ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ Pregnant women
ಪಾತಪಾಳ್ಯ: ಪೌಷ್ಟಿಕಾಂಶಯುಕ್ತ ತರಕಾರಿ, ಸೊಪು$್ಪ, ಮೊಳಕೆ ಕಾಳನ್ನು ಉಪಯೋಗಿಸುವ ಮೂಲಕ ತಾಯಿ&ಮಗುವಿನ ಆರೋಗ್ಯ ಉತ್ತಮ ಪಡಿಸಬಹುದು ಎಂದು ವೈದ್ಯಾಧಿಕಾರಿ ಡಾ.ಶಿರಿಶ್ಕಶ್ಯಪ್ ತಿಳಿಸಿದರು.
ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಸುರಕ್ಷಿತ ಮಾತೃತ್ವ ಅಭಿಯಾನದಡಿ ತಾಯಿ ಕಾರ್ಡ್ ವಿತರಿಸಿ ಮಾತನಾಡಿದರು. Pregnant women
ಮಗುವಿಗೆ 6 ತಿಂಗಳವರೆಗೆ ಕಡ್ಡಾಯವಾಗಿ ಎದೆ ಹಾಲು ಉಣಿಸಬೇಕು. ಬಾಣಂತಿಯರು ಪ್ರೋಟಿನ್, ಖನಿಜಾಂಶವುಳ್ಳ ಆಹಾರ ಪದಾರ್ಥವನ್ನು ಉಪಯೋಗಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸಮಯದಲ್ಲಿ 108 ವ್ಯವಸ್ಥೆ ಇರುತ್ತದೆ. ಪ್ರತಿ ತಿಂಗಳು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮವಿದ್ದು, ಎಲ್ಲ ಗರ್ಭಿಣಿಯರಿಗೆ ಸೌಲಭ್ಯಗಳು ದೊರೆಯುತ್ತವೆ. ಜತೆಗೆ ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ನಗು&ಮಗು ಮುಂತಾದ ಸೌಲಭ್ಯಗಳು ದೊರಕುತ್ತವೆ. ಬಿಪಿಎಸ್ ಕಾರ್ಡ್ ಇದ್ದಲ್ಲಿ ಹಲವು ಸೌಲಭ್ಯಗಳು ಉಚಿತವಾಗಿ ಸಿಗಲಿವೆ ಎಂದರು.
ಪ್ರಾಥಮಿಕ ಆರೋಗ್ಯ ಸುರಾಧಿಕಾರಿ ಪಿ.ವಿ.ಶ್ಯಾಮಲಾ ಮಾತನಾಡಿ, ತಾಯಿ&ಮಗುವಿನ ಮರಣ ತಪ್ಪಿಸಲು 18 ವರ್ಷಕ್ಕಿಂತ ಮುಂಚೆ, ರಕ್ತ ಸಂಬಂಧದಲ್ಲಿ ವಿವಾಹ ಮಾಡಬಾರದು. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದರಿಂದ ಪೌಷ್ಟಿಕ ಆಹಾರ ಕೊರತೆ ಇರುತ್ತದೆ. ಇದರಿಂದ ಹೆರಿಗೆ ಸಮಯದಲ್ಲಿ ತೊಂದರೆಯಾಗುತ್ತದೆ. ಮಗುವಿನ ಬೆಳವಣಿಗೆ ಉತ್ತಮವಾಗಿರುವುದಿಲ್ಲ. ಇದರಿಂದ ತಾಯಿ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದರು.