ಹುಮನಾಬಾದ್ ತಾಲೂಕಿನ ಮುಗನೂರ ಗ್ರಾಮದ ರೈತರ ಜಮೀನಿಗೆ ಭಾನುವಾರ ಅಧಿಕಾರಿಗಳ ತಂಡದೊಂದಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭೇಟಿ ನೀಡಿ ಬೆಳೆಗಳ ಸ್ಥಿತಿ ಪರಿಶೀಲಿಸಿದರು. ತಹಸೀಲ್ದಾರ್ ಜಗದೀಶ ಚೌರ್, ಕೃಷಿ ಎಡಿ ಶರಣಕುಮಾರ ಕಲ್ಯಾಣಿ, ಬಸವರಾಜ ಆರ್ಯ ಇತರರಿದ್ದರು.
- ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸೂಚನೆ
- ಮುಗನೂರ ರೈತರ ಜಮೀನಿಗೆ ಭೇಟಿ
ಹುಮನಾಬಾದ್: ಬರ ಮತ್ತು ಮಳೆಯ ಕೊರತೆಯಿಂದ ಬೆಳೆ ಹಾನಿಯ ಕುರಿತು ನಿಖರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸೂಚಿಸಿದರು.
ತಾಲೂಕಿನ ಮುಗನೂರ ಮತ್ತು ನಮದಾಪುರ ಗ್ರಾಮಗಳ ರೈತರ ಜಮೀನುಗಳಿಗೆ ಭಾನುವಾರ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಭೇಟಿ ನೀಡಿ ಹೆಸರು, ಉದ್ದು, ತೊಗರಿ ಮತ್ತು ಸೋಯಾಬಿನ್ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.
ಬರ ಮತ್ತು ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿರುವ ಬಗ್ಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿದರು. ರೈತರಿಗೆ ಸರ್ಕಾರದ ಸೌಲಭ್ಯಗಳು ತ್ವರಿತವಾಗಿ ದೊರೆಯಬೇಕು. ಬೆಳೆ ಹಾನಿಯ ಪ್ರಮಾಣವನ್ನು ಪಾರದರ್ಶಕವಾಗಿ ದಾಖಲಿಸಿ ಪರಿಹಾರ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ರ್ನಿಲಕ್ಷ$್ಯವಹಿಸಬಾರದು ಎಂದು ನಿರ್ದೇಶನ ನೀಡಿದರು.
ತಹಸೀಲ್ದಾರ್ ಜಗದೀಶ ಚೌರ್, ಕೃಷಿ ಸಹಾಯಕ ನಿರ್ದೇಶಕ ಶರಣಕುಮಾರ ಕಲ್ಯಾಣಿ, ತೋಟಗಾರಿಕೆ ಸಹಾಯಕ ಪ್ರಭಾರಿ ನಿರ್ದೇಶಕ ಜಸ್ಟಿನ್, ಪಕ್ಷದ ಮುಖಂಡರಾದ ಬಸವರಾಜ ಆರ್ಯ, ಮಲ್ಲಿಕಾರ್ಜುನ ಸಿಗಿ, ಗೋಪಾಲಕೃಷ್ಣ ಮೋಹಳೆ, ಶಿವರಾಜ ರಾಜೋಳೆ, ವಿನಾಯಕ, ಅರುಣಕುಮಾರ ಮಾಶೆಟ್ಟಿ, ಪ್ರಕಾಶ ಮುಗನೂರ, ನಾಗೇಶ ಮದಕಟ್ಟಿ, ವಿದ್ಯಾಸಾಗರ ಡಾಕುಳಗಿ, ಪ್ರಕಾಶ ಮಾಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.