ನಗರದಾದ್ಯಂತ ಗುರು ಪೂರ್ಣಿಮೆಗೆ ಸಿದ್ಧತೆ; ದತ್ತ, ಸಾಯಿ ಮಂದಿರಗಳಲ್ಲಿ ವಿಶೇಷ ಪೂಜೆ 
ರಾಜ್ಯ

ನಗರದಾದ್ಯಂತ ಗುರು ಪೂರ್ಣಿಮೆಗೆ ಸಿದ್ಧತೆ; ದತ್ತ, ಸಾಯಿ ಮಂದಿರಗಳಲ್ಲಿ ವಿಶೇಷ ಪೂಜೆ

ಪ್ರಮುಖ ಮುಖ್ಯಾಂಶಗಳು

  • ನಗರದಾದ್ಯಂತ ಗುರು ಪೂರ್ಣಿಮೆಗೆ ಸಿದ್ಧತೆ
  • ದತ್ತ, ಸಾಯಿ ಮಂದಿರಗಳಲ್ಲಿ ವಿಶೇಷ ಪೂಜೆ
  • ಭಕ್ತರಿಗೆ ದರ್ಶನ ಮತ್ತು ಪ್ರಸಾದ ವಿತರಣೆಗೆ ವ್ಯವಸ್ಥೆ

ಬೆಂಗಳೂರು: ಆಷಾಡಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಎಂದು ಕರೆಯಲಾಗುತ್ತದೆ.ಬುಧವಾರ ನಗರದಾದ್ಯಂತಗುರುಪೂರ್ಣಿಮೆ ಆಚರಣೆಗೆ ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ.

ಗುರುಪೂರ್ಣಿಮೆಯಂದು ತ್ರಿಮೂರ್ತಿಸ್ವರೂಪ ದತ್ತಾತ್ರೆಯ,ದತ್ತಾವತಾರಿಎಂದೇ ನಂಬಲಾಗಿರುವ ಸಾಯಿ ಮಂದಿರಹಾಗೂ ಗುರುಪರಂಪರೆಯ ಮೂಲವಾಗಿರುವಅನಾದಿ ಜಗದ್ಗುರು ಶ್ರೀಸದಾಶಿವನನ್ನುದಕ್ಷಿಣಾಮೂರ್ತಿ ಸ್ವರೂಪದಲ್ಲಿಪೂಜಿಸಲಾಗುತ್ತದೆ.ದೇವಾಲಯಗಳಲ್ಲಿವಿಶೇಷ ಪೂಜೆ ಹಾಗೂ ವಿವಿಧಕಾರ್ಯಕ್ರಮಗಳು ನಡೆಯುತ್ತವೆ.ಹಾಗೂ ವೈಷ್ಣವಸಂಪ್ರದಾಯದ ಸನ್ಯಾಸಿಗಳುಚಾತುರ್ಮಾಸ್ಯ ಆರಂಭಿಸುವುದರಿಂದವಿವಿಧ ಮಠಗಳಲ್ಲಿ ಚಾತುರ್ಮಾಸ್ಯವ್ರತ ಕೈಗೊಳ್ಳುವ ಗುರುಗಳ ಪಾದಪೂಜೆಕೂಡಾ ನಡೆಯಲಿದೆ.

ಅನಾದಿ ಜಗದ್ಗುರು ಸದಾಶಿವ ಹಾಗೂ ಆದಿ ಜಗದ್ಗುರು ಪಂಚಾಚಾರ್ಯರು

ಮಲ್ಲೇಶ್ವರದಲ್ಲಿರುವಪ್ರಸಿದ್ಧ ದತ್ತಾತ್ರೇಯ ದೇವಾಲಯದಲ್ಲಿಬುಧವಾರ ಬೆಳಗ್ಗಿನಿಂದಲೇದತ್ತದೇವರಿಗೆ ವಿಶೇಷ ಅಭಿಷೇಕ,ಅಲಂಕಾರ ಮತ್ತುಪೂಜೆ ನೆರವೇರಿಸಿ ಭಕ್ತರಿಗೆದರ್ಶನಕ್ಕೆ ಅವಕಾಶ ನೀಡಲಾಗಿದೆ.ವಿದ್ಯಾರಣ್ಯಪುರದತಿಂಡ್ಲು ಗ್ರಾಮದಲ್ಲಿರುವ 108ಸಾಯಿಬಾಬಾಮಂದಿರದಲ್ಲಿ ಗುರುಪೂರ್ಣಿಮೆಹಿನ್ನೆಲೆಯಲ್ಲಿ ಬಾಬಾ ಮೂರ್ತಿಗೆವಿಶೇಷ ಅಭಿಷೇಕ ಹಾಗೂ ಅಲಂಕಾರಮಾಡಿ ಪೂಜೆ ಸಲ್ಲಿಸಲಾಗುತ್ತದೆ.ವಿಶೇಷವಾಗಿ 108ಅಮೃತಶಿಲೆಯಸಾಯಿಬಾಬ ಜೊತೆಗೆ ದತ್ತಾತ್ರೆಯ,ಭಗವಾನ್ ಬುದ್ದ,ಆದಿ ಶಂಕರಾಚಾರ್ಯರಮೂರ್ತಿಗಳಿದ್ದು,ದೇವಾಲಯದಲ್ಲಿಬಾಬಾ ಮೂರ್ತಿಗೆ ಭಕ್ತರು ಸ್ವತಃಅಭಿಷೇಕ ಮಾಡಲು ಅವಕಾಶ ಒದಗಿಸಲಾಗಿದೆ.

