತಾ ಕಟ್ಟಿಗೆ ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ ಪ್ರದಾನ
  • ಪಂಡಿತ್ ಶೇಷಾದ್ರಿ ಗವಾಯಿ ಸಂಗೀತೋತ್ಸವ ಕಾರ್ಯಕ್ರಮ
  • ಶ್ರೀ ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆ ಆಯೋಜನೆ

ಬೆಂಗಳೂರು: ಶ್ರೀಗುರುಕುಮಾರ ಪಂಚಾಕ್ಷರೇಶ್ವರಸಂಗೀತ ಕಲಾ ವೇದಿಕೆ ವತಿಯಿಂದಕನ್ನಡ ಸಾಹಿತ್ಯ ಪರಿಷತ್ ನಲ್ಲಿಹಮ್ಮಿಕೊಂಡಿದ್ದ ಪಂಡಿತ್ ಶೇಷಾದ್ರಿಗವಾಯಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿಗಾಯಕಿ ಸಂಗೀತಾ ಕಟ್ಟಿಯವರಿಗೆಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿಪ್ರದಾನ ಮಾಡಲಾಯಿತು.

ಕಾರ್ಯಕ್ರಮದಸಾನಿಧ್ಯ ವಹಿಸಿ ಮಾತನಾಡಿದನಿಡಗುಂದ ನಂದೀಶ್ವರ ಮಠದ ಶ್ರೀಕರುಣೇಶ್ವರ ಸ್ವಾಮೀಜಿ,ವೇದ ಮತ್ತು ನಾದಮನುಷ್ಯನ ಎರಡು ಕಣ್ಣುಗಳಿದ್ದಂತೆ.ಸಂಗೀತ ಮತ್ತಿತರಯಾವುದೇ ವಿದ್ಯೆ ದಾನ ಮಾಡಿದಷ್ಟುಬೆಳೆಯುತ್ತದೆ.ಸಂಗೀತ ವಿದ್ಯೆಮೂಲಕ ಸಮಾಜಕ್ಕೆ ಒಂದು ಉತ್ತಮಕೊಡುಗೆ ನೀಡುವ ಕಾರ್ಯವನ್ನುಸಂಗೀತ ಕಲಾ ವೇದಿಕೆ ಮಾಡುತ್ತಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿಹಿರಿಯ ಪತ್ರಕರ್ತ ಸುದರ್ಶನಚೆನ್ನಂಗಿಹಳ್ಳಿ,ಪಂಡಿತ್ ಸತೀಶ್ಹಂಪಿಹೊಳಿ,ಪಂಡಿತ್ ಬಸವರಾಜರಾಜಗುರು ಅವರ ಪತ್ನಿ ಭಾರತಿದೇವಿ,ಕಲಾವೇದಿಕೆಯಅಧ್ಯಕ್ಷರಾದ ವಿದ್ವಾನ್ ನಾಗೇಂದ್ರರಾಣಾಪೂರ್ ಉಪಸ್ಥಿತರಿದ್ದರು.ಇದೇ ವೇಳೆ ವಿದುಷಿಪೂರ್ಣ ಆಚಾರ್ಯ ಮತ್ತು ತಂಡದಿಂದಕಥಕ್ ನೃತ್ಯ ಪ್ರದರ್ಶನ ನಡೆಯಿತು.ನಂತರ ವಿದುಷಿಸಂಗೀತಾ ಕಟ್ಟಿ ಸಂಗೀತ ಕಚೇರಿನಡೆಸಿಕೊಟ್ಟರು.ಪಂಡಿತ್ ರಾಜೇಂದ್ರನಾಕೋಡ್. ಪಂಡಿತ್ಸತೀಶ್ ಕೊಳ್ಳಿ.ಪುನೀತ್ ರಾಣಾಪೂರ್.ಭೀಮಾಶಂಕರ್ಹೇಮನೂರು, ವಿನೀತ್ರಾಣಾಪೂರ್, ಆಕಾಶ್ಅರ್ಕಿ ವಾದ್ಯ ಸಹಕಾರ ನೀಡಿದರು.