ಬೇತಮಂಗಲದ New year ವಿಜಯೇಂದ್ರಸ್ವಾಮಿ ದೇಗುಲದಲ್ಲಿ ಶಾಸಕಿ ರೂಪಕಲಾ ಅವರು ಪೂಜೆ ಸಲ್ಲಿಸಿದರು.
- ಶಾಸಕಿ ರೂಪಕಲಾ ಹೇಳಿಕೆ
- ಬೇತಮಂಗಲ ವಿಜಯೇಂದ್ರಸ್ವಾಮಿ ದೇಗುಲದಲ್ಲಿ ಪೂಜೆ
ಬೇತಮಂಗಲ: ಕಳೆದ ಹಲವು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು New year ಅಭಿವೃದ್ಧಿ ಕಾರ್ಯ ಮಾಡಲಾಗಿದೆಯಾದರೂ ಕ್ಷೇತ್ರದ ಜನರಿಗೆ ನೀಡಲಾಗಿರುವ ಭರವಸೆ ಹಾಗೂ ಬೇಡಿಕೆಗಳನ್ನು ಇನ್ನೂ ಈಡೇರಿಸಬೇಕಿದೆ. ಅಂತಹ ಪ್ರಯತ್ನಗಳಿಗೆ 2026ರಲ್ಲಿ ಫಲ ನೀಡಲೆಂದು ಪ್ರಾರ್ಥನೆ ಸಲ್ಲಿಸಿರುವುದಾಗಿಶಾಸಕಿ ರೂಪಕಲಾ ತಿಳಿಸಿದರು.
ಬೇತಮಂಗಲದ ಶ್ರೀ ಪ್ರಸನ್ನ ವಿಜಯೇಂದ್ರಸ್ವಾಮಿ ದೇವಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ನೂತನ ವರ್ಷಾಚರಣೆಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇತಮಂಗಲ ವಿಜಯೇಂದ್ರಸ್ವಾಮಿಯಲ್ಲಿ ವಿಶೇಷ ಶಕ್ತಿ ಇದೆ.ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಮಾನಸಿಕ ನೆಮ್ಮದಿ, ಶಾಂತಿ ಸಿಗುತ್ತದೆ. ಇದು ನನಗೆ ಸ್ವಂತ ಅನುಭವ ಆಗಿದೆ.ಈ ವರ್ಷ ಕ್ಷೇತ್ರದ ರೈತರು, ಮಹಿಳೆಯರು, ಕಾರ್ಮಿಕರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ವಾತಾವರಣ ದೇವರು ಕಲ್ಪಿಸಬೇಕು ಎಂದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕಿ, ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಟ್ಟವರು ಪ್ರತಿಫಲ ಕೇಳುವುದು ತಪ್ಪಲ್ಲ. ಆದರೆ, ಒಬ್ಬ ವ್ಯಕ್ತಿ ಉತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿರುವಾಗ ಪದೇಪದೆ ಅದೇ ವಿಷಯ ಚರ್ಚೆ ಮಾಡುವುದು ತಪ್ಪು. ಹೊಸ ವರ್ಷದಲ್ಲಿ ಮಂತ್ರಿ ಆಗುವ ಕುರಿತು ಪ್ರತಿಕ್ರಿಯಿಸಿದ ಅವರು ಸಂದರ್ಭ ಬಂದರೆ ಆಗುತ್ತದೆ, ಪ್ರಾಮಾಣಿಕ ಕೆಲಸ ನಮ್ಮನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುತ್ತವೆ. ಯಾವುದೇ ಹುದ್ದೆ, ಅಧಿಕಾರ ನಮಗೆ ಅರ್ಹತೆ ಇದ್ದರೆ ಸಿಗುತ್ತದೆ ಎಂಬುದು ನನ್ನ ನಂಬಿಕೆ ಎಂದರು.
ಜಿಪಂ ಮಾಜಿ ಸದಸ್ಯ ಅ.ಮು. ಲಕ್ಷ್ಮೀನಾರಾಯಣ ಮಾತನಾಡಿ, ವಿಜಯೇಂದ್ರ ಸ್ವಾಮಿಯನ್ನು ನಂಬಿದ ನಮಗೆಎಲ್ಲ ರೀತಿಯಲ್ಲೂ ಅಭಿವೃದ್ಧಿ ಆಗಿದೆ. ವಿಜಯೇಂದ್ರ ನಮ್ಮ ಕುಟುಂಬ ಮಾತ್ರ ಅಲ್ಲ, ಈ ಭಾಗದಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದೆ. ಹಾಗಾಗಿ ಪ್ರತಿ ವರ್ಷ ವಿಜೃಂಭಣೆಯಿಂದ ಪೂಜಿಸಲಾಗುತ್ತಿದೆ ಎಂದರು.
ಸ್ವಾಮಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಪೂಜೆ ಸಹಿತ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು ಶಾಸಕಿ ರೂಪಕಲಾ ಅವರು ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿದರು.
ಲಲಿತಮ್ಮ ಅಮು ಲಕ್ಷಿ$್ಮನಾರಾಯಣ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ಪದ್ಮನಾಭ ರೆಡ್ಡಿ, ಕೆಜಿಎಫ್ ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲ್ ಗೌಡ ಇದ್ದರು.