Precautions are needed for malaria. 
ರಾಜ್ಯ

ಮಲೇರಿಯಾ ರೋಗಕ್ಕೆ ಮುನ್ನೆಚ್ಚರಿಕೆ ಅಗತ್ಯ

ಬರಗೂರು: ಮನೆಗಳ ಸುತ್ತಮುತ್ತ ನಿಂತ ನೀರಿನಿಂದ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲಿದ್ದು, ಮುಂದೆ ಇದರಿಂದ ಮಲೇರಿಯಾದಂತಹ ರೋಗ ಬರುವ ಸಾಧ್ಯತೆ ಇದೆ ಎಂದು ದ್ವಾರನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತಿಮ್ಮರಾಜು ಹೇಳಿದರು.
ಶಿರಾ ತಾಲೂಕಿನ ದ್ವಾರನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಮಾತನಾಡಿ, ನೀರು ನಿಲ್ಲುವಂತಹ ತೆಂಗಿನ ಚಿಪ್ಪು, ಟೈಯರ್​, ತೊಟ್ಟಿ ಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣದಿಂದ ರೋಗ ಹರಡದಂತೆ ತಡೆಯಲು ಸಾಧ್ಯ. ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಮುತ್ತ ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ರೋಗಮುಕ್ತ ಗ್ರಾಮ ಮಾಡುವ ಸಂಕಲ್ಪ ಎಲ್ಲರ ಜವಾಬ್ದಾರಿಯಾಗಬೇಕು ಎಂದರು.
ನಿವೃತ್ತ ಶಿಕ್ಷಕ ಸಾಹಿತಿ ಡಾ. ದ್ವಾರನ ಕುಂಟೆ ಲಕ್ಷ್ಮಣ್​ ಮಾತನಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಆರ್​.ರತ್ನಮ್ಮ, ಕಾಳಿದಾಸ ಪ್ರೌಢಶಾಲೆಯ ಶಿಕ್ಷಕರಾದ ಮಹಲಿಂಗಪ್ಪ, ಚಿಕ್ಕನಾಗಪ್ಪ, ದೇವರಾಜು, ಪದ್ಮಾ, ಲೋಕೇಶ್​, ಮಾಲಾ, ಆರೋಗ್ಯ ಇಲಾಖೆಯ ರಘು, ನಿರಂಜನ್​, ವಿಜಯಲಕ್ಷಿ$್ಮ, ರೋಜಾ ಮತ್ತಿತರರು ಇದ್ದರು.