ಮಲ್ಲೇಶ್ವರದ13ನೇಕ್ರಾಸ್ ಬಳಿ ಇರುವ ಸಾಯಿಬಾಬಾಮಂದಿರದಲ್ಲಿ ಪ್ರಾತಃಕಾಲದಿಂದಲೇವಿಶೇಷ ಪೂಜೆ ಹಾಗೂ ಭಕ್ತರಿಗೆದರ್ಶನ ಮತ್ತು ಪ್ರಸಾದ ವಿತರಣೆಗೆವ್ಯವಸ್ಥೆ ಕಲ್ಪಿಸಲಾಗಿದೆ.ಹೊಸಕೆರೆಹಳ್ಳಿಯಲ್ಲಿರುವಪ್ರಸಿದ್ಧ ದತ್ತಾತ್ರೆಯ ದೇವಾಲಯದಲ್ಲಿಗುರುಪೂರ್ಣಿಮೆ ಅಂಗವಾಗಿ ತ್ರಿಮೂರ್ತಿಸ್ವರೂಪನಿಗೆ ವಿಶೇಷ ಪೂಜೆಹಮ್ಮಿಕೊಳ್ಳಲಾಗಿದೆ.

ತ್ಯಾಗರಾಜನಗರದಲ್ಲಿರುವಶ್ರೀಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿಗುರು ಪೂರ್ಣಿಮಾ ಮಹೋತ್ಸವವನ್ನುದಿವ್ಯೋತ್ಸವ ಎಂಬ ಹೆಸರಿನಲ್ಲಿಆಚರಿಸಲಾಗುತ್ತದೆ.ವಿಶೇಷ ವ್ಯಾಸಮಂಡಲವನ್ನುರಚಿಸಿ, ಶ್ರೀಕೃಷ್ಣ,ಮಹರ್ಷಿ ವೇದವ್ಯಾಸರು,ದಕ್ಷಿಣಾಮೂರ್ತಿ,ಆದಿ ಶಂಕರಾಚಾರ್ಯರು,ಶಿರಡಿ ಸಾಯಿಬಾಬಾಹಾಗೂ ಅವರ ಶಿಷ್ಯ ಪರಂಪರೆಯಗುರುಗಳಿಗೆ ವಿಶೇಷ ಪೂಜೆಸಲ್ಲಿಸಲಾಗುತ್ತದೆ.

ಶಂಕರಪುರಂನಲ್ಲಿರುವಶಂಕರಮಠದಲ್ಲಿ ಆದಿಶಂಕರಾಚಾರ್ಯರಮಂದಿರದಲ್ಲಿ ವಿಶೇಷ ಪೂಜೆನೆರವೇರಲಿದ್ದು,ನಗರದ ಮತ್ತಿತರಮಠ-ಮಂದಿರಗಳಲ್ಲಿಗುರುಪೂರ್ಣಿಮೆ ಅಂಗವಾಗಿ ವಿವಿಧಧಾರ್ಮಿಕ ಆಚರಣೆಗಳು ನಡೆಯಲಿವೆ.

ಗುರುಪೂರ್ಣಿಮೆಅಂಗವಾಗಿ ಶ್ರೀಶೈಲ ಮಲ್ಲಿಕಾರ್ಜುನಸಮಾಜೋತ್ಥಾನ ೌಂಡೇಶನ್ ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿಬೆಳಗ್ಗೆ 7.30 ರಿಂದಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರಇಷ್ಟಲಿಂಗ ಮಹಾಪೂಜೆ ನಡೆಯಲಿದೆ.ಸಂಜೆ 6ಕ್ಕೆನಡೆಯಲಿರುವ ಆಧ್ಯಾತ್ಮಿಕ ಆಶೀರ್ವಚನಸಮಾರಂಭದ ನಂತರ ಜಗದ್ಗುರುಗಳಪಾದಪೂಜೆ ವೈಭವದಿಂದ ಜರುಗಲಿದೆ.ಸುವರ್ಣ ಕಿರೀಟಧರಿಸಿ ಭಕ್ತಾದಿಗಳಿಗೆ ಗುರುಗಳುಆಶೀರ್ವದಿಸಲಿದ್ದಾರೆ.ರಾಜಾಜಿನಗರದಎಸ್‌ಜೆಆರ್ ವೃತ್ತದಲ್ಲಿರುವಶ್ರೀಜಗದ್ಗುರು ರೇಣುಕಾಚಾರ್ಯರಕಂಚಿನ ಮೂರ್ತಿಗೆ ಗುರು ಪೂರ್ಣಿಮೆಹಿನ್ನೆಲೆಯಲ್ಲಿ ಶ್ರೀಜಗದ್ಗುರುಪಂಚಾಚಾರ್ಯ ಯಾತ್ರಾ ಸಮಿತಿಯಿಂದ ಸಂಜೆ 5ಕ್ಕೆಮಾಲಾರ್ಪಣೆ ಮಾಡಿ ಪೂಜೆಹಮ್ಮಿಕೊಳ್ಳಲಾಗಿದೆ.ಬೇಲಿಮಠದಶ್ರೀಶಿವರುದ್ರ ಸ್ವಾಮೀಜಿಮಾಲಾರ್ಪಣೆ ಮಾಡಲಿದ್ದಾರೆ.